ನವದೆಹಲಿ: ತನ್ನನ್ನು ತಾನು ಸಾಮಾನ್ಯ ಮನಷ್ಯು, ಸಾಮಾನ್ಯ ಪ್ರಜೆ (ಆಮ್ ಆದ್ಮಿ) ಎಂದು ಹೇಳಿಕೊಳ್ಳತ್ತಲೇ, ರಾಷ್ಟ್ರ ರಾಜಧಾನಿ ದೆಹಲಿಯ ಸಿಎಂ ಪಟ್ಟವೇರಿದ ನಾಯಕನೆಂದರೆ, ಅದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಆಗಿದ್ದಾರೆ. ಇವರು ತಮ್ಮನ್ನು ಸಾಮಾನ್ಯನೆಂದು ಕರೆದುಕೊಳ್ಳುತ್ತಲೇ, ಅಸಮಾನ್ಯ, ವೈಭವೋಪೇರಿತ ಜೀವನ ನಡೆಸಿದರು ಎನ್ನವುದು ಭಾರತೀಯ ಜನತಾ ಪಕ್ಷ (ಬಿಜೆಪಿ) ದ ವಾದವಾಗಿತ್ತು.
ಈ ಕಾರಣಕ್ಕಾಗಿಯೇ, ಕೇಜ್ರಿವಾಲ್ ದೆಹಲಿಯಲ್ಲಿ ಕಟ್ಟಿಸುತ್ತಿದ್ದ ಬಂಗಲೆಗೆ ಶೀಷ್ ಮಹಲ್ ಎಂದು ಕರೆದಿದ್ದರು. ಇಂದು ಬಿಜೆಪಿ, ಈ ಸರ್ಕಾರಿ ನಿವಾಸದ ವೀಕ್ಷಣೆಗೆ ಮುಕ್ತ ಅವಕಾಶವನ್ನು ಏರ್ಪಡಿಸಿದ್ದು, ಮಾಜಿ ಮುಖ್ಯಮಂತ್ರಿ ಎಷ್ಟು ಶ್ರೀಮಂತ್ ಜೀವನ ನಡೆಸುತ್ತಿದ್ದರು ಎಂದು ತೋರ್ಪಡಿಸಲು ಮುಂದಾಗಿದೆ.
ದೆಹಲಿಯ ಫ್ಲಾಗ್ಸ್ಟಾಫ್ ರಸ್ತೆಯಲ್ಲಿರುವ ಈ ಶೀಷ್ ಮಹಲ್ ಅನ್ನು ಪತ್ರಕರ್ತರಿಗೆ ಹಾಗೂ ಜನ ಸಾಮಾನ್ಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವ ದೆಹಲಿ ಸರ್ಕಾರ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಅಂದು ಅಧಿಕಾರದಲ್ಲಿದ್ದ ಅರವಿಂದ ಕೇಜ್ರಿವಾಲ್ ಅನುಭವಿಸಿದ ಐಷಾರಾಮಿ ಜೀವನವನ್ನು ಜಗಜ್ಜಾಹಿರು ಮಾಡುತ್ತಿದೆ.
ಇಲ್ಲಿ, ಲಕ್ಷಾಂತರ ಬೆಲೆಯ ಪಿಠೋಪಕರಣಗಳು, ಕಾರ್ಪೆಟ್, ಟಿವಿ ಸೆಟ್ ಮೊದಲಾದ ವಸ್ತುಗಳ ಬೆಲೆಯನ್ನು ಕೂಡ ನಮೂದಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಆದರೆ, ದೇವರ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ ಫೋಟೊ ಜತೆಗೆ ಜೀಸಸ್ ಫೋಟೊವನ್ನು ಲಗತ್ತಿಸಿ ಅದನ್ನು ದೇವರ ಕೋಣೆಯಲ್ಲಿಟ್ಟಿರುವ ಫೋಟೊ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಈ ಶೀಷ್ ಮಹಲ್ ನಿರ್ಮಾಣಕ್ಕೆ ಸುಮಾರು 56 ಕೋಟಿ ಖರ್ಜಾಗಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದು, ಕೇವಲ ದೇವರ ಕೋಣೆಗೆ ಸುಮಾರು 6 ಲಕ್ಷ ಖರ್ಚು ಮಾಡಿದ್ದಾರೆಂದು ತಿಳಿಸಲಾಗಿದೆ.
ಈ ದೇವರ ಕೋಣೆಯಲ್ಲಿ, ಶಿವ -ಪಾರ್ವತಿ, ಆಂಜನೇಯ, ದುರ್ಗೆ ಜತೆಗೆ, ಕೆಲ ಅಧ್ಯಾತ್ಮಕ ಗುರುಗಳ ಫೋಟೊಗಳು ಕೂಡ ಇವೆ. ಆದರೆ, ಹಿಂದೂಗಳ ಆರಾಧ್ಯ ದೈವವಾದ ಪ್ರಭು ಶ್ರೀರಾಮನ ಫೋಟೊ ಫ್ರೇಮ್ನಲ್ಲಿ ಕ್ರೈಸ್ತ ಧರ್ಮೀಯರ ಜೀಸಸ್ನ ಫೋಟೊವನ್ನು ಸೇರಿಸಿರುವುದು ಹಿಂದೂಗಳ ಕೋಪಕ್ಕೆ ಕಾರಣವಾಗಿದೆ.
ಕೇಜ್ರಿವಾಲ್ಗೆ ಜೀಸಸ್ ಮೇಲೆ ಅಷ್ಟು ಪ್ರೀತಿ ಇದ್ದರೆ ಒಂದೋ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲಿ, ಇಲ್ಲವೇ ಜೀಸಸ್ನ ಫೋಟೊವನ್ನು ಪ್ರತ್ಯೇಕವಾಗಿಡಲಿ. ಅದನ್ನು ಬಿಟ್ಟು ಹಿಂದೂಗಳ ದೇವರೊಟ್ಟಿಗೆ ಜೀಸಸ್ನ ಫೋಟೊವನ್ನು ಸೇರಿಸುವ ಅತಿ ಬುದ್ಧಿವಂತಿಕೆ ಮಾಡಬಾರದಿತ್ತೆಂದು ನೆಟ್ಟಿಗರು ಸೋಷಿಯಲ್ ಮೀಡಿಯಾನಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಸುಮಾರು 56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಭವ್ಯ ಬಂಗಲೆಯಲ್ಲಿ, 5.8 ಲಕ್ಷ ರೂಪಾಯಿ ಮೌಲ್ಯದ ಪೌಡರ್ ರೂಮ್, 41 ಲಕ್ಷ ರೂಪಾಯಿ ವೆಚ್ಚದ ಸಭಾಂಗಣ ಹಾಗೂ ಸುಮಾರು 7.5 ಲಕ್ಷ ರೂಪಾಯಿ ಮೌಲ್ಯದ ಲಾಬಿ ಪ್ರದೇಶವಿದೆ.
ಇದಲ್ಲದೆ, 30 ಲಕ್ಷ ರೂಪಾಯಿ ಬೆಲೆಯ ಟಿವಿ ಯೂನಿಟ್, 11.56 ಲಕ್ಷ ರೂಪಾಯಿಯ ಝುಮರ್, 6.71 ಲಕ್ಷ ರೂಪಾಯಿ ವೆಚ್ಚದ ದೇವರ ಮನೆ, 7 ಲಕ್ಷ ರೂಪಾಯಿಯ ಕಿಚನ್ ಡಂಬ್ವೇಟರ್ ಮತ್ತು 5.47 ಲಕ್ಷ ರೂಪಾಯಿ ಮೌಲ್ಯದ ಎರಡು ಆಸನಗಳ ಸೋಫಾ ಬಂಗಲೆಯ ಐಷಾರಾಮಿತನಕ್ಕೆ ಸಾಕ್ಷಿಯಾಗಿವೆ.
ಹಾಗೆಯೇ, ಸುಮಾರು 5.7 ಲಕ್ಷ ರೂಪಾಯಿ ಹಾಗೂ 5.69 ಲಕ್ಷ ರೂಪಾಯಿ ಮೌಲ್ಯದ ಕರ್ಟನ್ಗಳು, 10 ಲಕ್ಷ ರೂಪಾಯಿ ಬೆಲೆಯ ಸೈಡ್ ಟೇಬಲ್ಗಳು, 5.58 ಲಕ್ಷ ರೂಪಾಯಿ ಮೌಲ್ಯದ ಕುರ್ಚಿಗಳು ಮತ್ತು 6.79 ಲಕ್ಷ ರೂಪಾಯಿಯ ಸೆಂಟರ್ ಟೇಬಲ್ಗಳನ್ನು ಇಲ್ಲಿ ಅಳವಡಿಸಲಾಗಿದೆ. ಒಟ್ಟಾರೆ ಈ ಭವ್ಯ ಬಂಗಲೆಯು 8 ಮಲಗುವ ಕೋಣೆಗಳು, 12 ಶೌಚಾಲಯಗಳು, ಜಕುಝಿ ಬಾತ್, ಸ್ಪಾ, ಐದು OLED ಟಿವಿಗಳು ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ, (ಏಜೆನ್ಸೀಸ್).