ಬೈಕ್ ಮೇಲಿದ್ದ ಯುವತಿ ಜೊತೆ ಅನುಚಿತ ವರ್ತನೆ
- ರಾಜಸ್ಥಾನದ ಜೈಪುರದಲ್ಲಿ ಬೀದಿ ಕಾಮಣ್ಣರ ಹಾವಳಿ
- ಬೈಕ್ ಮೇಲಿದ್ದ ಯುವತಿ ಜೊತೆ ಅನುಚಿತ ವರ್ತನೆ
- ನೆಟ್ಟಿಗರಿಂದ ಕಠಿಣ ಕ್ರಮಕ್ಕೆ ಆಗ್ರಹ
ಜೈಪುರ್: ನಮ್ಮ ದೇಶದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಎಷ್ಟೇ ಕಾಳಜಿ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡರು ಸಹ ರೋಡ್ ಸೈಡ್ ರೋಮಿಯೋಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ಇತ್ತೀಚೆಗೆ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾನಲ್ಲಿ ವೈರಲ್ (Viral Video) ಆಗುತ್ತಿದ್ದು, ವಿಡಿಯೋ ನೋಡಿದ ಜನ ಆ ಯುವಕನ ಬಂಧನಕ್ಕೆ ಆಗ್ರಹಿಸಿದ್ದಾರೆ.
ವಿಡಿಯೋನಲ್ಲೇನಿದೆ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಒಬ್ಬ ಹುಡುಗಿ ಬೈಕ್ನ ಹಿಂದೆ ಕುಳಿತು ರೋಡ್ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಆಗ ಇಬ್ಬರು ಯುವಕರು ಹಿಂದಿನಿಂದ ಬೈಕ್ ಮೇಲೆ ಬಂದು, ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿ ಮುಂದೆ ಹೋಗುತ್ತಾರೆ.
ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ ಈ ಘಟನೆ ಬೆಳಗಿನ ಸಮಯದಲ್ಲಿ ನಡೆದಿದ್ದು, ಜೈಪುರದಲ್ಲಿ ಮಹಿಳೆಯರು ಬೆಳಗಿನ ವೇಳೆಯಲ್ಲೇ ಸುರಕ್ಷಿತವಾಗಿಲ್ಲ, ಇನ್ನು ರಾತ್ರಿಯ ವೇಳೆ ಹೇಗೋ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಫುಲ್ ಗರಂ ಆಗಿದ್ದಾರೆ.
ಇಂತಹ ಜನರಿಗೆ ಕೂಡಲೇ ಕಾನೂನು ಕ್ರಮ ಕೈಗೊಂಡರೆ ಮಾತ್ರ ಸುಧಾರಿಸುತ್ತಾರೆ ಎಂದು ಒಬ್ಬರು ಹೇಳಿದರೆ, ಈ ಹುಡುಗನ ಮನೆಯಲ್ಲಿ ಯಾರು ಅಕ್ಕ-ತಂಗಿ ಇಲ್ಲವೆಂದು ಕಾಣುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಯುವಕ ಯಾರೆಂದು ಪತ್ತೆ ಮಾಡಿ ಕೂಡಲೇ ಪೊಲೀಸರು ತಮ್ಮ ಲಾಠಿ ರುಚಿ ತೋರಿಸಬೇಕೆಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್).