ಸಿಎಂ ಚಂದ್ರಬಾಬು ನಾಯ್ಡು, ಜಗನ್​ಮೋಹನ್ ರೆಡ್ಡಿ 
ದೇಶ

ಚುನಾವಣಾ ಆಯೋಗ ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ವಿಷಾದ : ಜಗನ್ ವಿರುದ್ಧ ಚಂದ್ರಬಾಬು ನಾಯ್ದು ವಾಗ್ದಾಳಿ | CM Chandrababu Naidu

ಕೇಂದ್ರದ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂಬ ವೈಎಸ್​ಆರ್​ಸಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮಾತಿಗೆ ಪ್ರತಿಕ್ರಿಯಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಚುನಾವಣಾ ಆಯೋಗ ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಮರಾವತಿ: ಕೇಂದ್ರದ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂಬ ವೈಎಸ್​ಆರ್​ಸಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮಾತಿಗೆ ಪ್ರತಿಕ್ರಿಯಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಚುನಾವಣಾ ಆಯೋಗ ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸೋಮವಾರ(ಅ. 19) ವಿಶಾಖಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಈ ಹಿಂದೆ, ನೀವೆ ಸಿಇಸಿ ನೇಮಕ ಮಾಡುವ ವಿಧಾನವನ್ನು ಬೆಂಬಲಿಸಿದ್ದೀರಿ. ಆದರೆ ಈಗ, ಚುನಾವಣಾ ಆಯೋಗವು ನೀವು ಹೇಳಿದಂತೆ ಮಾಡದ ಕಾರಣ, ಅದನ್ನು ವಿರೋಧಿಸುತ್ತಿದ್ದೀರಿ. ಜನರಲ್ ಝೆಡ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗನ್ ಮೋಹನ್ ರೆಡ್ಡಿ ಹೇಳಿದ್ದೇನು?

ಭಾನುವಾರ(ಅ. 18) ವಿಶಾಖಪಟ್ಟಣದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯೂ ಅಧಿಕಾರದಲ್ಲಿರುವ ಸರ್ಕಾರದಿಂದ ಪ್ರತ್ಯೇಕವಾಗಿರಬೇಕು. ಚುನಾವಣೆಗಳಲ್ಲಿ ಸಾರ್ವಜನಿಕರ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

2023ರಲ್ಲಿ ನಮ್ಮ ಪಕ್ಷ ಚುನಾವಣಾ ಆಯುಕ್ತರ ನೇಮಕಾತಿಯನ್ನು ನಿಯಂತ್ರಿಸುವ ಕಾನೂನಿಗೆ ಬೆಂಬಲ ನೀಡಿದ್ದನ್ನು ಒಪ್ಪಿಕೊಂಡ ಅವರು, ನಾನು ಈಗ ವಿಷಾದಿಸುತ್ತೇನೆ ಎಂದಿದ್ದಾರೆ. ಚುನಾವಣೆಗಳು ಮತ್ತು ಪರೀಕ್ಷೆಗಳ ನಡುವೆ ಹೋಲಿಕೆ ಮಾಡಿದ ಜಗನ್, ವಿದ್ಯಾರ್ಥಿಯಿಂದ ಪರೀಕ್ಷಕನನ್ನು ನೇಮಿಸಲು ಸಾಧ್ಯವಿಲ್ಲ. ತಟಸ್ಥವಲ್ಲದ ಪ್ರಕ್ರಿಯೆಯ ಮೂಲಕ ನೇಮಕಗೊಂಡರೆ ಪ್ರಾಮಾಣಿಕ ಚುನಾವಣಾ ಆಯುಕ್ತರೂ ಸಹ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯುಕ್ತರ ನೇಮಕದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ಪಾತ್ರ ವಹಿಸುವ ಪ್ರಸ್ತುತ ವ್ಯವಸ್ಥೆಯು ರಚನಾತ್ಮಕ ದೋಷವಾಗಿದ್ದು, ಅದನ್ನು ಸರಿಪಡಿಸಬೇಕಾಗಿದೆ. ಆ ದೋಷವನ್ನು ಸರಿಪಡಿಸಿದ್ರೆ, ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ (ಏಜೆನ್ಸೀಸ್).