ಛತ್ ಪೂಜೆಯ ಸಂದರ್ಭದಲ್ಲಿ ದೆಹಲಿಯ ಯಮುನಾ ನದಿಯಲ್ಲಿ ಕಾಣಿಸಿಕೊಂಡ ವಿಷಕಾರಿ ಬಿಳಿ ನೊರೆ ಮತ್ತು ದೆಹಲಿ ಸಿಎಂ ರೇಖಾ ಗುಪ್ತಾ 
ದೇಶ

"ಯಮುನಾ ನದಿಯ 1 ಲೀಟರ್ ನೀರು ಕುಡಿಯಲಿ, ನಾನು ತಲೆ ಬಾಗುತ್ತೇನೆ!" ದೆಹಲಿ ಸಿಎಂ ರೇಖಾ ಗುಪ್ತಾಗೆ ಎಎಪಿ ನಾಯಕ ಓಪನ್ ಚಾಲೆಂಜ್! Yamuna River

ನವದೆಹಲಿ: ಭಾನುವಾರ (ನ.15) ದೆಹಲಿಯಲ್ಲಿ ನಡೆದ ಛತ್Vijayavani​ ಪೂಜೆಯ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ವಿಷಕಾರಿ ಬಿಳಿ ಬಣ್ಣದ ನೊರೆ ಕಂಡುಬಂದ ದೃಶ್ಯ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ದೆಹಲಿಯಲ್ಲಿ ಅಧಿಕಾರ ನಡೆಸುವ ಸರ್ಕಾರಗಳು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಸುರಿದರೂ ಯಮುನಾ ನದಿ ಏಕೆ ಸ್ವಚ್ಛವಾಗುತ್ತಿಲ್ಲ? ಎಂಬ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ.

ಈಗ ಇದೇ ಘಟನೆಯನ್ನು ರಾಜಕೀಯ ದಾಳವಾಗಿ ಪರಿವರ್ತಿಸಿಕೊಂಡಿರುವ ಆಮ್​​ ಆದ್ಮಿ ಪಕ್ಷ, ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ರೇಖಾ ಗುಪ್ತಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರೇಖಾ ಗುಪ್ತಾ 1 ಲೀಟರ್ ಕುಡಿಯಲಿ!

ಭಾನುವಾರ ಛತ್​ ಪೂಜೆ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಕಾಣಿಸಿಕೊಂಡ ಬಿಳಿ ಬಣ್ಣದ ವಿಷಕಾತಿ ನೊರೆ ಬಗ್ಗೆ ಮಾತನಾಡಿರುವ ಎಎಪಿ ಪಕ್ಷದ ದೆಹಲಿ ಮುಖ್ಯಸ್ಥ ಸೌರಭ್ ಭಾರದ್ವಾಜ್, ಬಿಜೆಪಿ ಸರ್ಕಾರ ಯಮುನಾ ನದಿಯನ್ನು ತಾವು ಸ್ವಚ್ಚ ಮಾಡಿದ್ದೇವೆಂದು ಹೇಳುತ್ತಾರೆ. ಆದರೆ ನಾನೊಂದು ಸವಾಲನ್ನು ನೀಡುತ್ತಿದ್ದೆನೆ.

ಯಮುನಾ ನದಿಯ ಕಾಳಿಂದಿ ಕುಂಜ್​ ಬಳಿಯ ಕೇವಲ ಒಂದು ಲೀಟರ್​ ನೀರನ್ನು ಸಿಎಂ ರೇಖಾ ಗುಪ್ತಾ ಕುಡಿಯಲಿ. ಅವರು ಅದನ್ನು ಕುಡಿದರೆ ನಾನು ಅವರಿಗೆ ತಲೆ ಬಾಗುತ್ತೇನೆ, ಯಮುನಾ ನದಿ ಸ್ವಚ್ಚವಾಗಿದೆ ಎಂದು ನಾನು ನಂಬುತ್ತೇನೆ ಜತೆಗೆ ಈ ಬಗ್ಗೆ ಎಂದಿಗೂ ಪ್ರಶ್ನೆ ಎತ್ತುವುದಿಲ್ಲವೆಂದು ಸೌರಭ್ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆಲ್ಲಾ ನೀವೇ ಕಾರಣ!

ಇನ್ನು ಸೌರಭ್ ಭಾರದ್ವಾಜ್ ಅವರ ಸವಾಲಿಗೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ವಕ್ತಾರ ಪ್ರವೀಣ್​ ಶಂಕರ್ ಕಪೂರ್​, ಕಾಳಿಂದಿ ಕುಂಜ್​ ಬಳಿ ವಿಷಕಾರಿ ಬಿಳಿ ಬಣ್ಣದ ನೊರೆ ಇರುವುದು ನಮಗೂ ತಿಳಿದಿದೆ. ಆದರೆ, ಇದಕ್ಕೆ ಕಾರಣ ಯಾರು? ದೆಹಲಿಯಲ್ಲಿ ಕಳೆದ 11 ವರ್ಷ ನಿಮ್ಮ ಆಮ್​ ಆದ್ಮಿ ಪಕ್ಷವೇ ಅಧಿಕಾರದಲ್ಲಿತ್ತು. ಅದಕ್ಕೂ ಮೊದಲು ಕಾಂಗ್ರೆಸ್​ ಸರ್ಕಾರವಿತ್ತು. ನಿಮ್ಮಿಬ್ಬರ ಬೇಜವಾಬ್ದಾರಿಯುತ ಆಡಳಿತದ ಫಲವಾಗಿ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ನಾವು ಯಮುನಾ ನದಿಯನ್ನು ಸ್ವಚ್ಚಗೊಳಿಸಲು ದಿನನಿತ್ಯ ಶ್ರಮ ವಹಿಸುತ್ತಿದ್ದೇವೆ. ನೀವು ಇಷ್ಟೊಂದು ವರ್ಷಗಳ ಕಾಲ ಮಾಡಿರುವ ಕಲ್ಮಶವನ್ನು ಒಂದೇ ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಯಮುನೆಯನ್ನು ನಮ್ಮ ಬಿಜೆಪಿ ಸರ್ಕಾರವೇ ಸ್ವಚ್ಚಗೊಳಿಸಲಿದೆ ಎಂಬ ಭರವಸೆ ನೀಡಿದ್ದಾರೆ, (ಏಜೆನ್ಸೀಸ್​).