2026 IPL Schedule | 19ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ 
ದೇಶ

ಆರ್‌ಸಿಬಿ ಮೊದಲ ಕದನಕ್ಕೆ ಮುಹೂರ್ತ ಫಿಕ್ಸ್! ಬೆಂಗಳೂರು ಅಭಿಮಾನಿಗಳ ಕಣ್ಣು ಮಾರ್ಚ್ 13ರ ಮೇಲಿರುವುದೇಕೆ..? | 2026 IPL Schedule

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2026 (2026 IPL Schedule) 19ನೇ ಆವೃತ್ತಿಯ ವೇಳಾಪಟ್ಟಿ ಅಂತಿಮವಾಗಿ ಪ್ರಕಟಗೊಂಡಿದ್ದು, ಮೊದಲ ಎರಡು ವಾರಗಳ ಹೈ-ವೋಲ್ಟೇಜ್ ಪಂದ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ತವರು ನೆಲದಲ್ಲಿಯೇ ಅಭಿಯಾನ ಆರಂಭಿಸಲಿದೆ.

ಚಿನ್ನಸ್ವಾಮಿಯಲ್ಲಿ ಮೊದಲ ಕಳಗ: ಆರ್‌ಸಿಬಿ vs ಎಸ್‌ಆರ್‌ಹೆಚ್

ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ಸವಾಲನ್ನು ಎದುರಿಸಲಿದೆ. ಆದರೆ, ಬೆಂಗಳೂರಿನಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳು ಮಾರ್ಚ್ 13 ರಂದು ತಜ್ಞರ ಸಮಿತಿಯು ನೀಡುವ ಭದ್ರತೆ ಮತ್ತು ತಾಂತ್ರಿಕ ಅನುಮತಿಗೆ ಒಳಪಟ್ಟಿರುತ್ತವೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಐಪಿಎಲ್ 2026 ವೇಳಾಪಟ್ಟಿ: ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ

 1. ಶನಿವಾರ, ಮಾರ್ಚ್ 28 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ - ಬೆಂಗಳೂರು
 2. ಭಾನುವಾರ, ಮಾರ್ಚ್ 29 - ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ - ಮುಂಬೈ
 3. ಸೋಮವಾರ, ಮಾರ್ಚ್ 30 – ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಗುವಾಹಟಿ
 4. ಮಂಗಳವಾರ, ಮಾರ್ಚ್ 31 - ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ - ಮುಲ್ಲನ್ಪುರ್
 5. ಬುಧವಾರ, ಏಪ್ರಿಲ್ 1 - ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಲಕ್ನೋ
 6. ಗುರುವಾರ, ಏಪ್ರಿಲ್ 2 - ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಕೋಲ್ಕತ್ತಾ
 7. ಶುಕ್ರವಾರ, ಏಪ್ರಿಲ್ 3 - ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ - ಚೆನ್ನೈ
 8. ಶನಿವಾರ, ಏಪ್ರಿಲ್ 4 - ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ - ಡೆಲ್ಲಿ
 9. ಶನಿವಾರ, ಏಪ್ರಿಲ್ 4 – ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
10. ಭಾನುವಾರ, ಏಪ್ರಿಲ್ 5 - ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ - ಹೈದರಾಬಾದ್
11. ಭಾನುವಾರ, ಏಪ್ರಿಲ್ 5 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
12. ಸೋಮವಾರ, ಏಪ್ರಿಲ್ 6 - ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ - ಕೋಲ್ಕತ್ತಾ
13. ಮಂಗಳವಾರ, ಏಪ್ರಿಲ್ 7 - ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ - ಗುವಾಹಟಿ
14. ಬುಧವಾರ, ಏಪ್ರಿಲ್ 8 – ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ – ಡೆಲ್ಲಿ
15. ಗುರುವಾರ, ಏಪ್ರಿಲ್ 9 - ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ - ಕೋಲ್ಕತ್ತಾ
16. ಶುಕ್ರವಾರ, ಏಪ್ರಿಲ್ 10 - ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಗುವಾಹಟಿ
17. ಶನಿವಾರ, ಏಪ್ರಿಲ್ 11 – ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ – ಮುಲ್ಲನ್ ಪುರ್
18. ಶನಿವಾರ, ಏಪ್ರಿಲ್ 11 - ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ - ಚೆನ್ನೈ
19. ಭಾನುವಾರ, ಏಪ್ರಿಲ್ 12 - ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ - ಲಕ್ನೋ
20. ಭಾನುವಾರ, ಏಪ್ರಿಲ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮುಂಬೈ
ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗಿನ ಮೊದಲ 16 ದಿನಗಳ ಅವಧಿಯಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ವಾರಾಂತ್ಯದ ಮಜಾ ಹೆಚ್ಚಿಸಲು ಬಿಸಿಸಿಐ 4 ಡಬಲ್ ಹೆಡರ್ (ದಿನಕ್ಕೆ ಎರಡು ಪಂದ್ಯ) ನಿಗದಿಪಡಿಸಿದೆ. ಬಿಸಿಸಿಐ ಇಡೀ ಟೂರ್ನಿಯ ವೇಳಾಪಟ್ಟಿಯನ್ನು ಹಂತ ಹಂತವಾಗಿ ನೀಡುತ್ತಿರುವುದು ಇದೇ ಮೊದಲಲ್ಲ. 2024 ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಭದ್ರತಾ ಕಾರಣಗಳಿಗಾಗಿ ಇದೇ ಕ್ರಮ ಅನುಸರಿಸಲಾಗಿತ್ತು.
ಈ ಬಾರಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳಲ್ಲಿ ಮತದಾನದ ದಿನಾಂಕಗಳು ಇನ್ನೂ ಅಧಿಕೃತವಾಗಿ ಪ್ರಕಟವಾಗದ ಕಾರಣ, ಅಲ್ಲಿನ ಪಂದ್ಯಗಳಿಗೆ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ಬಿಸಿಸಿಐ ಸದ್ಯಕ್ಕೆ ಮೊದಲ 16 ದಿನಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ದಿನಾಂಕಗಳನ್ನು ಘೋಷಿಸಿದ ಬಳಿಕ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿ ಹೊರಬೀಳಲಿದೆ ಎಂದು ವರದಿಯಾಗಿದೆ(ಏಜೆನ್ಸೀಸ್​).