ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮಹಾರಾಷ್ಟ್ರದಲ್ಲಿ ಜಂಗಲ್ ರಾಜ್ ಆಳ್ವಿಕೆ : ಸಿಎಂ ಫಡ್ನವೀಸ್ ಸರ್ಕಾರದ ವಿರುದ್ಧ ಸಂಜಯ್ ರಾವತ್ ಕಿಡಿ | Sanjay Raut

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಜಂಗಲ್ ರಾಜ್ ಆಳ್ವಿಕೆಯಿದೆ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಂಜಯ್ ರಾವತ್
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಂಜಯ್ ರಾವತ್
Published on: 

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಜಂಗಲ್ ರಾಜ್ ಆಳ್ವಿಕೆಯಿದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸೋಮವಾರ(ಅ. 19) ಮಾತನಾಡಿರುವ ಅವರು, ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವ ದೇವೇಂದ್ರ ಫಡ್ನವೀಸ್ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಗುಂಡಿನ ದಾಳಿ, ಕೊಲೆ, ಸುಲಿಗೆ ಮತ್ತು ಅಪಹರಣದ ಘಟನೆಗಳು ನಿರಂತರವಾಗಿ ಸಂಭವಿಸುತ್ತಿವೆ. ಸರ್ಕಾರದಿಂದ ಅವುಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಸರ್ಕಾರ ಬದಲಾಯಿಸಬೇಕಾಗಿದೆ ಎಂದಿದ್ದಾರೆ.

Also Read
ಎಸ್​ಐಆರ್ ವಿರೋಧಿ ಪ್ರತಿಭಟನೆಗಳ ನಡುವೆ ವಿಯೆಟ್ನಾಂಗೆ ಹಾರಿದ ರಾಹುಲ್ ಗಾಂಧಿ | Rahul Gandhi
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಂಜಯ್ ರಾವತ್

ಸಿಎಂ ದೇವೇಂದ್ರ ಫಡ್ನವೀಸ್ ಎಲ್ಲದರ ಮೇಲೂ ನಿಯಂತ್ರಣ ಕಳೆದುಕೊಂಡಿದ್ದಾರೆ. ಈಗ ಪ್ರತಿದಿನ ಏನಾಗುತ್ತಿದೆ ನೋಡಿ. ಕೊಲೆಗಳು ನಡೆಯುತ್ತಿವೆ, ಸುಲಿಗೆಗೆ ಬೇಡಿಕೆ ಇಡಲಾಗುತ್ತಿದೆ ಮತ್ತು ಅಪಹರಣಗಳು ನಡೆಯುತ್ತಿವೆ. ಸಿಎಂ ಏನು ಮಾಡುತ್ತಿದ್ದಾರೆ? ನೀವು ಮುಖ್ಯಮಂತ್ರಿ, ಇದು ನಿಮ್ಮ ಜವಾಬ್ದಾರಿ ಫಡ್ನವೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಗುಂಡಿನ ದಾಳಿಗಳನ್ನು ಉಲ್ಲೇಖಿಸಿರುವ ಅವರು, ಸಲ್ಮಾನ್ ಖಾನ್ ಅವರ ಮನೆ ಮೇಲಿನ ಗುಂಡಿನ ದಾಳಿ ಘಟನೆ ಮತ್ತು ಬಾಬಾ ಸಿದ್ದಿಕಿ ಹತ್ಯೆ, ಹಾಗೂ ಇತ್ತೀಚೆಗೆ ನಡೆದ ಶಿವಸೇನೆ ಕಾರ್ಯಕರ್ತ ಪ್ರದೀಪ್ ಪೂರ್ಣೇಕರ್ ಹತ್ಯೆಯಂತಹ ಘಟನೆಗಳು ನಡೆದಿವೆ. ರಾಜ್ಯ ಸರ್ಕಾರವು ಕ್ರಿಮಿನಲ್ ಗ್ಯಾಂಗ್‌ಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net