ಬಿಹಾರದಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ಬೆಳಕಿಗೆ
ಹಾಡಹಗಲೇ ಯುವತಿ ಮೇಲೆ ದುರುಳರ ದೌರ್ಜನ್ಯ
ಪೊಲೀಸರಿಂದ ದೂರು ದಾಖಲು, ಆರೋಪಿಗಳಿಗಾಗಿ ಹುಡುಕಾಟ
ಇತ್ತೀಚೆಗೆ ಬಿಹಾರ ಜಮುಯಿಯಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಭಾರಿ ಸದ್ದು ಮಾಡಿತ್ತು. ಆ ಬೆನ್ನಲ್ಲೇ, ಇಲ್ಲಿಂದ 131 ಕಿ.ಮೀ ದೂರದಲ್ಲಿರುವ ಸಮಸ್ಟಿಪುರದಿಂದ ಇದೇ ಮಾದರಿಯ ಭಯಾನಕ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಸಮಸ್ಟಿಪುರದ ಜಗತ್ಸಿಂಗ್‌ಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ, ಬಾಲಕಿ ಬುಧಿ ಗಂಡಕ್ ಅಣೆಕಟ್ಟು ಬೈಪಾಸ್ ರಸ್ತೆಯಲ್ಲಿ ಫೋಟೋಶೂಟ್ ಮಾಡಿಕೊಳ್ಳುತ್ತಿದ್ದ ಯುವಕ ಮತ್ತು ಯುವತಿಯನ್ನು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಗ್ಯಾಂಗ್ವೊಂದು ಸುತ್ತುವರೆದು ಹಲ್ಲೆ ನಡೆಸಿದೆ. ಬ್ಯಾಕ್ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಕೂದಲು ಹಿಡಿದು ತಳ್ಳಾಡಿ, ದೌರ್ಜನ್ಯ ಎಸಗಿದ್ದಾರೆ. ಬುಧವಾರ ಈ ವಿಡಿಯೋಗಳು ಎಕ್ಸ್ನಲ್ಲಿ ವೈರಲ್ ಆಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಯುವತಿ ಮತ್ತು ಯುವಕ ರಸ್ತೆಯಲ್ಲಿ ಫೋಟೋಶೂಟ್ಗಾಗಿ ನಿಂತಿದ್ದರು. ಈ ವೇಳೆ ಬಂದ ಈ ಗ್ಯಾಂಗ್ ಅನಾವಶ್ಯಕವಾಗಿ ಇಬ್ಬರನ್ನು ನಿಂದಿಸಲು ಶುರು ಮಾಡಿಕೊಂಡರು. ಅವರ ಹೆಸರು ಕೂಗಿ ಅಸಹ್ಯಕರವಾಗಿ ಕೂಗಿ ಲೈಂಗಿಕ ಕಿರುಕುಳ ಕೊಟ್ಟರು ಎಂದು ಸ್ಥಳೀಯರು ಹೇಳಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇನ್ನೂ ತಪ್ಪಿತಸ್ಥರು ಎಲ್ಲಿನವರು ಎನ್ನುವುದು ಪತ್ತೆಯಾಗಿಲ್ಲ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಮಾಡಿದವರನ್ನು ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಜಮುಯಿಯಲ್ಲಿ ಅಪ್ರಾಪ್ತರಿಗೆ ಕಿರುಕುಳ ಪ್ರಕರಣ: ಮೂವರ ಬಂಧನ: ತನಿಖೆಗೆ ಎಸ್ಐಟಿ ರಚಿಸಿದ ಬಿಹಾರ ಸರ್ಕಾರ | Jamui
ಇನ್ನೂ ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಅರವಿಂದ್ ಪ್ರತಾಪ್ ಸಿಂಗ್ ಮಾತನಾಡಿ, ಆರೋಪಿಗಳು ಏನು ಕೆಲಸ ಮಾಡುತ್ತಿದ್ದಾರೆ. ಹೀಗೆ ನಡೆದುಕೊಂಡಿದ್ಯಾಕೆ ಎನ್ನುವ ಕಾರ್ಯಾಚರಣೆ ಆರಂಭಿಸಿದ್ದೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬಿಹಾರದ ಜಮುಯಿನಲಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಬೈಕ್ನಲ್ಲಿ ಪ್ರಯಾಣಿಸುವ ವೇಳೆ ಅವರನ್ನು ಅರ್ಧಕ್ಕೆ ತಡೆದ ಮಾಸ್ಕ್ ಧರಿಸಿದ್ದ ಗುಂಪೊಂದು ಯುವತಿ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋಗಳು ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು.
ಶನಿವಾರ ಸಂಜೆ ಕೋಚಿಂಗ್ ತರಗತಿಗಳಿಗೆ ಬೈಕ್ನಲ್ಲಿ ಬಾಲಕಿ ಮತ್ತು ಅಪ್ರಾಪ್ತ ಯುವಕ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಪುರುಷರ ಗುಂಪೊಂದು ಇವರನ್ನು ಸುತ್ತುವರೆದಿದೆ. ಈ ವೇಳೆ ಒಬ್ಬ ಆರೋಪಿ ಯುವಕನ ಶರ್ಟ್ ಕಾಲರ್ ಹಿಡಿದು ಆತನ ಮೇಲೆ ಹಲ್ಲೆ ಮಾಡಿರುವುದು ಇದೆ. ಆನಂತರ ಯುವತಿ ತನ್ನನ್ನು ರಕ್ಷಿಸಲು ಓಡಿದಾಗ ಮುಸುಕುಧಾರಿ ವ್ಯಕ್ತಿಯೊಬ್ಬರು ಹಿಂದಿನಿಂದ ಆಕೆಯನ್ನು ಹಿಡಿದು, ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು, (ಏಜೆನ್ಸೀಸ್).