Akhilesh Yadav | ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ 
ದೇಶ

ದೇಶದ ಗಡಿಗಳಿಗಿಂತ ಲೋಕಸಭೆ ಕ್ಷೇತ್ರಗಳ ಗಡಿಯೇ ಬಿಜೆಪಿಗೆ ಮುಖ್ಯ: ಕೇಂದ್ರದ ಡಿಲಿಮಿಟೇಷನ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ | Akhilesh Yadav

ಪ್ರಸ್ತಾವಿತ ಡಿಲಿಮಿಟೇಷನ್​ ಮಸೂದೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿಯ ವಿರುದ್ಧ ತಮ್ಮ ಟೀಕೆಯನ್ನು ದ್ವಿಗುಣಗೊಳಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶನಿವಾರ(ನ. 28) ಆಡಳಿತ ಪಕ್ಷವು ರಾಷ್ಟ್ರೀಯ ಹಿತಾಸಕ್ತಿಗಿಂತ ಚುನಾವಣಾ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ನವದೆಹಲಿ: ಪ್ರಸ್ತಾವಿತ ಡಿಲಿಮಿಟೇಷನ್​ ಮಸೂದೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿಯ ವಿರುದ್ಧ ತಮ್ಮ ಟೀಕೆಯನ್ನು ದ್ವಿಗುಣಗೊಳಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶನಿವಾರ(ನ. 28) ಆಡಳಿತ ಪಕ್ಷವು ರಾಷ್ಟ್ರೀಯ ಹಿತಾಸಕ್ತಿಗಿಂತ ಚುನಾವಣಾ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಎಕ್ಸ್​ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ಬಿಜೆಪಿಗೆ ದೇಶಕ್ಕಿಂತ ಹೆಚ್ಚಾಗಿ ಚುನಾವಣೆಗಳೇ ಎಲ್ಲವೂ ಆಗಿವೆ. ಅದಕ್ಕಾಗಿಯೇ ಅದು ದೇಶದ ಗಡಿಗಳ ಬಗ್ಗೆ ಅಲ್ಲ, ಬದಲಾಗಿ ಲೋಕಸಭಾ ಕ್ಷೇತ್ರಗಳ ಗಡಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ-ಸಂಬಂಧಿತ ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆಪಿಯ ಅತಿದೊಡ್ಡ ರಾಜಕೀಯ ತಪ್ಪು ಎಂದು ಬಣ್ಣಿಸಿದ ಒಂದು ದಿನದ ಬಳಿಕ ಈ ಹೇಳಿಕೆ ನೀಡಿದ್ದಾರೆ. ನಿನ್ನೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಅವರು, 'ಡಿಲಿಮಿಟೇಷನ್ ಬಿಜೆಪಿಯ ರಾಜಕೀಯದ ಅತಿ ದೊಡ್ಡ ತಪ್ಪು ಎಂದಿದ್ದರು.

ಕೇಂದ್ರ ಸರ್ಕಾರ ನ. 30ರಿಂದ ಡಿ. 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡನೆ ಮಾಡಿ ಅಂಗೀಕಾರ ಪಡೆಯಲು ಯತ್ನಿಸುತ್ತಿದೆ. ಈ ಮಸೂದೆ ಅಂಗೀಕಾರವಾದರೇ ಪ್ರಸ್ತುತ ಲೋಕಸಭೆಯ ಒಟ್ಟು ಸದಸ್ಯ ಬಲ 543 ಇದ್ದು, ಶೇ. 50ರಷ್ಟು ಹೆಚ್ಚಳವಾದರೆ ಸ್ಥಾನಗಳ ಸಂಖ್ಯೆ ಸುಮಾರು 816ಕ್ಕೆ ಏರಿಕೆಯಾಗಲಿದೆ (ಏಜೆನ್ಸೀಸ್).