ಅನಂತ್ ಸಿಂಗ್ ಮಗಳ ಮದುವೆಯಲ್ಲಿ ಸುದ್ದಿಯಾದ ಅವರ 'ಜೈಲ್‌ಮೇಟ್' 
ದೇಶ

ಅನಂತ್ ಸಿಂಗ್ ಮಗಳ ಮದುವೆಗೆ 'ಜೈಲ್‌ಮೇಟ್' ಆಗಮನ: ಕುದುರೆ ಬದಲು 10 ರೈಫಲ್, 500 ಬುಲೆಟ್ ತಂದ ಗೆಳೆಯ; ವಿಡಿಯೋ ವೈರಲ್​! Anant Singh

ಮೊಕಾಮಾ: ನವೆಂಬರ್​- ಡಿಸೆಂಬರ್​ ತಿಂಗಳನ್ನು ಭಾರತದಲ್ಲಿ ಮದುವೆ ಸೀಸನ್​​ ಎಂದೇ ಕರೆಯಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ಮದುವೆ ನಡೆಯುತ್ತದೆ. ಆದರೆ, ಈಗ ದೇಶದಲ್ಲಿ ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್​ ಸಿಂಗ್​ ಅವರ ಮಗಳ ಮದುವೆ ವಿಡಿಯೋಗಳೇ ಇಡೀ ಸೋಷಿಯಲ್​ ಮೀಡಿಯಾವನ್ನು ಆವರಿಸಿದೆ.

ಇನ್​ಸ್ಟಾಗ್ರಾಂ ರೀಲ್ಸ್​, ಯೂಟ್ಯೂಬ್​ ಶಾರ್ಟ್ಸ್​, ಟ್ವೀಟರ್​ ಟ್ರೆಂಡಿಂಗ್ ಯಾವುದು ತೆರೆದರೂ ಅದರಲ್ಲಿ ಅನಂತ್​ ಸಿಂಗ್​ ಅವರ ಮಗಳ ಮದುವೆಗೆ ಸಂಬಂಧಿಸಿದ ವಿಡಿಯೋಗಳೇ ಕಾಣ ಸಿಗುತ್ತಿವೆ. ಅದರಲ್ಲೀಗ ಅನಂತ್​ ಸಿಂಗ್​ ಅವರ ಅಪರೂಪದ ಗೆಳೆಯನೊಬ್ಬನ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ನಾನು ಅವರ ಜೈಲ್​ಮೇಟ್​!

ಸಾಮಾನ್ಯವಾಗಿ ಗೆಳತನ ಎನ್ನುವುದು ಬಾಲ್ಯದಲ್ಲಿ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಬೆಸೆಯುವ ಬಂಧವಾಗಿದೆ. ಆದರೆ, ಅನಂತ್​ ಸಿಂಗ್​ ಅವರ ಮಗಳ ವಿವಾಹಕ್ಕೆ ಬಂದ ವ್ಯಕ್ತಿ ನಾನು, ಅನಂತ್​ ಸಿಂಗ್​ ಅವರ ಜೈಲಿನ ಗೆಳೆಯ, ನನಗೆ ಅವರು ಜೈಲಿನಲ್ಲಿ ಪರಿಚಯವಾಗಿದ್ದರೆಂದು ಹೇಳಿರುವ ವಿಡಿಯೋ ಟ್ರೆಂಡಿಂಗ್​ನಲ್ಲಿದೆ.

ಸೋಷಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ ಒಬ್ಬರ ಜತೆಗೆ ಮಾತನಾಡಿರುವ ಈ ವ್ಯಕ್ತಿ, ನಾನು ಪಟನಾ ಜೈಲಿನಲ್ಲಿದ್ದಾಗ, ಅನಂತ್​ ಸಿಂಗ್​ ಅವರ ಪರಿಚಯವಾಯಿತು. ನಾನು ಅವರು ಜೈಲು ಸೇರುವುದಕ್ಕಿಂತ ಮೊದಲೇ ಜೈಲುಪಾಲಾಗಿದ್ದೆ. ನನ್ನ ಮೇಲೆ 32 ಪ್ರಕರಣಗಳಿದ್ದವು. ಅದರಿಂದ ನನ್ನನ್ನು ಅವರೇ ಪಾರು ಮಾಡಿದರು. ನಾನು ಅವರ ಪರಮ ಮಿತ್ರ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನಾನು ಚೋಟೆ ಸರ್ಕಾರ್​ (ಅನಂತ್​ ಸಿಂಗ್​) ಸಲುವಾಗಿ ಏನು ಮಾಡಲು ಕೂಡ ಹೆದರುವುದಿಲ್ಲ, ಅವರಿಗಾಗಿ ಪ್ರಾಣ ಕೊಡಲು ಸಿದ್ಧನೆಂದು ಹೇಳಿದ್ದಾರೆ.

ಹತ್ತು ರೈಫಲ್​ 500 ಬುಲೆಟ್​!

ಶಾಸಕ ಅನಂತ್​​ ಸಿಂಗ್​ ಗಳ ಮದುವೆ ನಿಮಿತ್ತ ಕುದುರೆ ರೇಸ್​​ ಆಯೋಜಿಸಿದ್ದು, ಇದನ್ನು ನೋಡಲು ಈ ಜೈಲಿನ ಗೆಳೆಯ ಆಗಮಿಸಿದ್ದರು. ಕುದುರೆ ರೇಸ್​ ನಡೆಯುತ್ತಿದೆ, ನೀವು ಕೂಡ ಕುದುರೆ ತಂದಿದ್ದೀರಾ? ಎಂಬ ಪ್ರಶ್ನೆಗೆ, ನಾನು ಕೇವಲ ರೇಸ್​ ನೋಡಲು ಬಂದಿದ್ದೇನೆ. ನಾನು ಕುದುರೆ ತಂದಿಲ್ಲ, ಆದರೆ 10 ರೈಫಲ್​ ಹಾಗೂ ಸುಮಾರು 500 ಸುತ್ತು ಗುಂಡುಗಳನ್ನು ತಂದಿದ್ದೆನೆ ಎಂದಿದ್ದಾನೆ. ಏಕೆ ಇಲ್ಲಿ ಫೈರಿಂಗ್ ನಡೆಯಲಿದೆಯಾ? ಎಂಬ ಮರುಪ್ರಶ್ನೆಗೆ, ಫೈರಿಂಗ್​ ಅಲ್ಲ, ನಾನು ನನ್ನ ರಕ್ಷಣೆಗಾಗಿ ಇವನ್ನು ತಂದಿದ್ದೇನೆಂದು ಆ ವ್ಯಕ್ತಿ ಮುಕ್ತವಾಗಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್​).