ಬಾಲಿವುಡ್​ನ ಹಿರಿಯ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ 
ದೇಶ

ಮೌಲ್ವಿಗಳೇ ಈಗಲಾದರೂ ಮೌನ ಮುರಿಯಿರಿ: ತಾಲಿಬಾನ್‌ನ ಮಹಿಳಾ ವಿರೋಧಿ ಕಾನೂನು ಖಂಡಿಸಲು ಜಾವೇದ್ ಅಖ್ತರ್ ಕರೆ; ಏನಿದು ಹೊಸ ವಿವಾದ? Javed Akhtar

ಪ್ರಮುಖ ಮುಖ್ಯಾಂಶಗಳು

  • ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ನೂತನ ಕಾನೂನು ಜಾರಿ
  • ಕಾನೂನಿನಲ್ಲಿ ಹೆಂಡತಿಯನ್ನು ತಳಿಸಲು ಗಂಡನಿಗೆ ಫುಲ್​ ಪರ್ಮಿಶನ್​
  • ಈ ಕಾನೂನನ್ನು ಖಂಡಿಸಿರುವ ಬಾಲುವುಡ್​ನ ಗೀತ ರಚನಾಕಾರ ಜಾವೇದ್​ ಅಖ್ತರ್​
  • ಈ ಕಾನೂನನ್ನು ಖಂಡಿಸುವಂತೆ ಮೌಲ್ವಿಗಳಿಗೆ ಕರೆ
ಮುಂಬೈ: ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಹೊಸದಾಗಿ ಪರಿಚಯಿಸಲಾದ ದಂಡ ಸಂಹಿತೆಗೆ ಬಾಲಿವುಡ್​ನ ಹಿರಿಯ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ಖಂಡನೆ ವ್ಯಕ್ತ ಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಮನಬಂದಂತೆ ತಳಿಸಲು ಮತ್ತು ಪತಿಯ ಅನುಮತಿ ಇಲ್ಲದೆ ಪತ್ನಿ ಸಂಬಂಧಿಗಳ ಮನೆಗೆ ಹೋದರೆ ಜೈಲು ಶಿಕ್ಷೆಗೆ ಅರ್ಹ ಎನ್ನುವ ಕಾನೂನನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಈ ಕಾನೂನಿಗೆ ಪ್ರಪಂಚದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಈದೀಗ ಬಾಲಿವುಡ್​ನ ಗೀತರಚನೆಕಾರ ಜಾವೇದ್ ಅಖ್ತರ್ ಈ ಕಾನೂನಿನ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ಪತಿ, ಪತ್ನಿಯ ಮೂಳೆ ಮುರಿಯದಂತೆ ಹೊಡೆಯಬಹುದಂತೆ, ಗಂಡನ ಅನುಮತಿಯಿಲ್ಲದೆ ಹೆಂಡತಿ ತನ್ನ ಹೆತ್ತವರ ಮನೆಗೆ ಹೋದರೆ ಜೈಲಿಗೆ ಹಾಕಲಾಗುತ್ತದೆ ಎಂದು ಅಫ್ಘಾನಿಸ್ತಾನದಲ್ಲಿ ಕಾನೂನನ್ನು ರೂಪಿಸಲಾಗಿದೆ, ಈ ಕಾನೂನನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೆನೆ ಮತ್ತು ಭಾರತದಲ್ಲಿರುವ ಮೌಲ್ವಿಗಳು ಈ ಕಾನೂನನ್ನು ಖಂಡಿಸುವಂತೆ ಕೇಳಿಕೊಳ್ಳತ್ತೆನೆ.
ಏಕೆಂದರೆ ಅವರು ಇದನ್ನು ಇಸ್ಲಾಂನ ಹೆಸರಿನಲ್ಲಿ ಈ ಕಾನೂನನ್ನು ಜಾರಿಗೊಳಿಸ ಹೊರಟಿದ್ದು, ಒಂದು ವೇಳೆ ಈ ಕಾನೂನು ಅನುಷ್ಠಾನಗೊಂಡರೆ ಅದು ಇಸ್ಲಾಂ ಮೇಲೆ ಜನರ ಅಭಿಪ್ರಾಯವನ್ನು ಬದಲಿಸುತ್ತದೆ ಎಂದು ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದ ನೂತನ ಕಾನೂನು ಏನು ಹೇಳುತ್ತದೆ?

ಅಫ್ಘಾನಿಸ್ತಾನದಲ್ಲಿ ತರಲಾಗಿರುವ ಈ ಕಾನೂನು, ಮಹಿಳೆಯರನ್ನು ಗುಲಾಮರ ಸ್ಥಾನದಲ್ಲಿ ಇರಿಸಲಾಗಿದ್ದು, ಮನೆಯ ಓಡೆಯನಾದ ಗಂಡನು ತನ್ನ ಹೆಂಡತಿಯ ಮೂಳೆ ಮುರಿಯದ ಹಾಗೆ ಹೊಡೆಯಲು ಕಾನೂನಾತ್ಮಕ ಒಪ್ಪಿಗೆ ನೀಡಿದೆ. ಒಂದು ವೇಳೆ ಹೆಂಡತಿಯ ಮೂಳೆ ಮುರಿದರೆ, ಗಂಡನಿಗೆ ಕೇವಲ 15 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದೆ.
ಇದಷ್ಟೇ ಅಲ್ಲದೆ, ಪತ್ನಿಯು ತನ್ನ ಪತಿಯ ಅನುಮತಿ ಇಲ್ಲದೆ ಎಲ್ಲಿಗಾದರೂ ಹೋದರೆ ಆಕೆಯನ್ನು ತಳಿಸಲು ಗಂಡನಿಗೆ ಮತ್ತು ಆಕೆಗೆ ಕಠಿಣ ಶಿಕ್ಷೆಯನ್ನು ವಿಧಿಸಲು ನ್ಯಾಯಾಲಯಕ್ಕೆ ಅವಕಾಶವನ್ನು ನೀಡಲಾಗಿದೆ. ಈ ಕಾನೂನು ಸಹ ವರ್ಗದಿಂದ ವರ್ಗಕ್ಕೆ ಬೇರೆಯಾಗಿದ್ದು, ಈ ತಪ್ಪನ್ನು ಧಾರ್ಮಿಕ ವಿದ್ವಾಂಸರು ಮಾಡಿದರೆ ಎಚ್ಚರಿಕೆ, ಮಧ್ಯಮ ವರ್ಗದವರಿಗೆ ಜೈಲು ಶಿಕ್ಷೆ ಮತ್ತು ಕೆಳವರ್ಗದವರಿಗೆ ಜೈಲು ಶಿಕ್ಷೆ ಮತ್ತು ದೈಹಿಕ ಶಿಕ್ಷೆ ಎರಡನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಕಾನೂನು ಮಹಿಳೆಯರ ಮೇಲಿನ ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು, ವಿಶ್ವದ ಅನೇಕ ಮಹಿಳಾಪರ ಸಂಘಟನೆಗಳು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿವೆ. ಇದೇ ರೀತಿಯ ವಿರೋಧವನ್ನು ಮುಸ್ಲಿಂ ಸಮುದಾಯದ ಮೌಲ್ವಿಗಳು, ಮುಲ್ಲಾಗಳು ಪ್ರದರ್ಶಿಸಬೇಕು ಎನ್ನುವುದು ಜಾವೇದ್​ ಅಖ್ತರ್​ ಅವರ ಅಭಿಪ್ರಾಯವಾಗಿದೆ,(ಏಜನ್ಸೀಸ್​).