ಬಾಲಕಿಯ ಜತೆ ಅಸಭ್ಯ ವರ್ತನೆ 
ದೇಶ

ದೇವಸ್ಥಾನದಲ್ಲೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ವಾ? ಬಾಲಕಿಯ ಜತೆ ಅಸಭ್ಯ ವರ್ತನೆ, ಕಾಮುಕನ ಬಂಧನ..! Indecent Behavior

ಮಹಾರಾಷ್ಟ್ರದ ಪುಣೆ ನಗರದ ನಿಗ್ಡಿ ಪ್ರದೇಶದಲ್ಲಿರುವ ಶಿವ ದೇವಾಲಯಕ್ಕೆ 10 ವರ್ಷದ ಬಾಲಕಿಯೊಬ್ಬಳು ಶಿವಲಿಂಗವನ್ನು ಪೂಜಿಸಲು ಒಬ್ಬಳೇ ಹೋಗಿದ್ದಳು. ಬಾಲಕಿಯು ಮೊಣಕಾಲೂರಿ ಅತ್ಯಂತ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದ ಆ ಸಂದರ್ಭದಲ್ಲಿ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲೇ 10 ವರ್ಷದ ಬಾಲಕಿಯ ಮೇಲೆ ಅಸಭ್ಯವಾಗಿ ವರ್ತಿಸಿರುವ ( Indecent Behavior ) ಆಘಾತಕಾರಿ ಘಟನೆ ವರದಿಯಾಗಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯ ಹಾಗೂ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮಹಾರಾಷ್ಟ್ರದ ಪುಣೆ ನಗರದ ನಿಗ್ಡಿ ಪ್ರದೇಶದಲ್ಲಿರುವ ಶಿವ ದೇವಾಲಯಕ್ಕೆ 10 ವರ್ಷದ ಬಾಲಕಿಯೊಬ್ಬಳು ಶಿವಲಿಂಗವನ್ನು ಪೂಜಿಸಲು ಒಬ್ಬಳೇ ಹೋಗಿದ್ದಳು. ಬಾಲಕಿಯು ಮೊಣಕಾಲೂರಿ ಅತ್ಯಂತ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದ ಆ ಸಂದರ್ಭದಲ್ಲಿ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

ದೇವಾಲಯದಲ್ಲಿ ಬಾಲಕಿ ಏಕಾಂಗಿಯಾಗಿರುವುದನ್ನು ಗಮನಿಸಿದ ಆ ಕಾಮುಕ, ನೇರವಾಗಿ ಆಕೆಯ ಬಳಿ ತೆರಳಿ ಬಲವಂತವಾಗಿ ಮುಟ್ಟಲು ಯತ್ನಿಸಿದ್ದಾನೆ. ಬಾಲಕಿ ತೀವ್ರವಾಗಿ ವಿರೋಧಿಸಿದರೂ ಆತ ಕಿಂಚಿತ್ ಕರುಣೆ ತೋರದೆ ಅಸಭ್ಯವಾಗಿ ವರ್ತಿಸಿದ್ದು, ಗಾಬರಿಗೊಂಡ ಬಾಲಕಿ ಅಲ್ಲಿಂದ ಒಮ್ಮೆಲೆ ಕಿರುಚಿಕೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಪೂರ್ಣ ಕೃತ್ಯವು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿ ಪರಾರಿಯಾದ ಬಳಿಕವೂ ಧೈರ್ಯಗೆಡದ ಆ ಬಾಲಕಿ, ಮತ್ತೊಮ್ಮೆ ಶಿವಲಿಂಗಕ್ಕೆ ನಮಸ್ಕರಿಸಿ, ಮನೆಗೆ ತೆರಳಿದ್ದಾಳೆ. ತನಗೆ ಎದುರಾದ ಈ ಕರಾಳ ಹಾಗೂ ಮುಜುಗರದ ಅನುಭವವನ್ನು ಬಾಲಕಿ ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಕೂಡಲೇ ಎಚ್ಚೆತ್ತ ಪೋಷಕರು ನಿಗ್ಡಿ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಬಾಲಕಿಯ ಮೇಲೆ ನಡೆದ ಅಸಭ್ಯ ವರ್ತನೆಯ ಕೃತ್ಯವು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ.

ಕಾಮುಕನ ಬಂಧನ

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿ, ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕನನ್ನು ಉತ್ತರ ಪ್ರದೇಶ ಮೂಲದ ವಿಶಾಲ್ ಸಿಂಗ್ ಎಂದು ಗುರುತಿಸಿದ್ದಾರೆ. ಈತ ಪುಣೆಯಲ್ಲಿ ಮೆಟ್ರೋ ಗುತ್ತಿಗೆದಾರರ ಬಳಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ನಿಗ್ಡಿ ಠಾಣೆಯ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ, (ಏಜೆನ್ಸೀಸ್​).