ರಾಹುಲ್ ಗಾಂಧಿ ಜಿನ್ನಾ ರೂಪದಲ್ಲಿ ಹುಟ್ಟಿದ್ದಾರೆ
- ರಾಹುಲ್ ಗಾಂಧಿ ಜಿನ್ನಾ ರೂಪದಲ್ಲಿ ಹುಟ್ಟಿದ್ದಾರೆ
- ಜಾರ್ಖಂಡ್ ಪ್ರತಿಭಟನೆಗೆ ಕಾಂಗ್ರೆಸ್ ಮೌನ
- ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದ ನಿಶಿಕಾಂತ್ ದುಬೆ
ನವದೆಹಲಿ: ಬುಧವಾರ (ಆ.12) ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey on Rahul Gandhi), ವಿಪಕ್ಷ ನಾಯಕ ರಾಹುಲ್ ಗಾಂಧಿ ಒಬ್ಬ ಅಯೋಗ್ಯ ನಾಯಕನಾಗಿದ್ದಾರೆ, ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ರಾಹುಲ್ ಗಾಂಧಿ ರೂಪದಲ್ಲಿ ಜನ್ಮತಾಳಿದ್ದಾರೆಂದು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೈಗೊಂಡ ಕ್ರಮ ಸರಿಯಿಲ್ಲ. ರಾಹುಲ್ ಗಾಂಧಿ ಜಾರ್ಖಂಡ್ನಲ್ಲಿರುವ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡು, ವಿದ್ಯಾರ್ಥಿಗಳ ಪರವಾಗಿ ನಿಲ್ಲಬೇಕೆಂದು ನಿಶಿಕಾಂತ್ ದುಬೆ ಆಗ್ರಹಿಸಿದ್ದಾರೆ.
ರಾಹುಲ್ ಜಿನ್ನಾನ ರೂಪ!
ಇಂದು ಸಂಸತ್ತಿನ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಜಾರ್ಖಂಡ್ ಸರ್ಕಾರ ಅಲ್ಲಿನ ವಿದ್ಯಾರ್ಥಿಗಳ ಜೊತೆ ಅಮಾನವೀಯವಾಗಿ ವರ್ತಿಸುತ್ತಿದೆ. ದೆಹಲಿ ಜಂತರ್-ಮಂತರ್ ಬಗ್ಗೆ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಈಗೇಕೆ ಸುಮ್ಮನಾಗಿದ್ದಾರೆ? ಸಿಬಿಐ ತನಿಖೆಗೆ ಏಕೆ ಒಪ್ಪಿಗೆ ಸೂಚಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ, ನನ್ನ ಪ್ರಕಾರ, ಪಾಕಿಸ್ತಾನದ ಮೊಹಮ್ಮದ್ ಅಲಿ ಜಿನ್ನಾ, ರಾಹುಲ್ ಗಾಂಧಿ ರೂಪದಲ್ಲಿ ತಮ್ಮ ಎರಡನೇ ಜನ್ಮವನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಅವರೇ, ನೀವು ಜಾರ್ಖಂಡ್ನಲ್ಲಿರುವ ಸರ್ಕಾರಕ್ಕೆ ಬೆಂಬಲ ಕೊಡಬೇಡಿ, ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆ ನಡೆಸಿ, ಇಲ್ಲದಿದ್ದರೆ ನೀವು ಜಾರ್ಜ್ ಸೊರಸ್ ಅವರ ಅಜೆಂಡಾ ಪ್ರಕಾರವೇ ಕೆಲಸ ಮಾಡುತ್ತಿರಿ ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಲಾಠಿ ಚಾರ್ಜ್!
ಜಾರ್ಖಂಡ್ನಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಅಲ್ಲಿಯ ವಿದ್ಯಾರ್ಥಿಗಳು ಕಳೆದ 19 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ (ಆ.10) ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ವಿಧಾನಸಭೆ ಮುತ್ತಿಗೆಗೆ ಹೋರಾಟಗಾರರು ಮುಂದಾಗಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಜಲ ಫಿರಂಗಿ ಹಾಗೂ ಅಶ್ರುವಾಯುವನ್ನು ಪ್ರಯೋಗಿಸಲಾಗಿತ್ತು. ಸರ್ಕಾರದ ಈ ಘಟನೆಯನ್ನು ರಾಹುಲ್ ಗಾಂಧಿ ಕೂಡ ಟೀಕಿಸಿದ್ದು, ಮಾತುಕತೆ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಿ ಎಂದು ಸಿಎಂ ಹೇಮಂತ್ ಸೊರೆನ್ರಲ್ಲಿ ರಾಹುಲ್ ಗಾಂಧಿ ಮವವಿ ಮಾಡಿದ್ದರು, (ಏಜನ್ಸೀಸ್).