ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ 
ದೇಶ

ಒಳನುಸುಳುಕೋರರನ್ನು ರಕ್ಷಿಸಲು ಮಮತಾ ಬ್ಯಾನರ್ಜಿ 'ವಂದೇ ಮಾತರಂ' ವಿರೋಧಿಸುತ್ತಿದ್ದಾರೆ: ಅಮಿತ್ ಶಾ ವಾಗ್ದಾಳಿ | Amit Shah

ಪ್ರಮುಖ ಮುಖ್ಯಾಂಶಗಳು

  • ಮಮತಾ ಬ್ಯಾನರ್ಜಿ ಒಳನುಸುಳುಕೋರರನ್ನು ರಕ್ಷಿಸಲೇಂದೆ ವಂದೇ ಮಾತರಂನ್ನು ವಿರೋಧಿಸುತ್ತಿದ್ದಾರೆ
  • ವಂದೇ ಮಾತರಂನ್ನು ವಿರೋಧಿಸುವ ಮೂಲಕ, ದೀದಿ ಬಂಗಾಳದ ಪರಂಪರೆ ಮತ್ತು ರಾಷ್ಟ್ರದ ಸಂಸ್ಕೃತಿಯ ವಿರುದ್ಧ ವರ್ತಿಸುತ್ತಿದ್ದಾರೆ
  • ವಂದೇ ಮಾತರಂನ್ನು ವಿರೋಧಿಸಿದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ಕಿತ್ತುಹಾಕಿ
ಪಶ್ಚಿಮಬಂಗಾಳ: ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರವು ಒಳನುಸುಳುಕೋರರನ್ನು ರಕ್ಷಿಸಲೇಂದೆ ವಂದೇ ಮಾತರಂನ್ನು ವಿರೋಧಿಸುತ್ತಿದೆ ಎಂದು ಅಮಿತ್​ ಶಾ (Amit Shah) ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿದ ಬ್ಯಾರಕ್‌ಪೋರ್‌ನಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ನಿಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರ ಅಕ್ರಮ ವಲಸಿಗರನ್ನು ರಕ್ಷಿಸಲು ವಂದೇ ಮಾತರಂ ಅನ್ನು ವಿರೋಧಿಸುತ್ತಿದ್ದು, ವಂದೇ ಮಾತರಂನ್ನು ವಿರೋಧಿಸುವ ಮೂಲಕ, ದೀದಿ ಬಂಗಾಳದ ಪರಂಪರೆ ಮತ್ತು ರಾಷ್ಟ್ರದ ಸಂಸ್ಕೃತಿಯ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಬಂಗಾಳದ ಅಸ್ತಿತ್ವವನ್ನೇ ವಿರೋಧಿಸುವ ಬ್ಯಾನರ್ಜಿ ಅವರ ನಡೆಯನ್ನು ಬಂಗಾಳದ ಜನರು ಸ್ವೀಕರಿಸುತ್ತಾರೋ? ಅಥವಾ ವಿರೋಧಿಸುತ್ತಾರೋ ? ಎನ್ನುವುದು ಮುಂಬರುವ ಚುನಾವಣೆಯಲ್ಲಿ ಬಂಗಾಳದ ಜನತೆ ತಿಳಿಸಲಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರು "ವಂದೇ ಮಾತರಂ" ನನ್ನು ತಮ್ಮ ಕೊನೆಯ ಮಾತಾಗಿ ನುಡಿದು ಗಲ್ಲಿಗೇರುತ್ತಿದ್ದರು. ಇಂತಹ ವೀರಗೀತೆಯನ್ನು ವಿರೋಧಿಸಿದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ಕಿತ್ತುಹಾಕಿ ಎಂದು ಬಂಗಾಳದ ಜನತೆಯಲ್ಲಿ ನಾನು ಕೇಳಿಕೊಳ್ಳತ್ತೇನೆಂದು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 50 ಕ್ಕಿಂತ ಹೆಚ್ಚು ಮತಗಳನ್ನು ಪಡೆಯಲಿದ್ದು, ಬಿಹಾರದ ನಂತರ ಬಂಗಾಳದಲ್ಲಿ ಬಿಜೆಪಿಯು ಸರ್ಕಾರವನ್ನು ರಚಿಸುತ್ತದೆ ಎಂದು ಅವರು ಹೇಳಿದರು,(ಏಜನ್ಸೀಸ್​).

ಅಸ್ಸಾಂನಲ್ಲಿದ್ದಾರೆ 64 ಲಕ್ಷ ನುಸುಳುಕೋರರು

ಶುಕ್ರವಾರ (ಜ.30) ಅಸ್ಸಾಂನಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ನನಗೆ ದೊರ ಮಾಹಿತಿಯ ಪ್ರಕಾರ ಅಸ್ಸಾಂನಲ್ಲಿ ಸರಿಸುಮಾರು 64 ಲಕ್ಷದಷ್ಟು ಅಕ್ರಮ ನುಸುಳುಕೋರರಿದ್ದಾರೆ. ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಇವರ ಪ್ರಾಬಲ್ಯ ಏರಿಕೆಯಾಗುತ್ತಿದ್ದು ಇದನ್ನು ತಕ್ಷಣ ಕಡಿಮೆ ಮಾಡುವ ಜವಾಬ್ದಾರಿ ನಮ್ಮ ಜತೆಗೆ ಇಲ್ಲಿಯ ಸ್ಥಳೀಯ ಸಮುದಾಯದ ಮೇಲಿದೆ. ಈ ರಾಜ್ಯದಲ್ಲಿ ಇಷ್ಟು ನುಸುಳುಕೋರರು ಹೆಚ್ಚಾಗಲು ಇಪ್ಪತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ಸರ್ಕಾರವೇ ಕಾರಣ ಎಂದು ಅಮಿತ್​ ಶಾ ಆರೋಪಿಸಿದರು,(ಏಜನ್ಸೀಸ್​).