ವಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪಕ್ಕೆ ಜಿತೇಂದ್ರ ಸಿಂಗ್​ ತಿರುಗೇಟು 
ದೇಶ

ಪ್ರತಿಭಟನಾಕಾರರ ಮೇಲೆ ಸಿಡಿದಿದ್ದು ಗುಂಡಲ್ಲ; ಅಶ್ರುವಾಯು: ರಾಹುಲ್​ ಗಾಂಧಿ ಆರೋಪಕ್ಕೆ ಜಿತೇಂದ್ರ ಸಿಂಗ್​ ಖಡಕ್​ ಕೌಂಟರ್​! Jitendra Singh on Rahul Gandhi

ಪ್ರಮುಖ ಮುಖ್ಯಾಂಶಗಳು

  • ನೀಟ್​ ಅಕ್ರಮ ವಿರೋಧಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡನ್ನು ಸಿಡಿಸಲಾಗಿದೆ: ರಾಹುಲ್​ ಆರೋಪ
  • ಪ್ರತಿಭಟನಾಕಾರರ ಮೇಲೆ ಸಿಡಿಸಿದ್ದು ಬುಲೆಟ್​ ಅಲ್ಲ, ಅಶ್ರುವಾಯು: ಜಿತೇಂದ್ರ ಸಿಂಗ್​
  • ವಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪಕ್ಕೆ ಜಿತೇಂದ್ರ ಸಿಂಗ್​ ತಿರುಗೇಟು
ನವದೆಹಲಿ: ನೀಟ್​ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಬುಧವಾರ (ಜು.29) ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ (2026) ಯನ್ನು ಜಾರಿಗೆ ತಂದಿದೆ. ಈ ಸಮಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ದಾಳಿ ನಡೆದಿದೆ.
ಸರ್ಕಾರವನ್ನು ತಮ್ಮ ಕಟು ಶಬ್ದಗಳಿಂದ ದಾಳಿ ನಡೆಸಿದ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರ ಪ್ರತಿಭಟನಾಕಾರರ ಮೇಲೆ ಗುಂಡಿನ ಮಳೆ ಹರಿಸಿದೆ ಎಂದು ಮಾಡಿದ್ದ ಆರೋಪಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh on Rahul Gandhi)​ ಖಡಕ್​ ತಿರುಗೇಟನ್ನು ನೀಡಿದ್ದಾರೆ.

ಅದು ಗುಂಡಲ್ಲ; ಅಶ್ರುವಾಯು!

ಕೇಂದ್ರ ಸರ್ಕಾರದ ಮೇಲೆ ರಾಹುಲ್​ ಗಾಂಧಿ ಮಾಡಿದ ಗಂಭೀರ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಜಿತೇಂದ್ರ ಸಿಂಗ್, ಪ್ರತಿಭಟನಾಕಾರರ ಮೇಲೆ ಯಾವುದೇ ರೀತಿಯ ಬುಲೆಟ್​ಗಳನ್ನು ಹಾರಸಿಲ್ಲ, ಸ್ಥಳದಲ್ಲಿ ಉದ್ವಿಗ್ನ ವಾತಾವರಣವನ್ನು ತಡೆಯಲು ಅಶ್ರುವಾಯುವನ್ನು ಪ್ರಯೋಗಿಸಲಾಗಿದೆ. ಹಾಗೂ ಈ ನಿರ್ದೇಶನವನ್ನು ಯಾವುದೋ ಸಚಿವರು ನೀಡಿದಲ್ಲ, ಬದಲಾಗಿ ಅಲ್ಲಿಯ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರವಾಗಿದೆ ಎಂದಿದ್ದಾರೆ.
ಅಲ್ಲದೇ ವಿಪಕ್ಷ ನಾಯಕನ ಸ್ಥಾನದಲ್ಲಿರುವ ರಾಹುಲ್​ ಗಾಂಧಿ ಅವರು ಅಧಿವೇಶನದಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸುವುದು ಅವರ ಹುದ್ದೆಗೆ ಶೋಭನೀಯವಲ್ಲ, ದೇಶದಲ್ಲಿರುವ ವಿದ್ಯರ್ಥಿಗಳನ್ನು ಯಾರಾದರೂ ಮೂರ್ಖರೆಂದು ಕರೆಯುತ್ತಾರೆಯೇ? ಎಂದು ಸಿಂಗ್​ ಕಿಡಿಕಾರಿದ್ದಾರೆ.

ರಾಹುಲ್​ ಹೇಳಿದ್ದೇನು?

ಬುಧವಾರ (ಜು.29) ನಡೆದ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ವಿಪಕ್ಷ ನಾಯಕ ರಾಹುಲ್​ ಗಾಂಧಿ, ವಿದ್ಯಾರ್ಥಿಗಳೇ, ಮೂರ್ಖರೇ ಹಾಗೂ ಅಂಧಭಕ್ತರೇ ಎನ್ನುವು ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದರು. ಹಾಗೂ ಈ ದೇಶದ ಶಿಕ್ಷಣ ವ್ಯವಸ್ಥೆ ಆರ್​ಎಸ್​ಎಸ್​ ಕೈಯಲ್ಲಿದೆ ಎಂದು ಆರೋಪಿದರು.
ದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಡೆಸುತ್ತಿದೆ. ಉನ್ನತ ಸ್ತರದ ಶೈಕ್ಷಣಿಕ ಅಧಿಕಾರಳಲ್ಲಿ ಆರ್​ಎಸ್​ಎಸ್​ ನವರೇ ಇದ್ದಾರೆ. ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಇರುವ ಉಪ ಕುಲಪತಿಗಳು ಸಂಘದೊಂದಿದೆ ಸಂಪರ್ಕ ಹೊಂದಿದವರೇ ಆಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ವಾಗ್ದಾಳಿ ನಡೆಸಿದರು, (ಏಜನ್ಸೀಸ್​).