ಕಲಿಯಾಬೋರ್: ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರವನ್ನು ಶುರು ಮಾಡಿರುವ ಪ್ರಧಾನಿ, ಭಾನುವಾರ(ಜ. 18) ಅಸ್ಸಾಂನಲ್ಲಿ ಮತಗಳಿಗಾಗಿ ಕಾಂಗ್ರೆಸ್ ಒಳನುಸುಳುಕೋರರಿಗೆ ಭೂಮಿಯನ್ನು ಹಂಚಿಕೆ ಮಾಡಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ಕಲಿಯಾಬೋರ್ನಲ್ಲಿ ನಡೆದ ಸಾರ್ಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಶಕಗಳ ಕಾಲ ಅಸ್ಸಾಂನಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಒಳನುಸುಳುವಿಕೆಗೆ ಅವಕಾಶ ಕೊಟ್ಟಿತ್ತು. ಅಕ್ರಮ ವಲಸಿಗರು ಕಾಡುಗಳನ್ನು, ಪ್ರಾಣಿಗಳ ಕಾರಿಡಾರ್ ಹಾಗೂ ಸಾಂಪ್ರದಾಯಿಕ ಸಂಸ್ಥೆಗಳು ಅವುಗಳ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಋಣಾತ್ಮಕ ರಾಜಕೀಯ ಸಂದೇಶದಿಂದ ಜನರ ನಂಬಿಕೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಈಗ ದೇಶದ ಮತದಾರರ ಮೊದಲ ಆಯ್ಕೆ ಬಿಜೆಪಿಯಾಗಿದೆ. ಬಿಜೆಪಿ ಸರ್ಕಾರ ಅಸ್ಸಾಂನ ಗುರುತು, ಸಂಸ್ಕೃತಿಯನ್ನು ರಕ್ಷಿಸುತ್ತಿದೆ ಎಂದು ತಿಳಿಸಿದ್ದಾರೆ.
ಉತ್ತಮ ಆಡಳಿತ, ಅಭಿವೃದ್ಧಿಗಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಬಿಹಾರ ಚುನಾವಣೆಯಲ್ಲಿ 20 ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕವೂ ಬಾರಿ ಅಂತರದಿಂದ ಮತ್ತೆ ಗೆಲ್ಲಿಸಿದ್ದಾರೆ. ಮಹಾರಾಷ್ಟ್ರ ನಾಗರಿಕ ಚುನಾವಣೆಯಲ್ಲೂ ಜನರು ಬಿಜೆಪಿಗೆ ಮತ ಹಾಕಿದರು. ಕೇರಳದಲ್ಲೂ ಒಂದು ಪಾಲಿಕೆಯಲ್ಲಿ ಪಕ್ಷದಿಂದ ಮೇಯರ್ ಆಗಿದ್ದಾರೆ ಎಂದಿದ್ದಾರೆ (ಏಜೆನ್ಸೀಸ್).