ಮತ್ತೆ ಪಕ್ಷ ಒಡೆಯುವ ಆತಂಕ: ಡಿಲಿಮಿಟೇಷನ್​ಗೆ ಬೆಂಬಲ ನೀಡುವ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್​ಗೆ ವಿವರಿಸಿದ ಶರದ್ ಪವಾರ್ | Sharad Pawar

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ (delimitation) ತನ್ನ ಪ್ರಮುಖ ಬೇಡಿಕೆಗಳು ಈಡೇರಿದರೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಶುಕ್ರವಾರ(ನ. 27) ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಚಂದ್ರ ಪವಾರ್ ಬಣ) ಹೇಳಿದೆ.
ಮತ್ತೆ ಪಕ್ಷ ಒಡೆಯುವ ಆತಂಕ: ಡಿಲಿಮಿಟೇಷನ್​ಗೆ ಬೆಂಬಲ ನೀಡುವ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್​ಗೆ ವಿವರಿಸಿದ ಶರದ್ ಪವಾರ್ | Sharad Pawar
Published on: 

ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ (delimitation) ತನ್ನ ಪ್ರಮುಖ ಬೇಡಿಕೆಗಳು ಈಡೇರಿದರೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಶುಕ್ರವಾರ(ನ. 27) ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಚಂದ್ರ ಪವಾರ್ ಬಣ) ಹೇಳಿದೆ.

ಆದರೆ ಇಂಡಿಯಾ ಬಣಕ್ಕೆ ಕೈಕೊಟ್ಟು ಕೇಂದ್ರ ಸರ್ಕಾರ ತರಲೊರಟಿರುವ ಡಿಲಿಮಿಟೇಷನ್​ಗೆ ಬೆಂಬಲ ನೀಡುವ ತಮ್ಮ ನಿರ್ಧಾರವನ್ನು 1999ರಲ್ಲಿ ತಾವು ಸ್ಥಾಪಿಸಿದ ಪಕ್ಷದ ಒಂದು ಸಣ್ಣ ಬಣವಾದ ಎನ್​ಸಿಪಿ(ಎಸ್​ಪಿ) ಮುಖ್ಯಸ್ಥರಾದ ಶರದ್ ಪವಾರ್ ಅವರು, ಕಾಂಗ್ರೆಸ್ ನಾಯಕತ್ವಕ್ಕೆ ಕರೆ ಮಾಡಿ ತಮ್ಮ ನಿರ್ಧಾರದ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಲಿಮಿಟೇಷನ್ ಮಸೂದೆಯನ್ನು ಯಾಕೆ ಬೆಂಬಲಿಸಬೇಕು? ಎಂಬ ವಿಷಯದಲ್ಲಿ ಆಪ್ತ ಮಿತ್ರರೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ 85 ವರ್ಷದ ಪವಾರ್, ತಮ್ಮ "ಅನಿವಾರ್ಯತೆ"ಯನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷವನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳಲು ಈ ಮಸೂದೆಯನ್ನು ಬೆಂಬಲಿಸುವುದು ಅತ್ಯಗತ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Also Read
ನ್ಯಾಯಾಧೀಶರ ನೇಮಕಾತಿಯಲ್ಲಿ ನಿರ್ಧಿಷ್ಠ ಸಮುದಾಯಕ್ಕೆ ಮನ್ನಣೆ ಆರೋಪ: ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ ಸಿಜೆಐ ಗವಾಯಿ | Ex CJI Gavai
ಮತ್ತೆ ಪಕ್ಷ ಒಡೆಯುವ ಆತಂಕ: ಡಿಲಿಮಿಟೇಷನ್​ಗೆ ಬೆಂಬಲ ನೀಡುವ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್​ಗೆ ವಿವರಿಸಿದ ಶರದ್ ಪವಾರ್ | Sharad Pawar

ಶುಕ್ರವಾರ ಬೆಳಗ್ಗೆ ಮಾತನಾಡಿದ್ದ ಸಂಸದೆ ಸುಪ್ರಿಯಾ ಸುಳೆ, ಮೊದಲು ಮಸೂದೆ ಬರಲಿ. ಸಂಪೂರ್ಣ ಮಸೂದೆಯು ನಮ್ಮ ಕೈಗೆ ಸಿಗಲಿ. ಮಸೂದೆ ನಮ್ಮ ಕೈಗೆ ಬಂದಾಗ, ನಾವೆಲ್ಲರೂ ಅದರ ಬಗ್ಗೆ ಚರ್ಚಿಸುತ್ತೇವೆ. ಒಂದು ವೇಳೆ ಆ ಮಸೂದೆಯು ರಾಷ್ಟ್ರಕ್ಕೆ ಒಳಿತಾಗಿದ್ದರೆ, ನಾವು ಅದನ್ನು ಬೆಂಬಲಿಸಬಹುದು ಎಂದು ಹೇಳಿದ್ದರು.

ಜಿಎಸ್‌ಟಿ (GST) ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ವಿರೋಧ ಪಕ್ಷಗಳೂ ಬೆಂಬಲಿಸಿದ್ದವು ಎಂಬುದನ್ನು ಉಲ್ಲೇಖಿಸಿದ್ದ ಅವರು, ಇದೇ ರೀತಿಯ ಬೆಳವಣಿಗೆ ಕ್ಷೇತ್ರ ಮರುವಿಂಗಡಣೆ ಮಸೂದೆಯ ವಿಷಯದಲ್ಲೂ ನಡೆಯಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ (ಏಜೆನ್ಸೀಸ್).