ಮದುವೆ ಶಾಪಿಂಗ್‌ಗೆ 1 ಕೋಟಿ ಪಡೆದಿದ್ದ ಭಾವಿ ಪತ್ನಿ ಸಿಯಾ
- ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್!
- ಮದುವೆ ಶಾಪಿಂಗ್‌ಗೆ 1 ಕೋಟಿ ಪಡೆದಿದ್ದ ಭಾವಿ ಪತ್ನಿ ಸಿಯಾ
- ಸಿಯಾ, ಪ್ರಿಯಕರ ಚೇತನ್ ಜೊತೆ ಉದಯ್‌ಪುರಕ್ಕೆ ಹೋಗಿದ್ದೇಕೆ?
ಪುಣೆ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ (Ketan Agarwal Murder Case) ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಕೇತನ್ ಕೊಲೆ ಆರೋಪದಲ್ಲಿ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಿರುವ ಪೊಲೀಸರ ವಿಚಾರಣೆಯಲ್ಲಿ ಕೆಲ ಶಾಕಿಂಗ್ ಮಾಹಿತಿಗಳು ಬಹಿರಂಗಗೊಂಡಿವೆ.
ಕೇತನ್ನಿಂದ 1 ಕೋಟಿ ಪಡೆದಿದ್ದ ಸಿಯಾ!
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಿಯಾ ಮದುವೆ ಶಾಪಿಂಗ್ಗಾಗಿ ಕೇತನ್ನಿಂದ 1 ಕೋಟಿ ಹಣವನ್ನು ಪಡೆದುಕೊಂಡಿದ್ದಳೆಂದು ತಿಳಿದು ಬಂದಿದೆ. ನಂತರದ ದಿನಗಳಲ್ಲಿ ಸಿಯಾ ಆ ಹಣವನ್ನು ಕೇತನ್ಗೆ ಮರಳಿಸಿದ್ದು, ಕೇತನ್ ಅದನ್ನು ತನ್ನ ಉದ್ಯಮದಲ್ಲಿ ವಿನಿಯೋಗಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಿಶ್ಚಿತಾರ್ಥದ ಬಳಿಕ ಚೇತನ್ ಜೊತೆ ಉದಯ್ಪುರ್ ಟೂರ್!
ಫೆಬ್ರುವರಿಯಲ್ಲಿ ಕೇತನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಿಯಾ, ಕೆಲ ದಿನಗಳ ಬಳಿಕ ಪ್ರಿಯಕರ ಚೇತನ್ ಜೊತೆ ಉದಯ್ಪುರ್ಗೆ ಪ್ರವಾಸಕ್ಕೆ ತೆರಳಿದ್ದಳೆಂಬ ಮಾಹಿತಿ ದೊರೆತಿದೆ.
ಸಿಯಾ ಮತ್ತು ಚೇತನ್ ಉದಯ್‌ಪುರಕ್ಕೆ ಏಕೆ ತೆರಳಿದ್ದರು? ಇವರು ಅಲ್ಲಿಯೇ ಕೇತನ್ನನ್ನು ಕೊಲ್ಲಲು ಯೋಜನೆ ರೂಪಿಸಿದ್ದರೆ? ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದರೆ. ಆದರೆ ಅಲ್ಲಿಗೆ ತೆರಳಿದ್ದಾಗ ಸಿಯಾ ತನಗೆ ಕೇತನ್ನನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಚೇತನ್ಗೆ ಹೇಳಿದ್ದಳೆಂದು ಕೇಳಿಬಂದಿದೆ.
ಮುಂದುವರಿದ ಪೊಲೀಸ್ ತನಿಖೆ!
ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಕೆಲ ದಿನಗಳ ಹಿಂದೆ ಕೊಲೆ ನಡೆದ ಲೋಹಗಢ ಕೋಟೆಗೆ ತೆರಳಿ ಕೊಲೆಯನ್ನು ಮರುಸೃಷ್ಟಿ ಮಾಡಿದ್ದರು. ಈಗ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸಿಯಾ ಮತ್ತು ಚೇತನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).