ಸಿಎಂ ವಿಜಯ್ ಮತ್ತು ರಾಜಕೀಯ ಪ್ರವೇಶದ ಬಗ್ಗೆ ಮಾಧವನ್ ಮಾತು 
ದೇಶ

‘ಇನ್ಮುಂದೆ ಸಿಎಂ ವಿಜಯ್ ಎಂದೇ ಕರೆಯಬೇಕು’! ಗೆಳೆಯನ ಬಗ್ಗೆ ಮಾಧವನ್ ಹೇಳಿದ್ದೇನು..? |What did Madhavan say about CM Vijay?

ಪ್ರಮುಖ ಮುಖ್ಯಾಂಶಗಳು

  • ‘ಸಿಎಂ ವಿಜಯ್ ಎಂದೇ ಕರೆಯಬೇಕು’, ನಾನು ರಾಜಕೀಯಕ್ಕೆ ಬರುವ ಪ್ಲಾನ್​ ಇಲ್ಲ’
  • ರಾಜಕೀಯ ಎರಡು ಅಲಗಿನ ಕತ್ತಿ; ರಾಜಕೀಯ ಪ್ರವೇಶದ ಬಗ್ಗೆ ಮಾಧವನ್ ಮಾತು
  • ‘ಜಿಡಿಎನ್’ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ನಟ ಮಾಧವನ್ ಹೇಳಿಕೆ
ಚೆನ್ನೈ: ನಟ ಆರ್.ಮಾಧವನ್ ತಮ್ಮ ಗೆಳೆಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್​ ವಿಜಯ್ ಬಗ್ಗೆ ಮಾತನಾಡಿದ್ದು, ‘ಇನ್ಮುಂದೆ ಅವರನ್ನು ಸಿಎಂ ವಿಜಯ್ ಎಂದೇ ಕರೆಯಬೇಕು, ನಾನು ರಾಜಕೀಯಕ್ಕೆ ಬರುವ ಯಾವುದೇ ಪ್ಲಾನ್​ ಇಲ್ಲ’ ಎಂದ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ.
‘ಜಿಡಿಎನ್’ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ಮಾಧವನ್, ‘ವಿಜಯ್ ಅವರನ್ನು ನನಗೆ ಬಹಳ ವರ್ಷಗಳಿಂದ ಸ್ನೇಹಿತ. ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿ. ಆದ್ದರಿಂದ ಅವರನ್ನು ‘ಸಿಎಂ ವಿಜಯ್‘ ಎಂದೇ ಕರೆಯಬೇಕು’ ಎಂದರು.

ರಾಜಕೀಯ ಎರಡು ಅಲಗಿನ ಕತ್ತಿ

ತಾವು ರಾಜಕೀಯಕ್ಕೆ ಬರಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲ, ರಾಜಕೀಯ ಎರಡು ಅಲಗಿನ ಕತ್ತಿಯಂತೆ. ನೀವು ಏನೇ ಒಳ್ಳೆ ಕೆಲಸ ಮಾಡಿದರೂ ಟೀಕೆ ಮಾಡುವವರು ಇದ್ದೇ ಇರುತ್ತಾರೆ. ನನಗೆ ಸಿಎಂ ಆಗುವ ಆಸೆಯಿಲ್ಲ. ಜನರಿಂದ ಆಯ್ಕೆಯಾದ ನಾಯಕರನ್ನು ಗೌರವಿಸುತ್ತೇನೆ’ ಎಂದು ಅಭಿಪ್ರಾಯಪಟ್ಟರು.

'ಜಿಡಿಎನ್' ಚಿತ್ರದ ಬಗ್ಗೆ ಮಾತಾಡಿದ ಮಾಧವನ್

ಇದೇ ವೇಳೆ, 'ಜಿಡಿಎನ್' ಚಿತ್ರದ ಬಗ್ಗೆ ಮಾತಾಡಿದ ಮಾಧವನ್, ಭಾರತದ ಖ್ಯಾತ ಸಂಶೋಧಕ ಜಿ.ಡಿ.ನಾಯ್ಡು ಅವರ ಜೀವನವನ್ನು ತೆರೆ ಮೇಲೆ ತರುವುದು ದೊಡ್ಡ ಜವಾಬ್ದಾರಿಯಾಗಿತ್ತು. ಅವರ ಸಾಧನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಈ ಸಿನಿಮಾ ಮಾಡಿದ್ದೇವೆ. ನಮ್ಮ ತಂಡ ಈ ಸಿನಿಮಾಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಇನ್ನು, ಈ ಚಿತ್ತವನ್ನು ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶಿಸಿದ್ದು, ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದುಷಾರ ವಿಜಯನ್, ಪ್ರಿಯಾಮಣಿ, ಸತ್ಯರಾಜ್, ಜಯರಾಮ್ ಹಾಗೂ ವಿನಯ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಆಗಸ್ಟ್ 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಅಂತ ಚಿತ್ರ ತಂಡ ಹೇಳಿಕೊಂಡಿದೆ,(ಏಜೆನ್ಸೀಸ್​).