ಫೈನಲ್​ ಪಂದ್ಯದ ವೇಳೆ ಪಿಚ್​ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಭೂಪ​ 
ದೇಶ

ಕ್ರಿಕೆಟ್ ಟೂರ್ನಾಮೆಂಟ್‌ನಿಂದ ಕೈಬಿಟ್ಟಿದ್ದೇ ತಪ್ಪಾಯ್ತು: ಟ್ರ್ಯಾಕ್ಟರ್ ಹತ್ತಿ ಇಡೀ ಪಿಚ್ ದ್ವಂಸ ಮಾಡಿದ ವ್ಯಕ್ತಿ; ವಿಡಿಯೋ ವೈರಲ್! Viral Video

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಟೂರ್ನಮೆಂಟ್‌ಗೆ ಆಹ್ವಾನಿಸದಿದ್ದಕ್ಕೆ ಕೋಪ
  • ಫೈನಲ್​ ಪಂದ್ಯದ ವೇಳೆ ಪಿಚ್​ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಭೂಪ​
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ನಾವು ಬಾಲ್ಯದಲ್ಲಿ ಕ್ರಿಕೆಟ್​ ಆಡುವಾಗ ಯಾರು ಬ್ಯಾಟ್​ ಮತ್ತು ಬೌಲ್​ ಹೊಂದಿರುತ್ತಿದ್ದರೋ ಅವರದೇ ನಿಯಮವಾಗಿರುತ್ತಿತ್ತು. ಅವನು ಬ್ಯಾಟ್​ ಕೊಟ್ಟರೆ ಬ್ಯಾಟಿಂಗ್​, ಬಾಲ್​ ಕೊಟ್ಟರೆ ಬೌಲಿಂಗ್​ ಮಾಡುತ್ತಿದ್ದೆವು. ಇದೀಗ ಇದೇ ರೀತಿಯ ಒಂದು ಘಟನೆ ವೈರಲ್​ ಆಗುತ್ತಿದ್ದು, ಕ್ರಿಕೆಟ್​ ಟೂರ್ನಾಮೆಂಟ್​ ಆಡಲು ಕರೆದಿಲ್ಲವೆಂದು ಕ್ರಿಕೆಟ್​ ಫಿಚ್​ನಲ್ಲಿ ಟ್ರ್ಯಾಕ್ಟರ್ ಓಡಿಸಿದ ಘಟನೆ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ (Viral Video) ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ನೀಲಿ ಬಣ್ಣದ ಟ್ರ್ಯಾಕ್ಟರ್​ ಏರಿದ ವ್ಯಕ್ತಿಯೊಬ್ಬ ಏಕಾಏಕಿ, ಪಂದ್ಯದ ನಡುವೆ ಟ್ರ್ಯಾಕ್ಟರ್​ ನುಗ್ಗಿಸಿ, ಪಿಚ್​ನ್ನು ದ್ವಂಸ ಮಾಡಿರುವುದನ್ನು ನಾವು ನೋಡಬಹುದಾಗಿದೆ.
ಆಕ್ರೋಶಕ್ಕೆ ಕಾರಣವೇನು?
ಮಾಹಿತಿಗಳ ಪ್ರಕಾರ, ಈ ವಿಡಿಯೋ ಮಹಾರಾಷ್ಟ್ರದ ಜಾಲಾಗಾವ್​ನಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದ್ದು, ಟ್ರ್ಯಾಕ್ಟರ್​ ಏರಿರುವ ವ್ಯಕ್ತಿಯನ್ನು ಕ್ರಿಕೆಟ್​ ಟೂರ್ನಾಮೆಂಟ್​ಗೆ ಆಹ್ವಾನಿಸದ ಕಾರಣ, ಕುಪಿತನಾದ ಇತ ಫೈನಲ್​ ಪಂದ್ಯ ನಡೆಯುವ ಸಂದರ್ಭದಲ್ಲಿ ತನ್ನ ಟ್ರ್ಯಾಕ್ಟರ್ ಮೂಲಕ ಪಿಚ್​ನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾಗಿ ತಿಳಿದು ಬಂದಿದೆ.

ದುಃಖಗೊಂಡ ಪ್ರೇಕ್ಷಕರು

ಈ ವ್ಯಕ್ತಿ ಟ್ರ್ಯಾಕ್ಟರ್​ ಮೂಲಕ ಪಿಚ್​ನ್ನು ಹಾಳು ಮಾಡಲು ಶುರು ಮಾಡಿದ್ದೆ, ಕೆಲ ಜನರು ಆತನನ್ನು ತಡೆಯಲು ಮುಂದಾದರೆ, ಇನ್ನು ಕೆಲವರು ತಮ್ಮ ಮೊಬೈಲ್​ನಲ್ಲಿ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಆದರೆ ಹೀಗೆ ಫೈನಲ್​ ಪಂದ್ಯಾವಳಿಯಲ್ಲಿ ನಡೆದ ಈ ಘಟನೆಯಿಂದಾಗಿ, ಮ್ಯಾಚ್​ ನೋಡಲು ಬಂದ ಜನ ನಿರಾಶೆ ಗೊಂಡಿದಂತು ನಿಜವಾಗಿದೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ಗಳ ಸಮುದ್ರವನ್ನೇ ಹರಿಸಿದ್ದಾರೆ. ಅದಕ್ಕೆ ಟ್ರ್ಯಾಕ್ಟರ್​ ಇರುವ ಗೆಳೆಯನ ಜೊತೆ ಜಗಳ ಮಾಡಬಾರದು ಎಂದು ಹೇಳುವುದು ಎಂದು ಒಬ್ಬ ಬಳಕೆದಾರ ಹೇಳಿದರೆ, ಪಾಪ ಇವನನ್ನು ಏಕೆ ಕ್ರಿಕೆಟ್​ ಆಡಲು ಕರೆದಿಲ್ಲ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಇವರಿಗೆಲ್ಲಾ ದುಡ್ಡಿನ ಮದ, ಮತ್ತು ಅಧಿಕಾರದ ದೌಲತ್ತು, ಪೊಲೀಸರು ಇವನನ್ನು ವಶಕ್ಕೆ ಪಡೆಯಬೇಕು ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್​).