ಕುದುರೆ ಓಟದಲ್ಲಿ ಗೆದ್ದವರಿಗೆ ಬರೋಬ್ಬರಿ 15 ಲಕ್ಷದ ಥಾರ್‌!  WEB
ದೇಶ

ಕುದುರೆ ಓಟದಲ್ಲಿ ಗೆದ್ದವರಿಗೆ ಬರೋಬ್ಬರಿ 15 ಲಕ್ಷದ ಥಾರ್‌! ಫೈನಲ್‌ಗೆ ಲಗ್ಗೆ ಇಟ್ಟ 6 ಕುದುರೆಗಳು | Horse Race

ಮದುವೆ ಎಂದರೆ ಸಾಮಾನ್ಯವಾಗಿ ಅದ್ದೂರಿ ಅಲಂಕಾರ, ಭರ್ಜರಿ ಊಟ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಕಣ್ಣಿಗೆ ಬೀಳುತ್ತವೆ. ಆದರೆ ಬಿಹಾರದ ಶಾಸಕ ಅನಂತ್ ಸಿಂಗ್ ಪುತ್ರಿಯ ಮದುವೆಯಲ್ಲಿ ನಡೆದ ಕುದುರೆ ಓಟ ಮಾತ್ರ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಕುದುರೆ ಓಟದಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮಹೀಂದ್ರಾ ಥಾರ್‌ ಎಸ್‌ಯುವಿ ಈ ವಿಶೇಷ ಸ್ಪರ್ಧೆ ನೋಡಲು ಲಕ್ಷಾಂತರ ಜನರು ಹರಿದುಬಂದಿದ್ದು, ಜನಸಂದಣಿಯ ಕಾರಣಕ್ಕೆ ಅಂತಿಮ ಸುತ್ತನ್ನೇ ಮುಂದೂಡಲಾಗಿದೆ.Horse Race

ಪಾಟ್ನಾ: ಮದುವೆ ಎಂದರೆ ಸಾಮಾನ್ಯವಾಗಿ ಅದ್ದೂರಿ ಅಲಂಕಾರ, ಭರ್ಜರಿ ಊಟ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಕಣ್ಣಿಗೆ ಬೀಳುತ್ತವೆ. ಆದರೆ ಬಿಹಾರದ ಶಾಸಕ ಅನಂತ್ ಸಿಂಗ್ ಪುತ್ರಿಯ ಮದುವೆಯಲ್ಲಿ ನಡೆದ ಕುದುರೆ ಓಟ ಮಾತ್ರ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಕುದುರೆ ಓಟದಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮಹೀಂದ್ರಾ ಥಾರ್‌ ಎಸ್‌ಯುವಿ ಈ ವಿಶೇಷ ಸ್ಪರ್ಧೆ ನೋಡಲು ಲಕ್ಷಾಂತರ ಜನರು ಹರಿದುಬಂದಿದ್ದು, ಜನಸಂದಣಿಯ ಕಾರಣಕ್ಕೆ ಅಂತಿಮ ಸುತ್ತನ್ನೇ ಮುಂದೂಡಲಾಗಿದೆ.

ಫೈನಲ್‌ಗೆ ಆಯ್ಕೆಯಾದ ಆರು ಕುದುರೆಗಳು ಯಾವುವು?

ಬಿಹಾರದ ಮೊಕಾಮಾ ಸಮೀಪದ ಲಡ್ಮಾ ಗ್ರಾಮದಲ್ಲಿ ಮದುವೆ ಸಂಭ್ರಮದ ಭಾಗವಾಗಿ ಈ ಕುದುರೆ ರೇಸ್ ಆಯೋಜಿಸಲಾಗಿತ್ತು. ಈಗಾಗಲೇ ಹಲವು ಸುತ್ತುಗಳ ಸ್ಪರ್ಧೆ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆದಿದ್ದು, ಆರು ಕುದುರೆಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.

ಫೈನಲ್‌ಗೆ ಆಯ್ಕೆಯಾಗಿರುವ ಕುದುರೆಗಳ ಹೆಸರುಗಳೂ ವಿಶೇಷವಾಗಿವೆ. ಭೋಜ್‌ಪುರದ ಸಂಜಯ್ ಯಾದವ್ ಮಾಲೀಕತ್ವದ ಬಾಲಿ, ಸಿವಾಲ್‌ನ ಪ್ರವೀಣ್ ಠೇಕೇದಾರ್ ಅವರ ಪಂಚಕಲ್ಯಾಣ್, ಖಗಡಿಯಾದ ಪ್ರಿನ್ಸ್ ಯಾದವ್ ಅವರ ಉಸ್ಮಾನ್, ರಣವೀರ್ ಯಾದವ್ ಅವರ ಸಬ್ಜಾ, ರಾಮ್‌ಕುಮಾರ್ ಯಾದವ್ ಅವರ ರಾಜಾ ಹಾಗೂ ರಾಂಚಿಯ ಶೆರಾವತ್ ಅಲಿ ಅವರ ರಾಂಚಿ ಎಕ್ಸ್‌ಪ್ರೆಸ್ ಕುದುರೆಗಳು ಫೈನಲ್‌ನಲ್ಲಿ ಸೆಣಸಲಿವೆ.

ಈ ಆರು ಕುದುರೆಗಳ ನಡುವೆ ನಡೆಯಲಿರುವ ರೋಚಕ ಸ್ಪರ್ಧೆಯಲ್ಲಿ ಯಾವ ಕುದುರೆ ಗೆಲುವಿನ ಗುರಿ ಮುಟ್ಟಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ವಿಜೇತ ಕುದುರೆಯ ಮಾಲೀಕರಿಗೆ ಮಹೀಂದ್ರಾ ಥಾರ್ ಕಾರು ಬಹುಮಾನವಾಗಿ ಸಿಗಲಿದೆ.

3ರಿಂದ 4 ಲಕ್ಷ ಜನರ ಆಗಮನ, 5 ಕಿ.ಮೀ. ಟ್ರಾಫಿಕ್ ಜಾಮ್

ಗುರುವಾರ ನಡೆದ ಸ್ಪರ್ಧೆಯನ್ನು ವೀಕ್ಷಿಸಲು ನಿರೀಕ್ಷೆಗೂ ಮೀರಿದ ಜನಸಾಗರವೇ ಹರಿದುಬಂದಿತ್ತು. ಆಯೋಜಕರ ಪ್ರಕಾರ ಸುಮಾರು 3ರಿಂದ 4 ಲಕ್ಷ ಜನರು ಲಡ್ಮಾ ಗ್ರಾಮಕ್ಕೆ ಆಗಮಿಸಿದ್ದರು. ಇದರಿಂದ ವಾಹನ ಸಂಚಾರ ಹಾಗೂ ಜನಸಂದಣಿ ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಸುಮಾರು ಐದು ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವರು ಸ್ಪರ್ಧೆಯನ್ನು ಹತ್ತಿರದಿಂದ ವೀಕ್ಷಿಸಲು ಎತ್ತರದ ಗೋಪುರಗಳನ್ನೂ ಏರಿದ್ದರು. ಇದರಿಂದ ಅಪಾಯದ ಸಾಧ್ಯತೆಯೂ ಎದುರಾಗಿತ್ತು. ಜನಸಂದಣಿಯನ್ನು ನಿಯಂತ್ರಿಸುವುದು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಫೈನಲ್ ಪಂದ್ಯವನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾರೆ.

ಫೈನಲ್ ಯಾವಾಗ ನಡೆಯಲಿದೆ?

ಈ ಕುರಿತು ಶುಕ್ರವಾರ ಮಾತನಾಡಿರುವ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಜೈ ಸಿಂಗ್, ಸದ್ಯ ಮದುವೆಯ ಕಾರ್ಯಕ್ರಮಗಳಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದಾರೆ. ಮದುವೆ ಸಂಬಂಧಿತ ಕಾರ್ಯಕ್ರಮಗಳು ಮುಗಿದ ಬಳಿಕ ಅಂತಿಮ ಸುತ್ತಿನ ದಿನಾಂಕ ಮತ್ತು ವ್ಯವಸ್ಥೆಗಳ ಕುರಿತು ನಿರ್ಧಾರ ಕೈಗೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ಸ್ಪರ್ಧೆಯ ಮೇಲ್ವಿಚಾರಣೆಗಾಗಿ ಮೂವರು ತೀರ್ಪುಗಾರರನ್ನು ನೇಮಿಸಲಾಗಿದೆ. ಆರಾದ ಜೈಕುಮಾರ್ ಸಿಂಗ್, ಮುಜಫರ್‌ಪುರದ ಸೂರ್ಯ ಭಾಸ್ಕರ್ ರೈ ಮತ್ತು ವೈಶಾಲಿಯ ಪ್ರವೀಣ್ ಮುಖಿಯಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಒಟ್ಟಿನಲ್ಲಿ, ಮದುವೆಯ ಸಂಭ್ರಮಕ್ಕೆ ಕುದುರೆ ರೇಸ್ ಹೊಸ ಆಕರ್ಷಣೆ ತಂದಿದ್ದು, ಈಗ ಎಲ್ಲರ ಕಣ್ಣು ಆರು ಕುದುರೆಗಳ ಫೈನಲ್ ಸ್ಪರ್ಧೆಯ ಮೇಲಿದೆ. ಥಾರ್ ಕಾರಿನ ಕೀ ಯಾರ ಕೈ ಸೇರಲಿದೆ ಎಂಬುದನ್ನು ತಿಳಿಯಲು ಕುದುರೆ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.