ಪ್ರಕರಣದ ಜವಾಬ್ದಾರಿಯನ್ನು ಖ್ಯಾತ ವಕೀಲ ಉಜ್ವಲ್ ನಿಕಮ್ಗೆ ನೀಡಿದ ಸಿಎಂ ಫಡ್ನವೀಸ್
- "ಮಹಾರಾಷ್ಟ್ರದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ
- ಪ್ರಕರಣದ ಜವಾಬ್ದಾರಿಯನ್ನು ಖ್ಯಾತ ವಕೀಲ ಉಜ್ವಲ್ ನಿಕಮ್ಗೆ ನೀಡಿದ ಸಿಎಂ ಫಡ್ನವೀಸ್
- ಉಗ್ರ ಕಸಬ್ನನ್ನು ಗಲ್ಲಿಗೇರಿಸಿದ್ದ ವಕೀಲ ಉಜ್ವಲ್ ನಿಕಮ್
ಮಹಾರಾಷ್ಟ್ರ: ಸದ್ಯ ದೇಶದೆಲ್ಲಡೆ ಚರ್ಚೆ ಆಗುತ್ತಿರುವ ಪ್ರಕರಣ ಎಂದರೆ ಅದು ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಎಂದರೆ ಸುಳ್ಳಲ್ಲ. ಇಂದು (ಶುಕ್ರವಾರ, ಜೂನ್. 26) ಮೃತ ಕೇತನ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ರನ್ನು ಬೇಟಿ ಮಾಡಿದ್ದಾರೆ.
ಬೇಟಿ ಮಾಡಿದ ಮೃತನ ಕುಟುಂಬಕ್ಕೆ ಸಮಾಧಾನದ ಜೊತೆಗೆ ನ್ಯಾಯದ ಭರವಸೆ ನೀಡಿರುವ ಫಡ್ನವೀಸ್, ಕೇತನ್ ಅಗರ್ವಾಲ್ನ ಪ್ರಕರಣವನ್ನು ದೇಶ ಕಂಡ ಖ್ಯಾತ ವಕೀಲ ಉಜ್ವಲ್ ನಿಕಮ್ (Ujjwal Nikam in Ketan Agarwal Case) ಅವರಿಗೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಯಾರು ಈ ಉಜ್ವಲ್ ನಿಕಮ್?
ಉಜ್ವಲ್ ದಿಯೋರಾವ್ ನಿಕಮ್ ಇವರು ಮಹಾರಾಷ್ಟ್ರದ ಪ್ರಖ್ಯಾತ ವಕೀಲರಾಗಿದ್ದಾರೆ. ಇವರು ಬಿಜೆಪಿ ಸಂಸದ ಪ್ರಮೋದ್ ಮಹಾಜನ್ ಕೊಲೆ ಪ್ರಕರಣ, 1993 ರ ಬಾಂಬೆ ಸರಣಿ ಬಾಂಬ್ ಸ್ಪೋಟ ಪ್ರರಕಣ, ಗೀತ ರಚನಾಕಾರ ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ ಅಷ್ಟೇ ಅಲ್ಲದೆ 2008 ರ ಬಾಂಬೆ ಉಗ್ರದಾಳಿ ಆರೋಪಿ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ನೀಡಲು ಕಾರಣರಾದ ವಕೀಲರಾಗಿದ್ದಾರೆ.
ದೇಶಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಗಮನಿಸಿ 2016 ರಲ್ಲಿ ಇವರಿಗೆ ಭಾರತದ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 2024 ರಲ್ಲಿ ಇವರು ಬಿಜೆಪಿ ಇಂದ ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. 2025 ರಲ್ಲಿ ಇವರನ್ನು ರಾಷ್ಟ್ರಪತಿಗಳು ಕಾನೂನು ರಂಗದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಸದ್ಯ ಬಾಲಿವುಡ್ ನಟ ರಾಜಕುಮಾರ್ ರಾವ್ ಪ್ರಹಾರ್: ದಿ ಉಜ್ವಲ್ ನಿಕಮ್ ಸ್ಟೋರಿ ಎಂಬ ಸಿನಿಮಾವನ್ನು ನಿರ್ಮಿಸಿದ್ದು, ಇದು ಅಗಸ್ಟ್ 7, 2026 ರಂದು ಬಿಡುಗಡೆಯಾಗಲಿದೆ.
ಸಿಎಂ ಫಡ್ನವೀಸ್ ಭರವಸೆ ನೀಡಿದ್ದಾರೆ!
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರನ್ನು ಬೇಟಿ ಮಾಡಿ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಶಾಲ್ ಅಗರ್ವಾಲ್, ನನ್ನ ಮಗಳ ಕೇತನ್ ಸಾವಿಗೆ ನ್ಯಾಯ ದೊರಕಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ತನಿಖೆ ವೇಗವಾಗಿ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆಂದು ಹೇಳಿದರು.
ನನ್ನ ಮಗ ಕೇತನ್ ತಲೆ ಮೇಲೆ ಚಿಕ್ಕ ಹೇರ್ ಪ್ಯಾಚ್ ಹಾಕಿಕೊಳ್ಳುತ್ತಿದ್ದ, ಇದರ ಬಗ್ಗೆ ಹೆಣ್ಣಿನ ಮನೆಯವರಿಗೆ ಮೊದಲೇ ತಿಳಿಸಿದ್ದೆವೆ. ಆದರೆ ಈ ಕಾರಣಕ್ಕೆ ನನ್ನ ಮಗಳನ್ನು ಆಕೆ ಕೊಂದಳೇ? ಏನು ತಿಳಿಯದಾಗಿದೆ ಎಂದು ವಿಶಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಏನಿದು ಕೇತನ್ ಅಗರ್ವಾಲ್ ಪ್ರಕರಣ?
ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್‌ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್ನನ್ನು ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ.
22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್).