ಅಲ್​ಫಲಾಹ್ ಮೆಡಿಕಲ್ ಕಾಲೇಜು 
ದೇಶ

45 ಕೋಟಿ ರೂ. ಮೌಲ್ಯದ ಭೂಮಿ ವಂಚನೆ ಪ್ರಕರಣ; ಅಲ್​ ಫಲಾಹ್ ಗ್ರೂಪ್ ಅಧ್ಯಕ್ಷನನ್ನು ಬಂಧಿಸಿದ ಇಡಿ | Al Falah Group chairman

ನವದೆಹಲಿ: ನವದೆಹಲಿ ಮೆಟ್ರೋ ಸ್ಟೇಷನ್ ಬಳಿಯ ಕಾರು ಸ್ಫೋಟ ಪ್ರಕರಣದಲ್ಲಿ ಬಲವಾಗಿ ಕೇಳಿ ಬಂದಿದ್ದ ಅಲ್​ಫಲಾಹ್(Al Falah Group chairman) ಸಮೂಹದ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು, ಸುಮಾರು 45 ಕೋಟಿ ರೂ. ಭೂಮಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ ಶುಕ್ರವಾರ(ಮಾ. 27) ವರದಿಯಾಗಿದೆ.
ನಕಲಿ ದಾಖಲೆ ಸಿದ್ದಪಡಿಸಿ ನವದೆಹಲಿಯ ಮದನ್‌ಪುರ ಖಾದರ್ ಗ್ರಾಮದ ಖಾಸ್ರಾ ಸಂಖ್ಯೆ 792 ಹೊಂದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಇತರೆ ವ್ಯಕ್ತಿಗಳ ಜೊತೆ ಸೇರಿ ಜವಾದ್ ಅಹ್ಮದ್ ಸಿದ್ದಿಕಿ ವಂಚನೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ನಿಬಂಧನೆಗಳ ಅಡಿಯಲ್ಲಿ ಪ್ರಕರಣದಲ್ಲಿ ಬಂಧಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯ, ಇದುವರೆಗೆ ನಡೆಸಲಾದ ತನಿಖೆಯಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಭೂ ಸ್ವಾಧೀನಕ್ಕಾಗಿ ಮೋಸದ ರೀತಿಯಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ. ಇತರ ಹಲವಾರು ವ್ಯಕ್ತಿಗಳೊಂದಿಗೆ ಸೇರಿ ಜವಾದ್ ಅಹ್ಮದ್ ಸಿದ್ದಿಕಿ ನವದೆಹಲಿಯ ಮದನ್‌ಪುರ ಖಾದರ್ ಗ್ರಾಮದ ಖಾಸ್ರಾ ಸಂಖ್ಯೆ 792 ಹೊಂದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ವಂಚನೆ ನಡೆಸಿದ್ದಾರೆ. ಅದರ ಮೌಲ್ಯ 45 ಕೋಟಿ ರೂ/ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.
ಬಂಧನ ಬಳಿಕ ಸಿದ್ದಿಕಿಯನ್ನು ದೆಹಲಿಯ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಬಳಿಕ ಅಲ್ಲಿ ಅವರನ್ನು ಏಪ್ರಿಲ್ 4 ರವರೆಗೆ ವಿಚಾರಣೆಗಾಗಿ ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).