ಹೋಟೆಲ್ ಮಾಲೀಕ ಲವಕೇಶ್ ಬೆನ್ನಲ್ಲೇ ಅಡುಗೆ ಭಟ್ಟ ಕೇಶವ್ ನೇಗಿ ಬಂಧನ 
ದೇಶ

ಮಾಳವೀಯ ನಗರ ಅಗ್ನಿ ದುರಂತ: ಹೋಟೆಲ್​ ಮಾಲೀಕನ ಬಳಿಕ ಕುಕ್ ಕೇಶವ್​ ನೇಗಿ ಅರೆಸ್ಟ್; ಸಾವಿನ ಸಂಖ್ಯೆ 21 ಕ್ಕೆ ಏರಿಕೆ! Malviya Nagar Fire Accident

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಮಾಳವೀಯ ನಗರದ ಹೋಟೆಲ್ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ
  • ಹೋಟೆಲ್ ಮಾಲೀಕ ಲವಕೇಶ್ ಬೆನ್ನಲ್ಲೇ ಅಡುಗೆ ಭಟ್ಟ ಕೇಶವ್ ನೇಗಿ ಬಂಧನ
  • 15 ಜನರಿಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ನವದೆಹಲಿ: ಜೂನ್​. 3 ರಂದು ಮಾಳವೀಯ ನಗರದ ಸಮೀಪವಿರುವ ಫ್ಲರಿಶ್​ ಬೆಡ್​ ಅಂಡ್ ಬ್ರೇಕ್​ಫಾಸ್ಟ್​ ಹೋಟೆಲ್​​ನಲ್ಲಿ ಬೆಂಕಿ ಕಾಣಿಸಿಕೊಂಡು (Malviya Nagar Fire Accident), 21 ಮಂದಿ ಸಜೀವ ದಹನಗೊಂಡ ಘಟನೆಗೆ ಸಂಬಂಧಿಸಿದಂತೆ ಹೋಟೆಲ್​ನ ಕುಕ್​ ಕೇಶವ್​ ನೇಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂನ್​. 4 ರಂದು ಹೋಟೆಲ್​ ಮಾಲೀಕ, ಲವಕೇಶ್ ಬಜಾಜ್​​ನ ಬಂಧನದ ನಂತರ ಕೇಶವ್​ ನೇಗಿಯನ್ನು ಬಂಧಿಸಲಾಗಿದೆ. ನೇಗಿಯ ಅಜಾಗರೂಕತೆ ಇಂದಲೇ ಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

21 ಜನರ ಧಾರುಣ ಸಾವು!

ಜೂನ್​. 3 ರಂದು ದೆಹಲಿಯ ಹೃದಯ ಭಾಗದಲ್ಲಿರುವ ಮಾಳವೀಯ ನಗರದಲ್ಲಿರುವ ಫ್ಲರಿಶ್​ ಬೆಡ್​ ಅಂಡ್ ಬ್ರೇಕ್​ಫಾಸ್ಟ್​ ಹೋಟೆಲ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗ ಈಡೀ ಹೋಟೆಲ್​ ಸುಟ್ಟು ಭಸ್ಮವಾಗಿದ್ದು, ಸುಮಾರು 21 ಜನ ಸಜೀವ ದಹನವಾಗಿದ್ದಾರೆ.
ಹೀಗೆ ಸಜೀವ ದಹನಗೊಂಡವರಲ್ಲಿ ಸುಮಾರು 13 ಜನ ವಿದೇಶಿಯರಿದ್ದು, ಉಳಿದವರು ಭಾರತದ ಮೂಲದವರಾಗಿದ್ದಾರೆ. ಸದ್ಯ 15 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 13 ಜನ ವೆಂಟಿಲೇಟರ್​ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ನಾನು ಸ್ಥಳದಿಂದ ಓಡಿ ಹೋಗಿದ್ದೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್​ ಮಾಲೀಕ ಲವಕೇಶ್ ಬಜಾಜ್​ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್​ ವಿಚಾರಣೆಯಲ್ಲಿ ಮಾಲೀಕ ಬಜಾಜ್​, ನಾನು ಹೋಟೆಲ್​ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದೆ. ಆದರೆ ನನಗೆ ಭಯವಾಯ್ತು ಹೀಗಾಗಿ ನನ್ನ ಕಾರನ್ನು ತೆಗೆದುಕೊಂಡು ಅಲ್ಲಿಂದ ಹೊರಟುಬಿಟ್ಟೆ. ಮನೆಗೆ ಹೋಗಲು ಹೆದರಿಕೆಯಾಯ್ತು ಹೀಗಾಗಿ ಸುಮ್ಮನೆ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
2022ರಲ್ಲಿ ಅಹ್ಲುವಾಲಿಯಾ ಎಂಬುವವರಿಂದ ಲವಕೇಶ್​ ಅವರು ಹೋಟೆಲ್​​ನನ್ನು ಸ್ವಾದೀನ ಪಡಿಸಿಕೊಂಡರು ಎನ್ನಲಾಗಿದೆ. ಹೋಟೆಲ್​ ಕಮ್​ ಅತಿಥಿಗೃಹವಾಗಿರುವ ಈ ಕಟ್ಟಡದ ಹಿಂದೆ ಖಾದಿ ಅಂಗಡಿ ಇತ್ತು. ಖರೀದಿ ಮಾಡುವ ಸಮಯದಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಿದ್ದಾರೆ, (ಏಜನ್ಸೀಸ್​).