ಮಸಾಲೆ ಪುಡಿಯನ್ನೇ ಮಾದಕ ವಸ್ತು ಅಂದ್ಕೊಂಡ ಏರ್‌ಪೋರ್ಟ್ ಸಿಬ್ಬಂದಿ
ಮಧ್ಯಪ್ರದೇಶ: ವಿಮಾನ ನಿಲ್ದಾಣದಲ್ಲಿ ಮಸಾಲಾ ಪುಡಿಯನ್ನು ಮಾದಕ ವಸ್ತು ಎಂದು ತಪ್ಪಾಗಿ ತಿಳಿದು ವ್ಯಕ್ತಿಯೊಬ್ಬನಿಗೆ 57 ದಿನ ಸೆರೆಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ (Madhya Pradesh HighCourt) ಬಂಧಿತನಾಗಿದ್ದ ಆರೋಪಿ ನಿರಪರಾಧಿ ಎಂದು ಹೇಳಿ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಏನಿದು ಮಾದಕ ಮಸಾಲೆ ಪ್ರಕರಣ?
ಈ ಘಟನೆಯು 2010 ರಂದು ಮಧ್ಯಪ್ರದೇಶದ ಭೋಪಾಲ್ ವಿಮಾನನಿಲ್ದಾಣದಲ್ಲಿ ನಡೆದಿತ್ತು. ಅಜಯ್ ಸಿಂಗ್ ಎಂಬ ಉದ್ಯಮಿ ತನ್ನ ಬ್ಯಾಗ್ನಲ್ಲಿ ಆಮ್ಚೂರ್ ಮಸಾಲೆ ಪುಡಿಗಳನ್ನು ಪೊಟ್ಟಣ ಮಾಡಿಕೊಂಡು ತಪಾಸಣೆಯ ಸಾಲಿನಲ್ಲಿ ನಿಂತಿದ್ದರು.
ಈ ಮಸಾಲೆ ಪುಡಿಯನ್ನು ಮಾದಕ ವಸ್ತು ಎಂದು ಭಾವಿಸಿದ ವಿಮಾನ ನಿಲ್ದಾಣ ಸಿಬ್ಬಂದಿ ಅಜಯ್ ಸಿಂಗ್ ಮೇಲೆ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ನಿರ್ಬಂಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು.
57 ದಿನ ಜೈಲಿನಲ್ಲಿ ಕಳೆದ ಅಜಯ್ ಸಿಂಗ್!
ನಂತರ ವಶ ಪಡಿಸಿಕೊಂಡ ವಸ್ತುವನ್ನು ಭೋಪಾಲ್ನಲ್ಲಿರುವ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ನಿಖರ ಮಾಹಿತಿ ದೊರೆಯದ ಹಿನ್ನಲೆ ಹೈದರಾಬಾದ್ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಯಿತು.
ವಿಧಿವಿಜ್ಞಾನದ ಪರೀಕ್ಷೆ ವರದಿಯಲ್ಲಿ ಇದು ಯಾವುದೇ ಮಾದಕ ವಸ್ತುವಲ್ಲ, ಬದಲಿಗೆ ಮಸಾಲೆ ಪುಡಿ ಎಂದು ರುಜುವಾತಾಯಿತು. ಆದರೆ ಅಲ್ಲಿವೆರೆಗೆ ಅಜಯ್ ಸಿಂಗ್ 57 ದಿನಗಳ ವೆರೆಗೆ ಸೆರೆಮನೆಯಲ್ಲಿಯೇ ಕಳಿಯ ಬೇಕಾಯಿತು.
ಕಾನೂನು ಸಮರಕ್ಕೆ ಮುಂದಾದ ಉದ್ಯಮಿ
ನಂತರ ಈ ವರದಿಯನನ್ನು ಮುಂದಿಟ್ಟುಕೊಂಡು ವಿಮಾನ ನಿಲ್ದಾಣ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿದ ಉದ್ಯಮಿ ಅಜಯ್ ಸಿಂಗ್, ಮಾನನಷ್ಟ ಮೊಕದ್ದಮೆಯ ಪ್ರಕರಣ ಹೂಡಿದರು.
ಈ ಪ್ರರಕಣದ ವಿಚಾರಣೆ ಕೆಳ ಹಂತದ ನ್ಯಾಯಾಲಯ ನಂತರ ಭೋಪಾಲ್ ಹೈಕೋರ್ಟ್ನಲ್ಲಿ ವಾದ-ವಿವಾದ ನಡೆದು ಅಜಯ್ ಸಿಂಗ್ ನಿರಪರಾಧಿ ಎಂದು ವಿಮಾನ ನಿಲ್ದಾಣ ಸಿಬ್ಬಂದಿಯ ತಪ್ಪಿಗೆ 10 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ತೀರ್ಪನ್ನು ಕೊಟ್ಟಿದೆ, (ಏಜನ್ಸೀಸ್).