ಹಲ್ಲೆ ಮಾಡುತ್ತಿರುವ ದೃಶ್ಯ 
ದೇಶ

ಮದುವೆಗೆ ಅಡ್ಡಿ ಎಂದು ಮಹಿಳೆಯ ಒಂದೂವರೆ ವರ್ಷದ ಕಂದಮ್ಮನನ್ನ ಪದೇ ಪದೇ ಎತ್ತಿ ನೆಲಕ್ಕೆ ಬಡಿದು ಕೊಂದ ಪಾಪಿ! | child murder

ಲಖನೌ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ವ್ಯಕ್ತಿಯೊಬ್ಬ, ತಮ್ಮ ಮದುವೆಗೆ ಅಡ್ಡಿಯಾಗುತ್ತದೆ ಎಂದು ಆಕೆಯ ಒಂದೂವರೆ ವರ್ಷದ ಮಗುವನ್ನು(child murder) ಪದೇ-ಪದೇ ನೆಲಕ್ಕೆ ಎತ್ತಿ ಬಡಿದು ಕೊಂದಿರುವ ಘಟನೆ ನಡೆದಿದೆ.
ಶುಕ್ರವಾರ(ಮೇ 29) ಈ ಘಟನೆ ನಡೆದಿದೆ. ಹಲ್ಲೆಯ ಮನಕಲಕುವ ಸಿಸಿಟಿವಿ ವಿಡಿಯೋ ಬಹಿರಂಗವಾಗಿದ್ದು, ಪಾಪಿ ಮಗುವನ್ನು ಸಂಬಂಧಿಯ ಮನೆಯ ಹೊರಗಿನ ಖಾಲಿ ಓಣಿಯಲ್ಲಿ ಹೊತ್ತುಕೊಂಡು ಹೋಗಿ, ಅಲ್ಲಿ ಹಲವು ಬಾರಿ ಎತ್ತಿ ನೆಲಕ್ಕೆ ಬಡಿದಿರುವುದು ಕಂಡು ಬಂದಿದೆ.
ಹಲ್ಲೆಯ ಬಳಿಕ ಮಗು ಪ್ರಜ್ಞೆ ತಪ್ಪಿದೆ. ತಕ್ಷಣ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಮೃತ ಮಗುವಿನ ಹೆಸರು ಆರವ್​. ಕೊಲೆ ಆರೋಪಿ ವಿರಾಜ್​ ಪರಾರಿಯಾಗಿದ್ದಾನೆ. ಮಗುವಿನ ತಾಯಿ ರತಿ, ಕೆಲ ವರ್ಷಗಳ ಹಿಂದೆ ಆಕೆ ಸುಮಿತ್ ಎಂಬಾತನನ್ನು ಮದುವೆಯಾಗಿದ್ದಳು.
ಇತ್ತೀಚೆಗೆ ಆರೋಪಿ ವಿರಾಜ್​ ರತಿಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ. ಆದರೆ ಕುಟುಂಬಕ್ಕೆ ಆಕೆಯ ಮಗುವಿನ ಬಗ್ಗೆ ತಕರಾರಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮಗುವನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶುಕ್ರವಾರ ರತಿ ತನ್ನ ಚಿಕ್ಕಮ್ಮನ ಮನೆಗೆ ಭೇಟಿ ನೀಡಲು ತನ್ನ ಪೋಷಕರ ಮನೆಯಿಂದ ಬಂದಿದ್ದಳು. ಈ ವೇಳೆ ಆರೋಪಿ ಅಲ್ಲಿಗೆ ಬಂದಿದ್ದು, ಮಗುವನ್ನು ಟಾಫಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಮಗುವನ್ನು ಥಳಿಸಿ, ನೆಲಕ್ಕೆ ಎತ್ತಿ ಬಡಿದಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).