ರೆಸಾರ್ಟ್‌ನಲ್ಲಿ ಸ್ನೇಹಿತರೊಂದಿಗೆ ಮೋಜು ಮಾಡಲು ಹೋಗಿದ್ದ ಯುವಕ ಸಾವು
- ರೆಸಾರ್ಟ್‌ನಲ್ಲಿ ಸ್ನೇಹಿತರೊಂದಿಗೆ ಮೋಜು ಮಾಡಲು ಹೋಗಿದ್ದ ಯುವಕ ಸಾವು
- ಮೃತ ಯುವಕ 25 ವರ್ಷದ ಶ್ರೇಣಿಕ್ ಎಂದು ಗುರುತು
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಬೇಸಿಗೆಯಲ್ಲಿ ಅಥವಾ ಮಳೆಗಾಲದಲ್ಲಿ ಯುವಕರು ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಎಲ್ಲಿಗಾದರೂ ಪ್ರವಾಸಕ್ಕೋ ಇಲ್ಲವೇ ರೆಸಾರ್ಟ್ಗಳಿಗೆ ತೆರಳಿ ಕೆಲ ದಿನಗಳ ಕಾಲ ಮಜಾ ಮಾಡಿಕೊಂಡು ಬರುವುದು ಸಾಮಾನ್ಯವಾಗಿದೆ. ಆದರೆ ಹೀಗೆ ಮನಸ್ಸಿಗೆ ಶಾಂತಿ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಹೋದಾಗ, ಪ್ರಾಣಕ್ಕೆ ಕುತ್ತು ಬಂದರೆ ಏನಾಗಬೇಡ?
ಈಗ ಇಂತಹದ್ದೆ ಘಟನೆಯೊಂದು ಮಹಾತರಾಷ್ಟ್ರದ ರೆಸಾರ್ಟ್ವೊಂದರಲ್ಲಿ ನಡೆದಿದ್ದು, ಸ್ವಿಮ್ಮಿಂಗ್ ಪೂಲ್‌ಗೆ (Swimming Pool Accident) ಹಾರಿದ ಯುವಕನೊಬ್ಬ ಸಾವಿಗೀಡಾದ ದೃಶ್ಯ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಕೆಲ ಸ್ನೇಹಿತರು ರೆಸಾರ್ಟ್ವೊಂದರಲ್ಲಿ ತಮ್ಮ ರಜಾ ಸಮಯವನ್ನು ಕಳೆಯಲು ಬಂದಿದ್ದಾರೆ.
ಇಬ್ಬರು ಯುವಕರು ಸ್ವಿಮ್ಮಿಂಗ್ ಪೂಲ್ನಲ್ಲಿದ್ದರೆ, ಒಬ್ಬ ಯುವಕ ಪೂಲ್ನ ಹೊರಗೆ ನಿಂತು ಡಾನ್ಸ್ ಮಾಡುತ್ತಿರುತ್ತಾರೆ. ಇನ್ನೊಬ್ಬ ಯುವಕನು ಕಲ್ಲಿನ ಕಟ್ಟೆಯ ಮೇಲೆ ನಿಂತಿದ್ದು, ಮತ್ತೋರ್ವ ಯುವಕ ಇವನ್ನೆಲ್ಲಾ ವಿಡಿಯೋ ಮಾಡುತ್ತಿರುತ್ತಾನೆ.
ಈ ಕಲ್ಲಿನ ಕಟ್ಟೆ ಮೇಲೆ ನಿಂದಿದ್ದ ಯುವಕ ಸುಮಾರು 10-15 ಅಡಿಯಿಂದ ನೇರವಾಗಿ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾನೆ. ಆದರೆ ಆತ ಮತ್ತೆ ಮೇಲೆ ಬರದಿದ್ದನ್ನು ನೋಡಿ ಉಳಿದ ಯುವಕರು ಗಾಬರಿಯಾಗಿದ್ದಾರೆ. ನಂತರ ಆತನ ಬಳಿ ಯುವಕರು ಧಾವಿಸಿದ್ದಾರೆ. ಆದರೆ ಅವನು ಸತ್ತು ಹೋಗಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಈ ಮೃತ ಯುವಕನನ್ನು 25 ವರ್ಷದ ಸಾಂಗ್ಲಿ ನಿವಾಸಿ ಶ್ರೇಣಿಕ್ ಮಿಲಿಂದ್ ಟಕ್ಲೆ ಎಂದು ಗುರುತಿಸಲಾಗಿದ್ದು, ಈ ಘಟನೆ ಮಹಾರಾಷ್ಟ್ರದ ವೈರಿ ಎಂಬ ರೆಸಾರ್ಟ್‌ನಲ್ಲಿ ನಡೆದಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಡಿಗರ ಎದೆಯಲ್ಲಿ ನಡುಕ ಶುರುವಾಗಿದೆ. ಅಯ್ಯೋ ಈ ವಿಡಿಯೋ ನೋಡಿದ ಮೇಲೆ ನನಗೆ ಸ್ವಿಮ್ಮಿಂಗ್ ಪೂಲ್ ನೋಡಿದರೆ ಭಯವಾಗುತ್ತಿದ್ದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಇದು ಕೇವಲ 4 ಅಡಿ ಆಳವಿರುವ ಸ್ವಿಮ್ಮಿಂಗ್ ಪೂಲ್. ಇವನು ಅಷ್ಟು ಎತ್ತರದಿಂದ ಜಿಗಿದಾಗ ತಲೆ ನೆಲಕ್ಕೆ ಬಡಿದು ಸತ್ತಿದ್ದಾನೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮೋಜು, ಮಸ್ತಿ ನಶೆಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳಬೇಡಿ. ಬದುಕ್ಕಿದ್ದರೆ, ಇಂತಹ ಸಾವಿರ ರೆಸಾರ್ಟ್ಗಳನ್ನು ನೋಡಬಹುದೆಂದು ಮತ್ತೊಬ್ಬರು ಬುದ್ಧಿಮಾತನ್ನು ಹೇಳಿದ್ದಾರೆ, (ಏಜನ್ಸೀಸ್).