ಇದು ಭಾರತದ ಕೊನೆಯ ಗ್ರಾಮ... ಇಲ್ಲಿ ಅಡಗಿದೆ ರಮಣೀಯ ಸೌಂದರ್ಯ, ಅಚ್ಚರಿಗಳ ಮಹಾಪೂರ! Last village in India  
ದೇಶ

ಇದು ಭಾರತದ ಕೊನೆಯ ಗ್ರಾಮ... ಇಲ್ಲಿ ಅಡಗಿದೆ ರಮಣೀಯ ಸೌಂದರ್ಯ, ಅಚ್ಚರಿಗಳ ಮಹಾಪೂರ! Last village in India

ಪ್ರಮುಖ ಮುಖ್ಯಾಂಶಗಳು

  • ಸಮುದ್ರ ಮಟ್ಟದಿಂದ 3,200 ಮೀಟರ್ ಎತ್ತರದಲ್ಲಿರುವ ಇಂಡೋ-ಟಿಬೆಟ್ ಗಡಿಯ ಸುಂದರ ತಾಣ
  • ಭಾರತದ ಕೊನೆಯ ಗ್ರಾಮ ಮನಾದಲ್ಲಿ ಅಡಗಿದೆ ರಮಣೀಯ ಸೌಂದರ್ಯ ಹಾಗೂ ಅಚ್ಚರಿಗಳು
  • ದ್ರೌಪದಿಗಾಗಿ ಭೀಮ ನಿರ್ಮಿಸಿದನೆಂಬ ಐತಿಹಾಸಿಕ ಭೀಮ್ ಪುಲ್ ಸೇತುವೆಯ ವಿಶೇಷತೆ
  • ಭಾರತದ ಕೊನೆಯ ಚಹಾ ಅಂಗಡಿ ಹಾಗೂ ಪವಿತ್ರ ವಸುಧಾರೆ ಜಲಪಾತದ ದರ್ಶನ
  • ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುವ ಉತ್ತರಾಖಂಡದ ಅದ್ಭುತ ಹಳ್ಳಿ
Last Village In India : ಪ್ರಕೃತಿ ಪ್ರೇಮಿಗಳು ಮತ್ತು ಹೊಸ ಹೊಸ ತಾಣಗಳನ್ನು ಅನ್ವೇಷಿಸಲು ಬಯಸುವವರಿಗೆ ಭಾರತದಲ್ಲಿ ಅನೇಕ ಸುಂದರ ಸ್ಥಳಗಳಿವೆ. ಅವುಗಳಲ್ಲಿ ಮನಾ ಗ್ರಾಮವೂ ಒಂದು. ಈ ಮನಾ ಗ್ರಾಮ ನಮ್ಮ ದೇಶದ ಕೊನೆಯ ಗಡಿಯಲ್ಲಿರುವ ಒಂದು ಅಚ್ಚರಿ ತಾಣ. ಇಲ್ಲಿನ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ಎಲ್ಲೂ ಸಿಗದ ರೋಚಕ ಅನುಭವವನ್ನು ನೀಡುತ್ತದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬದ್ರಿನಾಥ್ ಸಮೀಪವಿರುವ ಮನಾ ಗ್ರಾಮವು ಭಾರತದ ಕೊನೆಯ ವಾಸಯೋಗ್ಯ ಹಳ್ಳಿಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,200 ಮೀಟರ್ ಎತ್ತರದಲ್ಲಿ ಇಂಡೋ-ಟಿಬೆಟ್ ಗಡಿಯಲ್ಲಿ ನೆಲೆಸಿರುವ ಈ ಗ್ರಾಮವು ಅತ್ಯಂತ ಸುಂದರ ನೈಸರ್ಗಿಕ ದೃಶ್ಯಗಳನ್ನು ತನ್ನೊಡಲಲ್ಲಿ ಹೊದ್ದುಕೊಂಡಿದೆ.
ಈ ಹಳ್ಳಿಯ ಸುತ್ತಮುತ್ತ ಬದ್ರಿನಾಥ್ ದೇವಾಲಯ, ಜೋಷಿ ಮಠ, ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನ, ಒಲಿ ಕಣಿವೆ ಮುಂತಾದ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇದರ ಜೊತೆಗೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ನಂಬಲಾದ ಸುಂದರ ವಸುಧಾರೆ ಜಲಪಾತವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಇಲ್ಲಿನ ಸರಸ್ವತಿ ನದಿಯ ದಡದಲ್ಲಿರುವ ಭೀಮ್ ಪುಲ್ ಎಂಬ ಕಲ್ಲಿನ ಸೇತುವೆಯು ಮತ್ತೊಂದು ವಿಶೇಷತೆಯಾಗಿದೆ. ಸ್ವರ್ಗಕ್ಕೆ ಹೋಗುವ ಪ್ರಯಾಣದಲ್ಲಿ ಪಂಚಪಾಂಡವರು ಈ ಸೇತುವೆಯನ್ನು ದಾಟಿದ್ದರು ಹಾಗೂ ದ್ರೌಪದಿ ನದಿ ದಾಟಲು ಭೀಮನೇ ಈ ಸೇತುವೆಯನ್ನು ನಿರ್ಮಿಸಿದ್ದಾನೆ ಎಂಬ ನಂಬಿಕೆಯಿದೆ.
ಈ ಗ್ರಾಮದಲ್ಲಿ ಭಾರತದ ಕೊನೆಯ ಚಹಾ ಅಂಗಡಿ ಹಾಗೂ ಉಪಹಾರ ಗೃಹಗಳ ವಿಶೇಷ ಫಲಕಗಳನ್ನು ಕಣ್ಣಾರೆ ಕಾಣಬಹುದು. ಇಷ್ಟೆಲ್ಲಾ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಥಳಕ್ಕೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಆನಂದಿಸುತ್ತಾರೆ, (ಏಜೆನ್ಸೀಸ್​).