ಸೈಫ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಕರೀನಾ ಕಪೂರ್ ಸ್ಪೆಷಲ್ ಫೋಟೋ ಶೇರ್ 
ದೇಶ

45ರ ಹರೆಯದಲ್ಲೂ ಕರೀನಾ ಕಪೂರ್ ಫಿಟ್‌ನೆಸ್ ಕಮಾಲ್! ಬಿಕಿನಿ ಫೋಟೋ ವೈರಲ್... | Kareena Bikini Photo

ಪ್ರಮುಖ ಮುಖ್ಯಾಂಶಗಳು

  • 45ರ ಹರೆಯದಲ್ಲೂ ಕರೀನಾ ಕಪೂರ್ ಸಖತ್​ ಫಿಟ್‌
  • ಸೈಫ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಕರೀನಾ ಸ್ಪೆಷಲ್ ಫೋಟೋ
  • ಕರೀನಾ-ಸೈಫ್ ಜೋಡಿಯ ಫೋಟೋಗಳು ಭಾರೀ ವೈರಲ್
Kareena Kapoor's fitness: ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೊಮ್ಮೆ ತಮ್ಮ ಫಿಟ್‌ನೆಸ್ ಹಾಗೂ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೈಫ್ ಅಲಿ ಖಾನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕರೀನಾ ಹಂಚಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕರೀನಾ ಫಿಟ್‌ನೆಸ್​ಗೆ ಫ್ಯಾನ್ಸ್​

45ರ ಹರೆಯದಲ್ಲೂ ಕರೀನಾ ಕಪೂರ್ ಅವರ ಫಿಟ್‌ನೆಸ್ ನೋಡಿ ಫ್ಯಾನ್ಸ್​ ಅಚ್ಚರಿಯಾಗಿದ್ದಾರೆ. ಸೈಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಂಚಿಕೊಂಡ ಫೋಟೋಗಳಲ್ಲಿ ಕರೀನಾ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಸ್ಟೈಲ್ ಹಾಗೂ ಫಿಟ್‌ನೆಸ್‌ಗೆ ಭಾರೀ ಮೆಚ್ಚುಗೆ ವ್ಯಕ್ತಗಿದೆ. ಆದರೆ ಕರೀನಾ ಅವರ ಈ ಫಿಟ್‌ನೆಸ್ ಹಿಂದೆ ಕೇವಲ ಜಿಮ್ ವರ್ಕೌಟ್ ಮಾತ್ರವಲ್ಲ. ಯೋಗ, ಸ್ಟ್ರೆಂಥ್ ಟ್ರೈನಿಂಗ್ ಹಾಗೂ ನಿಯಮಿತ ವ್ಯಾಯಾಮಕ್ಕೆ ಅವರು ಆದ್ಯತೆ ನೀಡುತ್ತಾರೆ.

ಒಟ್ಟಿಗೆ ವರ್ಕೌಟ್ ಮಾಡುವ ದಂಪತಿ

ಇನ್ನು, ಕರೀನಾ ಮತ್ತು ಸೈಫ್ ಇಬ್ಬರೂ ಒಟ್ಟಿಗೆ ವರ್ಕೌಟ್ ಹಾಗೂ ಯೋಗ ಮಾಡುವುದಾಗಿ ಈ ಹಿಂದೆ ಹೇಳಿಕೊಂಡಿದ್ದಾರೆ. ಕರೀನಾ ಅವರ ಫಿಟ್‌ನೆಸ್ ರೂಟೀನ್‌ನಲ್ಲಿ ದೇಹದ ವಿವಿಧ ಭಾಗಗಳಿಗೆ ಅನುಗುಣವಾದ ವ್ಯಾಯಾಮಗಳು, ತೂಕದ ವ್ಯಾಯಾಮ ಹಾಗೂ ಯೋಗದಂತಹ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತೆ. ನಿಯಮಿತ ವ್ಯಾಯಾಮದ ಜತೆ ಆರೋಗ್ಯಕರ ಜೀವನಶೈಲಿಯೂ ಮನುಷ್ಯ ಗಟ್ಟಿಮುಟ್ಟಾಗಿರಲು ಪ್ರಮುಖ ಕಾರಣವಾಗಿದೆ.

ಸೈಫ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಫೋಟೋ

ಸೈಫ್ ಅಲಿ ಖಾನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಕರೀನಾ ಹಂಚಿಕೊಂಡಿರುವ ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, 45ರಲ್ಲೂ ಇಷ್ಟು ಫಿಟ್ ಹೇಗೆ? ಎಂಬ ಚರ್ಚೆಯೂ ಶುರುವಾಗಿದೆ,(ಏಜೆನ್ಸೀಸ್​).