ಬಿಜೆಪಿ ಸಚಿವ ನಿತೀಶ್​ ರಾಣೆ, ಮಾಲೆಗಾಂವ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಮಾಜ್ ಮಾಡುತ್ತಿರುವುದು 
ದೇಶ

ಮದರಾಸಾಗಳು ಭಯೋತ್ಪಾದಕರ ಸಂತಾನೋತ್ಪತ್ತಿ ಕೇಂದ್ರಗಳು! ಮಾಲೆಗಾಂವ್ ನಮಾಜ್ ವಿವಾದಕ್ಕೆ ಸಚಿವ ನಿತೀಶ್ ರಾಣೆ ವಾಗ್ದಾಳಿ | Nitesh Rane

ಪ್ರಮುಖ ಮುಖ್ಯಾಂಶಗಳು

  • ಮಾಲೆಗಾಂವ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಮಾಜ್ ಮಾಡಿದ ವಿವಾದ: ನಿತೀಶ್​ ರಾಣೆ
  • ಮದರಾಸಾಗಳು ಭಯೋತ್ಪಾದಕರ ಸಂತಾನೋತ್ಪತ್ತಿ ಕೇಂದ್ರಗಳು
  • ನಮ್ಮ ರಾಜ್ಯದಲ್ಲಿ ಮೊದಲು ಮದರಾಸಾಗಳನ್ನು ಮುಚ್ಚಬೇಕು : ಬಿಜೆಪಿ ಸಚಿವ
ಮುಂಬೈ: ಮಾಲೆಗಾಂವ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪುರಸಭೆ ನೌಕರರು ಮತ್ತು ನಿವಾಸಿಗಳು ನಮಾಜ್ ಮಾಡಿದ ಘಟನೆ ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದು, ಈ ಕುರಿತು ಬಿಜೆಪಿ ಸಚಿವ ನಿತೀಶ್​ ರಾಣೆ (Nitesh Rane)ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ವೇದಿಕೆಯಾಗಿದೆ.
ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ನಮಾಜ್​ ಮಾಡಿದ ಕುರಿತು ನಿತೀಶ್​ ರಾಣೆ, ಚುನಾವಣೆಗೆ ಮುನ್ನ ಇವರು ಜೈಭೀಮ್ ಎನ್ನುತ್ತಾರೆ, ಗೆದ್ದ ನಂತರ ಕಚೇರಿಯಲ್ಲಿದ್ದ ಬಾಬಾ ಸಾಹೇಬರ ಫೋಟೊವನ್ನೇ ತೆಗೆದು ಟಿಪ್ಪು ಸುಲ್ತಾನನ ಫೋಟೊ ಹಾಕಿದ್ದಾರೆ ಎಂದರು.
ಇವರು ಈ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದಾರೆ, ಮಾಲೆಗಾಂವ್​ ಜನ ಇವರನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಗೆಲ್ಲಿಸಿದ್ದರೆ, ಇವರು ಜಿಹಾದ್​ ನಡೆಸುವುದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇವರಿಗೆ ಇವರ ಧಾರ್ಮಿಕ ಆಚರಣೆಯನ್ನು ಮಾಡಲು ಬೇಕಾದಷ್ಟು ಮಸೀದಿಗಳಿವೆ ಅದನ್ನು ಬಿಟ್ಟು ಪುರಸಭೆ ಕಚೇರಿಯಲ್ಲಿ ಯಾಕೆ ನಮಾಜ್​ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಮದರಾಸಾಗಳನ್ನು ಮೊದಲು ಮುಚ್ಚಬೇಕು

ಮಹಾರಾಷ್ಟ್ರದಲ್ಲಿ ಮದರಾಸಾಗಳ ಅಗತ್ಯವಿಲ್ಲ, ಇಸ್ಲಾಂ ಧರ್ಮೀಯರಿಗೆ ಕುರಾನ್​ ಬಗ್ಗೆ ಕಲಿಯಲು ಮಸೀದಿಗಳಲ್ಲೇ ವ್ಯವಸ್ಥೆ ಮಾಡಬೇಕು ಎಂದು ನಾನು ಮುಖ್ಯಮಂತ್ರಿಯವರ ಬಳಿ ಕೇಳಿಕೊಳ್ಳುತ್ತೇನೆ. ಈ ಮದರಾಸಾಗಳು ಕೇವಲ ಭಯೋತ್ಪಾದಕರ ಸಂತಾನೋತ್ಪತಿ ನಡೆಸುವ ಕೇಂದ್ರವಾಗಿದ್ದು ಮೊದಲು ಇವನ್ನು ಮುಚ್ಚಿಸಬೇಕೆಂದು ಸಿಎಂ ಅವರಿಗೆ ತಿಳಿಸುತ್ತೇನೆ ಎಂದರು.
ಮದರಾಸಾ ಶಿಕ್ಷಣದಿಂದ ಮಕ್ಕಳೀಗೆ ಯಾವುದೇ ಪ್ರಯೋಜನವಿಲ್ಲ, ಇಸ್ಲಾಂ ದೇಶಗಳಲ್ಲಿ ನಮಗೆ ಇದೇ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಅವಕಾಶವಿದೆಯೇ? ಇಸ್ಲಾಂ ದೇಶಗಳಲ್ಲಿ ಎಷ್ಟು ಭಗವದ್ಗೀತೆ ಕಲಿಸುವ ಕೇಂದ್ರಗಳಿವೆ? ನಮಗೆ ಅಲ್ಲಿರದ ಅವಕಾಶವನ್ನು ನಾವು ಇವರಿಗೆ ಇಲ್ಲಿ ಏಕೆ ಕೊಡಬೇಕು ಎಂದು ರಾಣೆ ಪ್ರಶ್ನಿಸಿದ್ದಾರೆ.
ಹಾಗೆಯೇ ಇವರು ಮರಾಠಿಗರ ನಾಡಾದ ಮಹಾರಾಷ್ಟ್ರದಲ್ಲಿ ಉರ್ದು ಭಾಷೆಯಲ್ಲಿ ಇವರ ಮತ ಪ್ರಚಾರ ಮಾಡುವುದನ್ನು ನಾವು ಸುತಾರಾಂ ಒಪ್ಪುವುದಿಲ್ಲ, ಇದಕ್ಕೆಲ್ಲಾ ನಾವು ಆದಷ್ಟು ಬೇಗ ಕಡಿವಾಣ ಹಾಕುತ್ತೇವೆ ಎಂದು ನಿತೀಶ್​ ರಾಣೆ ಹೇಳಿದ್ದಾರೆ,(ಏಜನ್ಸೀಸ್​).