ರೈಲಿನಲ್ಲಿ ಬೆರಣಿ ಮಾರುತ್ತಿರುವ ವಿಡಿಯೋ ವೈರಲ್​ 
ದೇಶ

ಎಲ್​ಪಿಜಿ ಸಿಲಿಂಡರ್​ ಕೊರತೆ: ರೈಲಿನಲ್ಲಿ ಬೆರಣಿ ಮಾರುತ್ತಿರುವ ಭೂಪ; ವಿಡಿಯೋ ವೈರಲ್​! Viral Video

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
  • ಭಾರತದಲ್ಲಿ ಎಲ್​ಪಿಜಿ ಸಿಲಿಂಡರ್​ ಕೊರತೆ
  • ರೈಲಿನಲ್ಲಿ ಬೆರಣಿ ಮಾರುತ್ತಿರುವ ವಿಡಿಯೋ ವೈರಲ್​
Viral Video: ನೀವು ರೈಲಿನಲ್ಲಿ ಪ್ರಯಾಣಿಸುವಾಗ ಚಹಾ, ಕಾಫಿ ಅಥವಾ ತಿಂಡಿ ಮಾರುವವರನ್ನು ನೋಡಿರುತ್ತೀರಿ. ಆದರೆ, ಯಾರಾದರೂ ರೈಲು ಬೋಗಿಯೊಳಗೆ ಹಸುವಿನ ಸಗಣಿ ಬೆರಣಿ (Cow Dung Cakes) ಮಾರುವುದನ್ನು ನೋಡಿದ್ದೀರಾ? ಕೇಳಲು ತಮಾಷೆ ಅನಿಸಿದರೂ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ (Viral Video) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದಹಾಗೆ, ಈ ವ್ಯಕ್ತಿ ಬೆರಣಿ ಮಾರುತ್ತಿರುವುದು ಕೇವಲ ತಮಾಷೆಗಲ್ಲ, ಅದರ ಹಿಂದೆ ಒಂದು ಗಂಭೀರವಾದ ಸಮಸ್ಯೆಯಿದೆ ಇದೆ ಎಂದರೆ ನೀವು ನಂಬಲೇಬೇಕು.

ವಿಡಿಯೋದಲ್ಲಿ ಏನಿದೆ?

ಟ್ವಿಟರ್ (X) ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ರೈಲಿನ ಬೋಗಿಯೊಳಗೆ ಬೆರಣಿಗಳನ್ನು ಹಿಡಿದುಕೊಂಡು ಪ್ರಯಾಣಿಕರ ಬಳಿ ಹೋಗಿ, ಬೆರಣಿ ಬೇಕಾ? ಬೆರಣಿ ತಗೊಳ್ತೀರಾ? ಎಂದು ಜೋರಾಗಿ ಕೇಳುತ್ತಿದ್ದಾನೆ. ಇದನ್ನು ಕೇಳಿದ ತಕ್ಷಣ ಬೋಗಿಯಲ್ಲಿದ್ದ ಪ್ರಯಾಣಿಕರು ಒಮ್ಮೆ ಶಾಕ್ ಆಗಿ, ನಂತರ ಜೋರಾಗಿ ನಗಲು ಶುರು ಮಾಡುತ್ತಾರೆ.
ಗ್ಯಾಸ್ ಸಿಗದಿದ್ರೆ ಬೆರಣಿಯೇ ಗತಿ!
ವಿಡಿಯೋದಲ್ಲೊಬ್ಬ ಮಹಿಳೆ ಆ ವ್ಯಕ್ತಿಯನ್ನು ಕುತೂಹಲದಿಂದ ಪ್ರಶ್ನಿಸಿದಾಗ, ಆತ ನೀಡಿದ ಉತ್ತರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ನಿಮಗೆ ಅಡುಗೆ ಅನಿಲ (LPG) ಸಿಗುತ್ತಿದೆಯೇ? ಎಂದು ಆತ ಕೇಳುತ್ತಾನೆ. ಅದಕ್ಕೆ ಆಕೆ ಸಿಗುತ್ತಿದೆ, ಆದರೆ ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎನ್ನುತ್ತಾರೆ. ತಕ್ಷಣ ಆ ವ್ಯಕ್ತಿ, ನೋಡಿ, ತುರ್ತು ಪರಿಸ್ಥಿತಿಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದಿದ್ದರೆ ತೊಂದರೆಯಾಗಬಾರದು ಎಂದು ನಾನು ಬೆರಣಿ ಮಾರುತ್ತಿದ್ದೇನೆ ಎಂದಿದ್ದಾನೆ.

ವಿಡಂಬನೆಯೋ ಅಥವಾ ವಾಸ್ತವವೋ?

ಮೇಲ್ನೋಟಕ್ಕೆ ಇದು ಕಾಮಿಡಿ ವಿಡಿಯೋದಂತೆ ಕಂಡರೂ, ಇದರ ಹಿಂದೆ ಸದ್ಯದ ಜಾಗತಿಕ ಪರಿಸ್ಥಿತಿಯ ವಿಡಂಬನೆಯಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷದಿಂದಾಗಿ ಎಲ್‌ಪಿಜಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೋಟೆಲ್‌ಗಳು ಮತ್ತು ಸಣ್ಣ ಪುಟ್ಟ ತಿನಿಸು ಮಾರುವವರು ಈಗಾಗಲೇ ಗ್ಯಾಸ್ ಕೊರತೆಯಿಂದ ಹೈರಾಣಾಗಿದ್ದಾರೆ. ಗ್ಯಾಸ್ ಸಿಗದಿದ್ದರೆ ನಾವು ಮತ್ತೆ ಹಳೆಯ ಕಾಲದಂತೆ ಬೆರಣಿ, ಸೌದೆಯನ್ನೇ ಅವಲಂಬಿಸಬೇಕಾದ ದಿನಗಳು ದೂರವಿಲ್ಲ ಎಂಬ ಆತಂಕವನ್ನು ಈ ವಿಡಿಯೋ ವ್ಯಂಗ್ಯವಾಗಿ ಹೇಳುತ್ತಿದೆ.

ನೆಟ್ಟಿಗರ ಕಾಮೆಂಟ್ ಹಾವಳಿ

ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ನೆಟ್ಟಿಗರು ಇದಕ್ಕೆ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತದಲ್ಲಿ ಏನು ಬೇಕಾದರೂ ಸಾಧ್ಯ ಎಂದು ಕೆಲವರು ನಕ್ಕರೆ, ಇನ್ನು ಕೆಲವರು ಇದು ಕೇವಲ ತಮಾಷೆಯಲ್ಲ, ನಮ್ಮ ಭವಿಷ್ಯದ ಕರಾಳ ಮುನ್ಸೂಚನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ,(ಏಜನ್ಸೀಸ್​).