ಮುನಿಸಿಕೊಂಡಿದ್ದ ಪತ್ನಿಯನ್ನು ತರಲು ಹೋದ ಪತಿಗೆ ಪೆಟ್ರೋಲ್ ಸುರಿದು ಕೊಂದ ಬಾಮೈದ
- ಮುನಿಸಿಕೊಂಡಿದ್ದ ಪತ್ನಿಯನ್ನು ತರಲು ಹೋದ ಪತಿಗೆ ಪೆಟ್ರೋಲ್ ಸುರಿದು ಕೊಂದ ಬಾಮೈದ
- ರಕ್ಷಿಸಲು ಹೋದ ಮಹಿಳೆಯೂ ಸಾವು
- ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಪಂಜಾಬ್: ಗಂಡನ ಜೊತೆ ಜಗಳವಾಡಿಕೊಂಡು ತವರು ಮನೆಗೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಬಂದಿದ್ದ ಪತಿಗೆ ಆಕೆಯ ಸಹೋದರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ (Man Burnt Alive By Brother-in-Law) ಘಟನೆ ಪಂಜಾಬ್ನ ತರಣ್ ತರಣ್ ಎಂಬಲ್ಲಿ ವರದಿಯಾಗಿದೆ. ಸದ್ಯ ಈ ಘಟನೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ?
ಲವ್ಜೀತ್ ಸಿಂಗ್ ಎಂಬಾತ ತನ್ನ ಮೇಲೆ ಮುನಿಸಿಕೊಂಡು ತವರು ಮನೆ ಸೇರಿದ್ದ ಪತ್ನಿ ಸಂದೀಪ್ ಕೌರ್ಳನ್ನು ಮರಳಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಯಸಿದ್ದ. ಹೀಗಾಗಿ ಪತ್ನಿಯ ತವರಿಗೆ ಬಂದಿದ್ದೆ, ಭಾವ ಲವ್ಜೀತ್ ಸಿಂಗ್ ಹಾಗೂ ಬಾಮೈದ ಸಜನ್ ಸಿಂಗ್ರಲ್ಲಿ ಮಾತಿಗೆ- ಮಾತು ಬೆಳೆದಿದೆ.
ಕುಪಿತನಾದ ಸಜನ್ ಸಿಂಗ್ ಭಾವ ಲವ್ಜೀತ್ ಸಿಂಗ್ ಮೇಲೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿ ಕಂಗಾಲಾದ ಗುರ್ಜಿತ್ ಕೌರ್, ಲವ್ಜೀತ್ ಸಿಂಗ್ನ ರಕ್ಷಣೆಗೆ ಮುಂದಾಗಿದ್ದಾಳೆ. ಆದರೆ ಅಕೆಗೆ ಸಹ ಬೆಂಕಿ ಹತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ದೂರು ದಾಖಲು ಮುಂದುವರಿದ ತನಿಖೆ!
ಬೆಂಕಿ ತಗುಲಿದ ಕೆಲವೇ ಕ್ಷಣಗಳಲ್ಲಿ ಲವ್ಜೀತ್ ಸಿಂಗ್ ಸಾವನ್ನಪ್ಪಿದ್ದಾನೆ. ಗುರ್ಜಿತ್ ಕೌರ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮರಣ ಹೊಂದಿದ್ದಾಳೆ.
ಈ ಘಟನೆಗೆ ಕುರಿತಂತೆ ದೂರು ದಾಖಲಾಗಿದ್ದು, ಸಜನ್ ಸಿಂಗ್ ಹಾಗೂ ಅವನ ಸಹೋದರಿ ಸಂದೀಪ್ ಕೌರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಈ ಲವ್ಜೀತ್ ಸಿಂಗ್ ಹಾಗು ಸಂದೀಪ್ ಕೌರ್ ಒಂಭತ್ತು ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ಇಬ್ಬರಲ್ಲಿ ಹೊಂದಾಣಿಕೆ ಮೂಡದ ಹಿನ್ನಲೆಯಲ್ಲಿ ಸಂದೀಪ್ ಕೌರ್ ತವರು ಮನೆಗೆ ಮರಳಿದ್ದಳು.
ಇಕೆಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಲವ್ಜೀತ್ ಸಿಂಗ್ ಪ್ರಯತ್ನಿಸಿದಾಗ ಸಜನ್ ಸಿಂಗ್ ಮತ್ತು ಆತನ ನಡುವಿಗೆ ವಾಗ್ವಾದ ಹಾಗೂ ಹೊಡೆದಾಟವಾಗಿದೆ. ನಂತರ ರೊಚ್ಚಿಗೆದ್ದ ಸಜನ್ ಸಿಂಗ್ ಈ ಕೃತ್ಯವನ್ನು ಎಸೆಗಿದ್ದಾನೆಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ, (ಏಜನ್ಸೀಸ್).