ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನಿಜುವೆಲಾ ಅಧ್ಯಕ್ಷ ಮಡುರೋ ಕುರಿತು ಮುಂದಿನ ಕ್ರಮಗಳ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಪ್ರಧಾನಿ ಮೋದಿ ಕುರಿತು ಮಾತನಾಡಿದ್ದು, ನಾನು ಸಂತೋಷವಾಗಿಲ್ಲ ಅನ್ನುವುದು ಅವರಿಗೆ ತಿಳಿದಿದೆ. ಪ್ರಧಾನಿ ಮೋದಿ ಒಳ್ಳೆಯ ವ್ಯಕ್ತಿ ಎಂದು ಹೊಗಳುತ್ತಲೇ ದೇಶದ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ರಂಪ್ ಪ್ರಧಾನ ಕಚೇರಿ ವೈಟ್ ಹೌಸ್ ಆಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತವು ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡಿದೆ. ನನ್ನನ್ನು ಮೆಚ್ಚಿಸಲು ಅವರು ಹಲವು ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಸಂತೋಷವಾಗಿಲ್ಕ ಅನ್ನುವುದು ಅವರಿಗೆ ತಿಳಿದಿತ್ತು. ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನನ್ನನ್ನು ಸಂತೋಷಪಡಿಸುವುದು ಬಹಳ ಮುಖ್ಯ. ಅವರು ರಷ್ಯಾದೊಂದಿಗೆ ವ್ಯವಹಾರ ಮುಂದುವರಿಸಿದರೆ. ನಾವು ಬೇಗನೆ ಸುಂಕವನ್ನು ಹೆಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಟ್ರಂಪ್, ರಷ್ಯಾದ ಆರ್ಥಿಕತೆ ಚೆನ್ನಾಗಿಲ್ಲ. ವೆನಿಜುವೆಲಾದ ಆರ್ಥಿಕತೆ ನಾನು ಕಂಡಂತೆ ಇದುವರೆಗಿನ ಅತ್ಯಂತ ಕೆಟ್ಟ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಅಮೆರಿಕ ಈ ಹಿಂದೆ ಭಾರತದ ಮೇಲೆ ಶೇ. 50 ರಷ್ಟು ಸುಂಕವನ್ನು ವಿಧಿಸಿದೆ. ಇದರಲ್ಲಿ ಶೇ. 25 ರಷ್ಟು ಸುಂಕವನ್ನು ರಷ್ಯಾದಿಂದ ತೈಲ ಖರೀದಿಸಿದ ಹಿನ್ನೆಲೆ ವಿಧಿಸಲಾಗಿದೆ. ಇನ್ನೂ ಅಮೆರಿಕಾ ಅತಿ ಹೆಚ್ಚು ಸುಂಕ ವಿಧಿಸಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಎರಡೂ ದೇಶಗಳ ನಡುವೆ ಸಂಬಂಧ ಹದಗೆಡದಂತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ನೋಡುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).