ಇದೇ ಮೊದಲ ಬಾರಿಗೆ ಗೋಲ್ಡ್​ ಲೋನ್​ ಪಡೆಯುತ್ತಿದ್ದೀರಾ? ಈ 4 ವಿಷಯಗಳನ್ನು ಮರೆತರೆ ನಿಮಗೆ ದೊಡ್ಡ ನಷ್ಟ! Gold Loan 
ದೇಶ

ಮೊದಲ ಬಾರಿಗೆ ಗೋಲ್ಡ್​ ಲೋನ್​ ಪಡೆಯುತ್ತಿದ್ದೀರಾ? ಹಾಗಿದ್ರೆ, ಈ 4 ವಿಷಯಗಳನ್ನು ಮರೆತರೆ ನಿಮಗೆ ಬಿಗ್​ ಲಾಸ್​! Gold Loan

ನಿಮ್ಮ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟ ಬಳಿಕ, ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸಿದ ನಂತರವೇ ನಿಮ್ಮ ಚಿನ್ನವನ್ನು ಬ್ಯಾಂಕಿನಿಂದ ಮರಳಿ ಪಡೆಯಬಹುದು. ನೀವು ಮೊದಲ ಬಾರಿಗೆ ಗೋಲ್ಡ್​ ಲೋನ್​ ತೆಗೆದುಕೊಳ್ಳಲು ಬಯಸಿದರೆ, ಈ ಪ್ರಮುಖ ವಿಷಯಗಳನ್ನು ತಿಳಿಯುವುದು ಒಳಿತು.

Gold Loan: ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವೊಮ್ಮೆ ಸಿಬಿಲ್​ ಅಂಕಿ ಕಡಿಮೆಯಿದ್ದ ಕಾರಣವೋ ಅಥವಾ ಸರಿಯಾಗಿ ಸಾಲದ ಕಂತುಗಳನ್ನು ಕಟ್ಟದ ಹಿನ್ನೆಲೆಯೋ, ತುರ್ತು ಪರಿಸ್ಥಿತಿಯಲ್ಲಿ ಲೋನ್​ ದೊರೆಯುವುದಿಲ್ಲ. ಆಗ ಮೊದಲಿಗೆ ನೆನಪಾಗುವುದೇ ಕೈಯಲ್ಲಿರುವ ಉಂಗುರ, ಕತ್ತಿನಲ್ಲಿರುವ ಚಿನ್ನದ ಸರ. ಮನೆಯಲ್ಲಿದ್ದರೆ ಚಿನ್ನ, ಚಿಂತೆಯೂ ಏಕೆ ಇನ್ನಾ ಎಂಬ ಮಾತಿನಂತೆ, ಕಷ್ಟದ ಸಮಯದಲ್ಲಿ ಗೋಲ್ಡ್​ ನಿಮಗೆ ಇನ್ನೊಬ್ಬರ ಮುಂದೆ ಸಲಾಂ ಹೊಡೆಯುದಂತೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.

ಬಹುತೇಕರು ಚಿನ್ನವನ್ನು ಖರೀದಿಸಲು ಆಸಕ್ತಿ ಹೊಂದುವುದೇ ಈ ಕಾರಣಕ್ಕೆ. ಕಷ್ಟದ ಸಮಯದಲ್ಲಿ ಸಾಲಗಳು ಸಿಗದಿದ್ದರೆ, ಅದೇ ಬ್ಯಾಂಕ್‌ಗಳಲ್ಲಿ ತಮ್ಮ ಬಳಿಯಿರುವ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ನಿಮ್ಮ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟ ಬಳಿಕ, ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸಿದ ನಂತರವೇ ನಿಮ್ಮ ಚಿನ್ನವನ್ನು ಬ್ಯಾಂಕಿನಿಂದ ಮರಳಿ ಪಡೆಯಬಹುದು. ನೀವು ಮೊದಲ ಬಾರಿಗೆ ಗೋಲ್ಡ್​ ಲೋನ್​ ತೆಗೆದುಕೊಳ್ಳಲು ಬಯಸಿದರೆ, ಈ ಪ್ರಮುಖ ವಿಷಯಗಳನ್ನು ತಿಳಿಯುವುದು ಒಳಿತು.

ಅಗತ್ಯಕ್ಕೆ ತಕ್ಕಷ್ಟು ಸಾಲ?

ಚಿನ್ನದ ಮೇಲೆ ನೀವು ತೆಗೆದುಕೊಳ್ಳಬಹುದಾದ ಸಾಲದ ಮೊತ್ತವು ನಿಮ್ಮ ಚಿನ್ನದ ಬೆಲೆಯ ಮೇಲೆಯೇ ಸಂಪೂರ್ಣಣವಾಗಿ ನಿರ್ಧರಿತ. ನಿಮ್ಮ ಗೋಲ್ಡ್​ ಮೌಲ್ಯ ಹೆಚ್ಚಾದಷ್ಟೂ ಸಾಲದ ಮೊತ್ತವೂ ಹೆಚ್ಚಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಬಾರದು ಎನ್ನುತ್ತಾರೆ ತಜ್ಞರು. ಎಷ್ಟು ಬೇಕೋ ಅಷ್ಟು ಮಾತ್ರ ಲೋನ್​ ಪಡೆಯಬೇಕು. ಹೆಚ್ಚು ಸಾಲ ಪಡೆದರೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಅದಕ್ಕಾಗಿಯೇ, ನಿಮ್ಮ ಅಗತ್ಯಗಳ ಆಧಾರದ ಮೇಲೆ ಸಾಲವನ್ನು ತೆಗೆದುಕೊಳ್ಳಿ.

ಚಿನ್ನದ ಸಾಲದ ಮೇಲಿನ ಇತರ ಶುಲ್ಕಗಳು

ಚಿನ್ನದ ಸಾಲವನ್ನು ಹುಡುಕುತ್ತಿರುವಾಗ, ಕಡಿಮೆ ಬಡ್ಡಿದರದ ಮೂಲಕ ಹೋಗಬೇಡಿ. ಬ್ಯಾಂಕ್‌ಗಳು ಸಾಮಾನ್ಯವಾಗಿ ಗೋಲ್ಡ್ ಲೋನ್​ ಮೇಲೆ ಶೇ.8ರಿಂದ 11ರಷ್ಟು ಬಡ್ಡಿಯನ್ನು ವಿಧಿಸುತ್ತವೆ. ಆದಾಗ್ಯೂ, ಅನೇಕ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC ಕಂಪನಿಗಳು) ಶೇ.9ರಿಂದ 18 ರಷ್ಟು ವಿಧಿಸಬಹುದು. ಇದರೊಟ್ಟಿಗೆ, ಸಂಸ್ಕರಣಾ, ಆಭರಣ ಮೌಲ್ಯಮಾಪನ, ನವೀಕರಣ ಶುಲ್ಕಗಳು ಮತ್ತು ತಡವಾಗಿ ಪಾವತಿ ದಂಡವನ್ನು ಸಹ ಪಾವತಿಸಬೇಕಾಗಬಹುದು. ಆದ್ದರಿಂದ, ಚಿನ್ನದ ಸಾಲದೊಂದಿಗೆ ಅನ್ವಯವಾಗುವ ಇತರ ಶುಲ್ಕಗಳನ್ನು ತಿಳಿದುಕೊಳ್ಳಲು ಮರೆಯದಿರಿ.

ಚಿನ್ನದ ಸಾಲ ಪಾವತಿ ಪ್ರಕ್ರಿಯೆ ಹೇಗೆ?

ಪ್ರತಿಯೊಬ್ಬ ವ್ಯಕ್ತಿಯ ಆದಾಯ ಮತ್ತು ವೆಚ್ಚಗಳು ವಿಭಿನ್ನವಾಗಿವೆ. ಅದಕ್ಕಾಗಿಯೇ, ನಿಮ್ಮ ಸಾಲ ಪಾವತಿ ವಿಧಾನವನ್ನು ಬಹಳ ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಕೆಲವು ಹಣಕಾಸು ಕಂಪನಿಗಳು ಮಾಸಿಕ ಕಂತಿನ ಆಯ್ಕೆಗಳನ್ನು ನೀಡುತ್ತವೆ. ಇತರರು ಸಾಲದ ಗಡುವಿನೊಳಗೆ ಒಂದೇ ಬಾರಿಗೆ ಅಸಲು ಮೊತ್ತವನ್ನು ಪಾವತಿಸಲು ನಿಮ್ಮನ್ನು ಕೇಳುತ್ತಾರೆ. ಹೀಗಾಗಿಯೇ, ನಿಮ್ಮ ಆದಾಯ ಮತ್ತು ವೆಚ್ಚಗಳ ಆಧಾರದ ಮೇಲೆ ಸಾಲ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳುವುದು ಉತ್ತಮ.

ನಿಯಮಗಳನ್ನು ಮೊದಲು ತಿಳಿಯಿರಿ

ಚಿನ್ನದ ಸಾಲವನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಆಭರಣವನ್ನು ಎಲ್ಲಿ ಮತ್ತು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಅಲ್ಲದೆ, ನಿಮ್ಮ ಒಡವೆಗಳನ್ನು ವಿಮೆ ಮಾಡಬಹುದೇ ಎಂದು ಕೇಳಿ. ಅಲ್ಲದೆ, ನೀವು ಸಾಲವನ್ನು ನಿಗದಿತ ಅವಧಿಗೂ ಮೊದಲೇ ಕ್ಲೋಸ್​ ಮಾಡಿದರೆ, ಯಾವುದೇ ಹೆಚ್ಚುವರಿ ಶುಲ್ಕಗಳು ಸೇರಲಿದೆಯಾ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಅಕಸ್ಮಾತ್​ ಸಾಲದ ಹಣವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಯಮಗಳ ಪ್ರಕಾರ, ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು. ಹರಾಜಿನ ಬಳಿಕ, ಸಾಲದ ಹಣವನ್ನು ಕಟ್​ ಆಫ್​ ಮಾಡಿ, ಉಳಿದ ಹಣವನ್ನು ಸಾಲ ಪಡೆದಿದ್ದ ವ್ಯಕ್ತಿಗೆ ವಾಪಾಸ್​ ಮಾಡಲಾಗುತ್ತದೆ,(ಏಜೆನ್ಸೀಸ್).