ಮೊನಾಲಿಸಾ ಭೋಸ್ಲೆ ಪತಿ ಫರ್ಮಾನ್ ಖಾನ್ ಮೇಲಿರುವ ಪೋಕ್ಸೊ ಪ್ರಕರಣ
- ಮೊನಾಲಿಸಾ ಭೋಸ್ಲೆ ಪತಿ ಫರ್ಮಾನ್ ಖಾನ್ ಮೇಲಿರುವ ಪೋಕ್ಸೊ ಪ್ರಕರಣ
- ಕುಂಭಮೇಳದಲ್ಲಿ ಮಣಿಸರ ಮಾರುತ್ತಾ ಖ್ಯಾತಿಗಳಿಸಿದ್ದ ಮೊನಾಲಿಸಾ
- ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾದ ಆರೋಪ
- ನೀವು ಕೇರಳದಲ್ಲಿ ಇರುವ ಕಾರಣಕ್ಕೆ ಜೀವಂತವಾಗಿದ್ದಿರಿ ಎಂದ ಹೈಕೋರ್ಟ್ ನ್ಯಾಯಪೀಠ
ಮಧ್ಯಪ್ರದೇಶ: ಕುಂಭಮೇಳದಲ್ಲಿ ಮಣಿಸರ, ರುದ್ರಾಕ್ಷಿಗಳನ್ನು ಮಾರಾಟ ಮಾಡುವ ಮೂಲಕ ವೈರಲ್ ಆಗಿದ್ದ, ಮೊನಾಲಿಸಾ ಭೋಸ್ಲೆ (Monalisa Bhosle), ಇತ್ತೀಚೆಗೆ ಫರ್ಮಾನ್ ಖಾನ್ ಎನ್ನುವವನನ್ನು ಮದುವೆಯಾಗುವ ಮೂಲಕ ಮತ್ತೆ ಚರ್ಚೆಯ ವಿಷಯವಾಗಿದ್ದಾಳೆ.
ಮಂಗಳವಾರ (ಜೂನ್.2) ಮೊನಾಲಿಸಾಳ ಪತಿ ಫರ್ಮಾನ್ ಮೇಲೆ ಹೊರಿಸಲಾಗಿರುವ ಬಾಲ್ಯವಿವಾಹ ಹಾಗೂ ಅಪಹರಣ ಪ್ರಕರಣಕ್ಕೆ ಮಧ್ಯಂತರ ಜಾಮೀನು ಕೋರಿ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಧ್ಯಪ್ರದೇಶ ಹೈಕೋರ್ಟ್ (MPHighCourt on Monalisa Bhosle) ನಡೆಸಿತು.
ಕೇರಳದಲ್ಲಿದ್ದು ಜೀವಂತವಾಗಿದ್ದಿರಿ!
ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ನ್ಯಾಯಮೂರ್ತಿ ಕೌಸರ್ ಎಡಪ್ಪಗತ್, ಅನ್ಯ ಧರ್ಮೀಯನನ್ನು ಮದುವೆಯಾದ ಹಿನ್ನಲೆ ನಿಮಗೆ ಮಧ್ಯಪ್ರದೇಶದ ಜನರಿಂದ ಬೆದರಿಕೆ ಬರುತ್ತಿದೆ ಎಂದು ತಿಳಿಸಿದ್ದಿರಿ, ಹಾಗಾಗಿ ನೀವು ಕೇರಳದಲ್ಲಿರುವುದು ನಿಮ್ಮ ಅದೃಷ್ಟ ಎಂದು ಭಾವಿಸಬಹುದೆಂದು ಹೇಳಿದ್ದಾರೆ.
ಆಗ ಮೊನಾಲಿಸಾ, ಫರ್ಮಾನ್ ದಂಪತಿಗಳ ಪರ ವಕೀಲ, ಹೌದು ಸರ್, ನನ್ನ ಕಕ್ಷಿದಾರರು ಕೇರಳದಲ್ಲಿರುವ ಕಾರಣದಿಂದ ಇಂದು ಜೀವಂತವಾಗಿದ್ದಾರೆಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಬುಧವಾರ (ಜೂ.3) ನಡೆಸಲಿದ್ದು, ಅಂದು ತೀರ್ಮಾನ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೊನಾಲಿಸಾ ಮೇಜರ್ ಅಲ್ಲ; ಮೈನರ್
ಈ ವೈರಲ್ ಹುಡುಗಿ ಮೊನಾಲಿಸಾ ಪಾರ್ಡಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, NCST ತನಿಖೆಯಲ್ಲಿ ಈಕೆ ಅಪ್ರಾಪ್ತಳೆಂದು ತಿಳಿದು ಬಂದಿದೆ. ಮದುವೆ ಸಮಯದಲ್ಲಿ ಮೊನಾಲಿಸಾ ಸುಳ್ಳು ಜನನ ಪ್ರಮಾಣಪತ್ರವನ್ನು ನೀಡಿದ್ದಾಳೆ. ಆಕೆ ಜನಿಸಿದ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯು ಮೊನಾಲಿಸಾ ಡಿಸೆಂಬರ್ 30, 2009 ರಂದು ಸಂಜೆ 5:50 ಕ್ಕೆ ಜನಿಸಿದ್ದಾಳೆ ಎಂದು ತಿಳಿಸಿದೆ.
ಆದ್ದರಿಂದ ಮೊನಾಲಿಸಾ ಮದುವೆಯಾದಾಗ ಆಕೆಯ ವಯಸ್ಸು ಕೇವಲ 16 ವರ್ಷ, 2 ತಿಂಗಳು ಮತ್ತು 12 ದಿನಗಳಾಗಿದ್ದು, ಈಗ ಈ ಮದುವೆ ಕಾನೂನು ಬದ್ಧವಾಗುತ್ತದೆಯೇ? ಇಲ್ಲವೇ ಎಂದು ತನಿಖೆ ನಂತರ ತಿಳಿದು ಬರಬೇಕಿದೆ. ಹೀಗಾಗಿ ಆಕೆಯ ಪತಿ ಫರ್ಮಾನ್ ಮೇಲೆ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಪರಿಶಿಷ್ಟ ಪಂಗಡ ಎಫ್ಐಆರ್!
ಕುಂಭಮೇಳದಲ್ಲಿ ಮಣಿಸರ ಮಾರುವ ಮೂಲಕ ಖ್ಯಾತಿ ಗಳಿಸಿದ ಮೊನಾಲಿಸಾ ಮಾರ್ಚ್ 2026 ರಲ್ಲಿ ಉತ್ತರ ಪ್ರದೇಶದ ಫರ್ಮಾನ್ ಖಾನ್ ಎಂಬಾತನನ್ನು ಕೇರಳದಲ್ಲಿ ಮದುವೆಯಾಗುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾನಲ್ಲಿ ಸದ್ದು ಮಾಡಿದಳು.
ಆದರೆ ಮೊನಾಲಿಸಾ ಮದುವೆಯಾಗಲು ವಯಸ್ಕಳಾಗಿರಲಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ಮೊನಾಲಿಸಾ ಪತಿ ಫರ್ಮಾನ್ ಖಾನ್ ಮೇಲೆ ಪೋಕ್ಸೊ ಪ್ರಕರಣಲ್ಲಿ ಎಫ್ಐಆರ್ ದಾಖಲಿಸಿಕೊಂಡಿತ್ತು. ದೂರಿನಲ್ಲಿ ಮೊನಾಲಿಸಾ 2009, ಡಿಸೆಂಬರ್ 30 ರಂದು ಜನಿಸಿದ್ದು ಇಕೆ ಬಾಲ್ಯವಿವಾಹವಾಗಿದ್ದಾಳೆ ಎಂದು ನಮೂದಿಸಲಾಗಿದ್ದು, ಸದ್ಯ ಈ ಪ್ರಕರಣದ ವಿಚಾರಣೆಯನ್ನು ಮಧ್ಯಪ್ರದೇಶ ಹೈಕೋರ್ಟ್ ನಡೆಸುತ್ತಿದೆ, (ಏಜನ್ಸೀಸ್).