ದೇಶ

ಕೇವಲ ನಮಸ್ತೆ, ಯಾವುದೇ ಮಾತುಕತೆಯಿಲ್ಲ: ಪ್ರಧಾನಿ ಮೋದಿ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ | Sonia Gandhi

ಸೋನಿಯಾ ಗಾಂಧಿಯವರು, ಮೋದಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ತಮ್ಮಿಬ್ಬರ ನಡುವೆ ಎಂದಿಗೂ ಯಾವುದೇ ಅರ್ಥಪೂರ್ಣ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿಯವರು ತಮ್ಮೊಂದಿಗೆ ಎದುರಾದಾಗ ತಮ್ಮನ್ನು ಕಣ್ಣಲ್ಲಿ ನೇರವಾಗಿ ನೋಡುವುದನನ್ನು ತಪ್ಪಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 10) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಎಲ್ಲಾ ಪುಸ್ತಕ ಮಳಿಗೆಗಳಿಗೆ ರವಾನೆಯಾಗಿದೆ. ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸೋನಿಯಾ ಗಾಂಧಿಯವರು, ಮೋದಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ತಮ್ಮಿಬ್ಬರ ನಡುವೆ ಎಂದಿಗೂ ಯಾವುದೇ ಅರ್ಥಪೂರ್ಣ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿಯವರು ತಮ್ಮೊಂದಿಗೆ ಎದುರಾದಾಗ ತಮ್ಮನ್ನು ಕಣ್ಣಲ್ಲಿ ನೇರವಾಗಿ ನೋಡುವುದನನ್ನು ತಪ್ಪಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ತಮ್ಮ ಸಂವಹನವು ಸಾಮಾನ್ಯವಾಗಿ ಅರೆ-ಅಧಿಕೃತ ಸಂದರ್ಭಗಳಲ್ಲಿ, ವಿಶೇಷವಾಗಿ ಸಂಸತ್ತಿನ ಅಧಿವೇಶನಗಳ ಕೊನೆಯಲ್ಲಿ ಲೋಕಸಭಾ ಸ್ಪೀಕರ್ ಕೊಠಡಿಯಲ್ಲಿ ನಾಯಕರು ಒಟ್ಟುಗೂಡಿದಾಗ ಔಪಚಾರಿಕ ಶುಭಾಶಯಗಳಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ನಮಸ್ತೆ ವಿನಿಮಯ ಬಿಟ್ಟರೇ, ವಿರಳವಾಗಿ ತೊಡಗಿಸಿಕೊಳ್ತಾರೆ ಎಂದಿದ್ದಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ವಿವಿಧ ಪಕ್ಷಗಳ ನಾಯಕರು ಸೌಹಾರ್ದಯುತ ಮತ್ತು ಬೆಚ್ಚಗಿನ ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಂಡಿದ್ದ ಹಿಂದಿನ ರಾಜಕೀಯ ಸಂಬಂಧವನ್ನು ವ್ಯತಿರಿಕ್ತಗೊಳಿಸಿದ್ದಾರೆ. ಔಪಚಾರಿಕ ಹುಟ್ಟುಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹೊರತುಪಡಿಸಿ, ಅವರು ಎಂದಿಗೂ ಗಂಭೀರವಾದ ಸಂಭಾಷಣೆಯನ್ನು ನಡೆಸಿಲ್ಲ. ಆದಾಗ್ಯೂ, ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಮೋದಿ ಒಮ್ಮೆ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದರು ಎಂದು ತಿಳಿಸಿದ್ದಾರೆ.

ಮುಂದುವರೆದು, ಸೋನಿಯಾ ಗಾಂಧಿಯವರು ಪ್ರಧಾನಿ ಮೋದಿ ಮತ್ತು ತಮ್ಮ ನಡುವಿನ ಅಂತರವನ್ನು ವೈಯಕ್ತಿಕಕ್ಕಿಂತ ಸೈದ್ಧಾಂತಿಕ ಎಂದು ವಿವರಿಸಿದ್ದಾರೆ. ಅವರು ಭಾರತದ ಬಗ್ಗೆ ಮೂಲಭೂತವಾಗಿ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ತಾವು ಸಮಾನತೆ ಮತ್ತು ಸಾಮಾಜಿಕ ನ್ಯಾಯದಲ್ಲಿ ಬೇರೂರಿರುವ ಸಮಗ್ರ, ಜಾತ್ಯತೀತ ರಾಷ್ಟ್ರಕ್ಕಾಗಿ ನಿಂತಿದ್ರೆ, ಮೋದಿಯವರ ವಿಶ್ವ ದೃಷ್ಟಿಕೋನವನ್ನು ಆರ್‌ಎಸ್‌ಎಸ್ ಸಿದ್ಧಾಂತವು ರೂಪಿಸಿದೆ ಎಂದಿದ್ದಾರೆ.

ಪ್ರಧಾನಮಂತ್ರಿಯವರು ಸಂಸತ್ತಿನಲ್ಲಿ ಬಳಸುವ ಭಾಷಾಶೈಲಿಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ, ಅವರ ಭಾಷಣಗಳು ಆಗಾಗ್ಗೆ ಚುನಾವಣಾ ರ್ಯಾಲಿಗಳಲ್ಲಿ ಕಂಡುಬರುವಂತಹ ತೀಕ್ಷ್ಣ ಧೋರಣೆಯನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ. ಅಲ್ಲದೇ ದೇಶದ ಮೊದಲ ಪ್ರಧಾನಿ ನೆಹರೂ ಬಗ್ಗೆ ಬಿಜೆಪಿ, ಆರ್​​ಎಸ್​ಎಸ್ ಟೀಕೆಯ ಬಗ್ಗೆ ಕಿಡಿಕಾರಿದ್ದಾರೆ (ಏಜೆನ್ಸೀಸ್).