ಯೂಟ್ಯೂಬ್​ ವಿಡಿಯೋ ನೋಡಿ ಚಿನ್ನ ಸಿಗುತ್ತೆ ಅಂತ ಗಣಿಯೊಳಗೆ ಇಳಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್​! ಅಲ್ಲಿ ಕಂಡಿದ್ದೇನು? Gold Mine

ಯೂಟ್ಯೂಬ್ ವಿಡಿಯೋ ನೋಡಿ ಚಿನ್ನ ಹುಡುಕಲು ಹೋಗಿ ಪಾದಬಡ್ಡ ಗಣಿಯೊಳಗೆ ( Gold Mine ) ಸಿಲುಕಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
Gold Mine
ಯೂಟ್ಯೂಬ್​ ವಿಡಿಯೋ ನೋಡಿ ಚಿನ್ನ ಸಿಗುತ್ತೆ ಅಂತ ಗಣಿಯೊಳಗೆ ಇಳಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್​!
Published on: 

ವಿಜಯವಾಡ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿ ಹಾಗೂ ವೈರಲ್ ವಿಡಿಯೋಗಳನ್ನು ನಂಬಿ ಯಾವುದಾದರೂ ಸಾಹಸಕ್ಕೆ ಮುಂದಾದರೆ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ರೋಚಕ ಘಟನೆಯೇ ತಾಜಾ ನಿದರ್ಶನವಾಗಿದೆ. ಯೂಟ್ಯೂಬ್ ವಿಡಿಯೋ ನೋಡಿ ಚಿನ್ನ ಹುಡುಕಲು ಹೋಗಿ ಪಾದಬಡ್ಡ ಗಣಿಯೊಳಗೆ ( Gold Mine ) ಸಿಲುಕಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀ ಪೋಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಬೂಚಿರೆಡ್ಡಿಪಾಳ್ಯದ ನಿವಾಸಿ ಪ್ರಭಾಕರ ರೆಡ್ಡಿ ಮತ್ತು ಅವರ ಸ್ನೇಹಿತ ಕಿಷ್ಟಯ್ಯ ಕೆಲ ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಒಂದು ವಿಡಿಯೋ ನೋಡಿದರು. ಆ ವಿಡಿಯೋ ಶ್ರೀಸತ್ಯಸಾಯಿ ಜಿಲ್ಲೆಯ ರಾಮಗಿರಿ ಹಳೆಯ ಚಿನ್ನದ ಗಣಿ ಕುರಿತಾಗಿತ್ತು. ಆ ಗಣಿಯಲ್ಲಿ ಸುಲಭವಾಗಿ ಚಿನ್ನ ದೊರೆಯುತ್ತದೆ ಎಂಬ ತಪ್ಪು ಮಾಹಿತಿಯನ್ನು ನಂಬಿದ ಇಬ್ಬರೂ ಸ್ನೇಹಿತರು, ಹೇಗಾದರೂ ಮಾಡಿ ಚಿನ್ನವನ್ನು ಪಡೆಯಲೇಬೇಕೆಂದುಕೊಂಡು ತಕ್ಷಣವೇ ರಾಮಗಿರಿಗೆ ಪ್ರಯಾಣ ಬೆಳೆಸಿದರು. ಯೋಜನೆಯಂತೆ ಸೋಮವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಮುಚ್ಚಲ್ಪಟ್ಟಿದ್ದ ಹಳೆಯ ಗಣಿ ಸುರಂಗದ ಬಳಿಗೆ ತಲುಪಿದ್ದಾರೆ.

Also Read
ಪಾಕ್‌ನಲ್ಲಿ ಮತ್ತೆ 'ಅಜ್ಞಾತ ಬಂದೂಕುಧಾರಿ' ಅಟ್ಟಹಾಸ: ಲಷ್ಕರ್ ಕಮಾಂಡರ್ ಇಮ್ರಾನ್ ಖಾನ್ ಹತ್ಯೆ? ವಿಡಿಯೋ ವೈರಲ್! Unknown Gunmen
Gold Mine

ಇದಾದ ಬಳಿಕ ಪ್ರಭಾಕರ ರೆಡ್ಡಿ ಹಗ್ಗದ ಸಹಾಯದಿಂದ ಆಳವಾದ ಸುರಂಗದೊಳಗೆ ಇಳಿದಿದ್ದಾರೆ. ಆದರೆ, ಸುರಂಗ ತುಂಬಾ ಆಳವಾಗಿದ್ದಲ್ಲದೆ, ಕತ್ತಲು ಆವರಿಸಿ, ಉಸಿರಾಡಲು ಶುದ್ಧ ಗಾಳಿ ಇಲ್ಲದಿರುವುದನ್ನು ಕಂಡು ಪ್ರಭಾಕರ ರೆಡ್ಡಿ ತೀವ್ರ ಆತಂಕಕ್ಕೊಳಗಾಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ಮೇಲೆ ಬರಲು ಯತ್ನಿಸಿದರೂ, ಸುರಂಗದ ಆಳ ಮತ್ತು ಆತನ ಬಲಹೀನತೆಯಿಂದಾಗಿ ಮೇಲಕ್ಕೆ ಬರಲು ಸಾಧ್ಯವಾಗದೆ ಒಳಗಡೆಯೇ ಸಿಲುಕಿಕೊಂಡರು. ಹೊರಗಡೆ ಕಾಯುತ್ತಿದ್ದ ಕಿಷ್ಟಯ್ಯ ತನ್ನ ಸ್ನೇಹಿತನನ್ನು ರಕ್ಷಿಸಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ ಕೈಚೆಲ್ಲುವಂತಾಯಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕಿಷ್ಟಯ್ಯ ಗಾಬರಿಯಿಂದ ನೇರವಾಗಿ ರಾಮಗಿರಿ ಪೊಲೀಸ್ ಠಾಣೆಗೆ ಓಡಿಹೋಗಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಧರ್ಮವರಂನಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಸ್ಥಳೀಯರ ಸಹಕಾರದೊಂದಿಗೆ ಬೃಹತ್ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಮಂಗಳವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಹಗ್ಗಗಳ ಸಹಾಯದಿಂದ ಸುರಂಗದಲ್ಲಿ ಸಿಲುಕಿದ್ದ ಪ್ರಭಾಕರ ರೆಡ್ಡಿಯನ್ನು ಪೊಲೀಸರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎಳೆದು ತಂದಿದ್ದಾರೆ.

Also Read
'ಅನ್ನಪೂರ್ಣ'ರಾದ ನಟಿ ರಶ್ಮಿಕಾ ಮಂದಣ್ಣ; 400 ಕುಟುಂಬ ದತ್ತು, ಒಂದು ವರ್ಷದವರೆಗೆ ದಿನಸಿ ಖರ್ಚು ಭರಿಸುವ ಭರವಸೆ!..Rashmika Mandanna
Gold Mine

ಸಾರ್ವಜನಿಕರಿಗೆ ಎಚ್ಚರಿಕೆ

ಸುರಕ್ಷಿತವಾಗಿ ಹೊರಬಂದ ಬಳಿಕ ಪ್ರಭಾಕರ ರೆಡ್ಡಿ ಹಾಗೂ ಅವರ ಸ್ನೇಹಿತ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆಯ ಬಳಿಕ ಎಚ್ಚೆತ್ತ ಪೊಲೀಸರು ಇಬ್ಬರಿಗೂ ಕೌನ್ಸೆಲಿಂಗ್ ಹಾಗೂ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಸುಳ್ಳು ಪ್ರಚಾರ ಹಾಗೂ ಯೂಟ್ಯೂಬ್ ವಿಡಿಯೋಗಳನ್ನು ನಂಬಿ ಯಾರೂ ಕೂಡ ತಮ್ಮ ಪ್ರಾಣವನ್ನು ಪಣಕ್ಕಿಡುವಂತಹ ಸಾಹಸಗಳಿಗೆ ಕೈಹಾಕಬಾರದು ಎಂದು ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net