ನೀಟ್ (NEET) ಪ್ರತಿಭಟನೆಯ ವೇಳೆ ಹುಟ್ಟಿಕೊಂಡ ಪ್ರೀತಿ; ದೇವಸ್ಥಾನದಲ್ಲಿ ಮದುವೆ
- ದೆಹಲಿಯಲ್ಲಿ ನಡೆದಿದ್ದ ನೀಟ್ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ
- ನೀಟ್ (NEET) ಪ್ರತಿಭಟನೆಯ ವೇಳೆ ಹುಟ್ಟಿಕೊಂಡ ಪ್ರೀತಿ; ದೇವಸ್ಥಾನದಲ್ಲಿ ಮದುವೆ
- ಜಂತರ್ ಮಂತರ್ ಜೋಡಿ ಎಂದು ಖ್ಯಾತಿ ಗಳಿಸಿದ ಬಿಹಾರ್ ಮೂಲದ ಯುವಕ
ಬಿಹಾರ: ಕಳೆದೊಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್-ಮಂತರ್ನಲ್ಲಿ ನೀಟ್ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಹೋರಾಟದ ಕಾವು ದೇಶಾದ್ಯಂತ ವಿಸ್ತಿರಿಸಿದ ಹಿನ್ನಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗೆಯೇ ಕೇಂದ್ರ ಸರ್ಕಾರ ಕೂಡ ಪ್ರರೀಕ್ಷಾ ಅಕ್ರಮವನ್ನು ತಡೆಯಲು ಮಸೂದೆಯನ್ನು ರಚಿಸಿ, ಚರ್ಚೆ ಆರಂಭಿಸಿದೆ.
ಆದರೆ, ಈ ನೀಟ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಿಹಾರದ ಯುವಕ-ಯುವತಿಯೊಬ್ಬರು ಪ್ರತಿಭಟನೆ ಸಂದರ್ಭದಲ್ಲಿ ಪ್ರೇಮಜಾಲಕ್ಕೆ ಸಿಲುಕಿ, ಮದುವೆಯಾಗಿದ್ದ (Jantar Mantar Couple) ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಈಗ ಈ ಘಟನೆಯ ಸತ್ಯಾಸತ್ಯತೆ ಬಯಲಾಗಿದೆ.
ಹೋರಾಟಕ್ಕೆ ಹೋದರು ಮದುವೆಯಾದರು!
ಕಳೆದ ಕೆಲ ದಿನಗಳಿಂದ ಬಿಹಾರದ ಮೋಹನ್ ಎಂಬ ಯುವಕ ನೀಟ್ ವಿರೋಧಿ ಆಂದೋಲನದಲ್ಲಿ ಭಾಗವಹಿಸಲು ಜಂತರ್-ಮಂತರ್ಗೆ ತೆರಳಿದ್ದಾನೆ. ಅಲ್ಲಿ ಅವನಿಗೆ ವಿಡಿಯೋನಲ್ಲಿರುವ ಈ ಯುವತಿ ಪರಿಚಯವಾಗಿದ್ದಾಳೆ.
ಮೋಹನ್ ವಿಡಿಯೋನಲ್ಲಿ ಹೇಳುವಂತೆ, ನಾನು ಸುಮಾರು 15 ದಿನಗಳ ವರೆಗೆ ಜಂತರ್-ಮಂತರ್ನಲ್ಲಿದ್ದೆ. ಅಲ್ಲಿ ಸರಿಯಾಗಿ ಊಟ ಹಾಗೂ ನೀರು ದೊರೆಯುತ್ತಿರಲಿಲ್ಲ. ಆಗ ಈ ಯುವತಿ ನನಗೆ ಪ್ರತಿದಿನ ತಿಂಡಿ-ಊಟದ ವ್ಯವಸ್ಥೆ ಮಾಡಿದ್ದರು.
ಒಂದು ದಿನ ಪೊಲೀಸ್ ಲಾಠಿ ಚಾರ್ಜ್ನಲ್ಲಿ ನನ್ನ ತಲೆಗೆ ಏಟುಬಿದ್ದಿತು. ಅಂದೆ ಈಕೆಯೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದಳು. ಅಂದಿ ಇವಳು ನನ್ನನ್ನು ಪ್ರೀತಿಸುತ್ತೇನೆಂದು ಹೇಳಿದಳು. ನನಗೂ ಇವಳು ಇಷ್ಟವಾಗಿದ್ದ ಕಾರಣ ಅಲ್ಲಿಯೇ ಹತ್ತಿರದಲ್ಲಿದ್ದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡವು ಎಂದು ಮೋಹನ್ ವಿಡಿಯೋನಲ್ಲಿ ಹೇಳಿದ್ದಾನೆ.
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಭಾರಿ ವೈರಲ್ ಆಗದ್ದು, ಇದು ಇಲ್ಲಿವರೆರೆ ಸುಮಾರು 28 ಮಿಲಿಯನ್ (28 ಕೋಟಿ) ಗೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ವಿಡಿಯೋ ನಿಜವೇ?
ಆದರೆ, ಇಲ್ಲೊಂದು ಟ್ವಿಸ್ಟ್ಇದೆ, ಅಸಲಿಗೆ ಈ ವಿಡಿಯೋ ನಿಜವಲ್ಲವಂತೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸಚಿನ್ ಎನ್ನುವ ಕಂಟೆಂಟ್ ಕ್ರಿಯೆಟರ್ ಪ್ರಕಾರ, ಇವರು ಇದೇ ರೀತಿಯ ಹಾಸ್ಯಾತ್ಮಕ ವಿಡಿಯೋಗಳನ್ನು ಸೃಷ್ಟಿಸುತ್ತಾರೆ. ಆದ್ದರಿಂದ ಈ ಜಂತರ್-ಮಂತರ್ ವಿವಾಹದ ವಿಡಿಯೋ ಕೂಡ ಕೇವಲ ಕಾಲ್ಪನಿಕವಷ್ಟೇ ಎಂದು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಈ ವಿಡಿಯೋನ ಚರ್ಚೆ ದೇಶದ ತುಂಬೆಲ್ಲಾ ಹರಡಿದೆ ಎಂದರೆ ಮಾತ್ರ ಸುಳ್ಳಲ್ಲ, (ಏಜನ್ಸೀಸ್).