Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್ 
ದೇಶ

ಭಾರತ ಫ್ರಾನ್ಸ್ ಅಥವಾ ಬಾಂಗ್ಲಾದೇಶದಂತಲ್ಲ; ಅಲ್ಲಿನ ಪ್ರತಿಭಟನೆಗಳಿಗೆ ಹೋಲಿಸೋದು ಸರಿಯಲ್ಲ: ಶಶಿ ತರೂರ್ | Shashi Tharoor

ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಫ್ರಾನ್ಸ್ ಮತ್ತು ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಗಳು ಮತ್ತು ಗಲಭೆಗಳೊಂದಿಗೆ ಹೋಲಿಸುವುದನ್ನು ಸರಿಯಲ್ಲ ಎಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಭಾರತ ಫ್ರಾನ್ಸ್ ಅಥವಾ ಬಾಂಗ್ಲಾದೇಶದಂತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಫ್ರಾನ್ಸ್ ಮತ್ತು ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಗಳು ಮತ್ತು ಗಲಭೆಗಳೊಂದಿಗೆ ಹೋಲಿಸುವುದನ್ನು ಸರಿಯಲ್ಲ ಎಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಭಾರತ ಫ್ರಾನ್ಸ್ ಅಥವಾ ಬಾಂಗ್ಲಾದೇಶದಂತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾನುವಾರ(ಅ. 18) ಎಕ್ಸ್​​ನಲ್ಲಿ ದೇಶದಲ್ಲಿ ಆಡಳಿತ ಬದಲಾವಣೆ ಮಾಡಲು ಬಾಂಗ್ಲಾದೇಶ ಮತ್ತು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ರೀತಿ ಭಾರತದಲ್ಲಿಯೂ ಪ್ರಚೋದಿಸಲು ವಿಪಕ್ಷಗಳು ಪಿತೂರಿ ನಡೆಸಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪ ಮಾಡಿದ್ದರು.

ಈ ಆರೋಪಕ್ಕೆ ಉತ್ತರಿಸಿರುವ ಶಶಿ ತರೂರ್, ಕೇಂದ್ರ ಚುನಾವಣಾ ಆಯೋಗವು ಕೈಗೊಂಡ ಅಕ್ರಮ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯ ವಿರುದ್ಧ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಗಳನ್ನು ಬಾಂಗ್ಲಾ, ಫ್ರಾನ್ಸ್​​ನ ಪ್ರತಿಭಟನೆಗಳೊಂದಿಗೆ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.

ನಾವು ಯಾವುದೇ ರೀತಿಯ ಹಿಂಸಾಚಾರ ಅಥವಾ ಬಸ್ಸುಗಳು ಅಥವಾ ಪೊಲೀಸ್ ಠಾಣೆಗಳನ್ನು ಸುಡುವುದನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಸಾಂವಿಧಾನಿಕ ಮತ್ತು ಶಾಂತಿಯುತ ಪ್ರತಿಭಟನೆಗಳಲ್ಲಿ ಮಾತ್ರ ನಂಬಿಕೆ ಇಡುತ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರವನ್ನು ಉರುಳಿಸಲು ಅಥವಾ ಬದಲಾಯಿಸಲು ಪ್ರಯತ್ನ ನಡೆದಿದೆ ಎಂಬ ಆರೋಪವನ್ನು ಅಲ್ಲಗೆಳೆದ ಅವರು, ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಹಿನ್ನೆಲೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).