India vs South Africa | ಭಾರತದ ಬೌಲರ್ಗಳಾದ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ವಿಕೆಟ್ ಕಿತ್ತಿ ಸಂಭ್ರಮಿಸಿದ ಕ್ಷಣ
ವಿಶಾಖಪಟ್ಟಣ: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಹರಿಣಗಳು 270 ರನ್‌ಗಳಿಗೆ ಅಲೌಟ್ ಆಗಿದೆ. ಅಲ್ಲದೆ, ಇದರೊಂದಿಗೆ ಟೀಂ ಇಂಡಿಯಾಕ್ಕೆ 271 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಹರಿಣಗಳ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ನಂತರ ಜತೆಯಾದ ನಾಯಕ ಟೆಂಬಾ ಬವುಮ ಮತ್ತು ಆಫ್ರಿಕಾ ಸ್ಟಾರ್ ಓಪನರ್ ಕ್ವಿಂಟನ್ ಡಿ ಕಾಕ್ ಸೇರಿ 113 ರನ್ಗಳ ಉತ್ತಮ ಜತೆಯಾಟವಾಡಿದರು. ನಾಯಕ 48 ರನ್ಗಳಿಸಿ ರವೀಂದ್ರ ಜಡೇಜಾಗೆ ತಮ್ಮ ವಿಕೆಟ್ ಒಪ್ಪಿಸಿದರು.
ಹರಿಣಗಳ ಪರ ಏಕಾಂಗಿ ಹೋರಾಟ ನಡೆಸಿದ ಡಿ ಕಾಕ್(106,89 ಬಾಲ್) ಅದ್ಬುತ ಶತಕ ಸಿಡಿಸಿ ಸಂಭ್ರಮಿಸಿದರು. ನಂತರ ಬಂದ ಮ್ಯಾಥ್ಯೂ ಬ್ರೀಟ್ಜ್ಕೆ(24 ರನ್) ಮತ್ತು ಐಡೆನ್ ಮಾರ್ಕ್ರಾಮ್(01) ರನ್ಗಳಿಸಿ ಬಹುಬೇಗ ಪೆವಿಲಿಯನ್ ಸೇರಿದರು. ನಂತರ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಡೆವಾಲ್ಡ್ ಬ್ರೆವಿಸ್ (29ರನ್) ಹಾಗೂ ಮಾರ್ಕೊ ಜಾನ್ಸೆನ್ (17ರನ್) ಗಳಿಸಿ ನಿರಾಸೆ ಪ್ರದರ್ಶನ ನೀಡಿದರು.
ಭಾರತ ಪರವಾಗಿ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್ ಕಿತ್ತು ಹರಿಣಗಳ ಸರ್ವಪತನಕ್ಕೆ ಕಾರಣರಾದರು. ಈ ಸರಣಿಯನ್ನು ಗೆಲ್ಲಲು ಭಾರತಕ್ಕೆ 271 ರನ್ಗಳ ಅವಶ್ಯಕತೆ ಇದೆ,(ಏಜೆನ್ಸೀಸ್).