ಅಕ್ಟೋಬರ್ 20 ರವರೆಗೆ ದೇಶದ 20 ರಾಜ್ಯಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್ 
ದೇಶ

ಅಕ್ಟೋಬರ್ 20 ರವರೆಗೆ ದೇಶದ 20 ರಾಜ್ಯಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್...ದಕ್ಷಿಣ ಭಾರತದ ಕಥೆ ಏನು..? | IMD Rain Alert

IMD Rain Alert: ಇಂಡಿಯಾ ಮೆಟಿಯೊರೊಲಾಜಿಕಲ್ ಡಿಪಾರ್ಟ್‌ಮೆಂಟ್ ಅಕ್ಟೋಬರ್ 14 ರಿಂದ ಅಕ್ಟೋಬರ್ 20 ರ ನಡುವೆ ಭಾರತದ ಹಲವಾರು ಭಾಗಗಳಲ್ಲಿ ವ್ಯಾಪಕ ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ.

IMD Rain Alert: ಇಂಡಿಯಾ ಮೆಟಿಯೊರೊಲಾಜಿಕಲ್ ಡಿಪಾರ್ಟ್‌ಮೆಂಟ್ ಅಕ್ಟೋಬರ್ 14 ರಿಂದ ಅಕ್ಟೋಬರ್ 20 ರ ನಡುವೆ ಭಾರತದ ಹಲವಾರು ಭಾಗಗಳಲ್ಲಿ ವ್ಯಾಪಕ ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಂಜಾಬ್, ದೆಹಲಿ, ಹರಿಯಾಣ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳು ಹವಾಮಾನ ವೈಪರೀತ್ಯವನ್ನು ಎದುರಿಸುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಸೇರಿವೆ.

ಹವಾಮಾನ ಇಲಾಖೆಯು ಹಲವಾರು ದಕ್ಷಿಣ ಭಾರತದ ರಾಜ್ಯಗಳಿಗೂ ವರುಣನ ಆರ್ಭಟದ ಎಚ್ಚರಿಕೆಯನ್ನು ನೀಡಿದ್ದು, ನಿರ್ದಿಷ್ಟ ದಿನಾಂಕಗಳಲ್ಲಿ ಕೇರಳ, ತಮಿಳುನಾಡು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:ರೈಲ್ವೆ ನೌಕರರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 78 ದಿನಗಳ ಬೋನಸ್‌ಗೆ ಸಂಪುಟ ಅನುಮೋದನೆ!..ಯಾರಿಗೆಲ್ಲಾ ಲಕ್​..? | Railway Employees

ಉತ್ತರ ಭಾರತಕ್ಕೆ ಅಲರ್ಟ್!

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಅಕ್ಟೋಬರ್ 14 ಮತ್ತು ಅಕ್ಟೋಬರ್ 15 ರಂದು ವರುಣನ ಆರ್ಭಟ ಜೊರಾಗುವ ಸಾಧ್ಯತೆಯಿದೆ. ಪಂಜಾಬ್‌ನಲ್ಲಿಯೂ ಅಕ್ಟೋಬರ್ 14 ಮತ್ತು ಅಕ್ಟೋಬರ್ 15 ಮತ್ತು ದೆಹಲಿ, ಚಂಡೀಗಢ ಮತ್ತು ಹರಿಯಾಣದಲ್ಲಿ ಅಕ್ಟೋಬರ್ 15 ರಂದು ಇದೇ ರೀತಿಯ ವಾತಾವರಣ ಇರಲಿದೆ. ಉತ್ತರಾಖಂಡದಲ್ಲಿ ಅಕ್ಟೋಬರ್ 14 ಮತ್ತು ಅಕ್ಟೋಬರ್ 15 ರಂದು ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಗಾಳಿಯ ವೇಗ ಗಂಟೆಗೆ 60 ಕಿಮೀ ವರೆಗೆ ತಲುಪಬಹುದು. ಜೊತೆಗೆ ಗುಡುಗು ಮತ್ತು ಮಿಂಚಿನ ಸಾಧ್ಯತೆಯಿದೆ. ಇದೇ ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲೂ ಗುಡುಗು ಮತ್ತು ಮಿಂಚಿನ ವಾತಾವರಣವಿರಲಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 14 ರಂದು ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ, ಅಕ್ಟೋಬರ್ 15 ರಂದು ಪೂರ್ವ ರಾಜಸ್ಥಾನ, ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 16 ಮತ್ತು ಅಕ್ಟೋಬರ್ 18 ರ ನಡುವೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ, ಮುಖ್ಯವಾಗಿ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.

IMD.pdf
Preview

ಮಧ್ಯ ಮತ್ತು ಪೂರ್ವ ಭಾರತದ ಕಥೆ ಏನು..?

ಪಶ್ಚಿಮ ಮಧ್ಯಪ್ರದೇಶದಲ್ಲಿ ಅಕ್ಟೋಬರ್ 15 ರಿಂದ ಅಕ್ಟೋಬರ್ 20 ರವರೆಗೆ ತುಂತುರ ಮಳೆಯಾಗುವ ಮುನ್ಸೂಚನೆಯಿದ್ದು, ಪೂರ್ವ ಮಧ್ಯಪ್ರದೇಶದಲ್ಲಿ ಅಕ್ಟೋಬರ್ 16 ರಿಂದ ಅಕ್ಟೋಬರ್ 20 ರ ನಡುವೆ, ಛತ್ತೀಸ್‌ಗಢ ಮತ್ತು ವಿದರ್ಭದಲ್ಲಿ ಅಕ್ಟೋಬರ್ 14 ರಿಂದ ಅಕ್ಟೋಬರ್ 20 ರವರೆಗಿನ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಅನೇಕ ಕಡೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಕ್ಟೋಬರ್ 14 ರಂದು ವಾತಾವರಣವು ತೇವಭರಿತವಾಗಿರಲಿದೆ. ಹಾಗೆಯೇ ಒಡಿಶಾದಲ್ಲಿ ಅಕ್ಟೋಬರ್ 14 ರಿಂದ ಅಕ್ಟೋಬರ್ 20 ರವರೆಗೆ ಅಲ್ಲಿಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ವಾತಾವರಣದಲ್ಲಿ ಏರಿಳಿತ ಮುಂದುವರಿಯಲಿದೆ. ಮುಂಬರುವ ವಾರದಲ್ಲಿ ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್ ಮತ್ತು ಬಿಹಾರದ ವಿವಿಧ ಭಾಗಗಳಲ್ಲಿ ಸಾಧಾರಣ ವಾತಾವರಣದೊಂದಿಗೆ ಆಗಾಗ್ಗೆ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲೂ ಇದೇ ವಾತಾವರಣದ ನಿರೀಕ್ಷೆ ಇಡಲಾಗಿದೆ.

ದಕ್ಷಿಣ ಭಾರತದಲ್ಲಿ ಹೀಗಿರಲಿದೆ ವಾತಾವರಣ!

ದಕ್ಷಿಣ ಭಾರತದಲ್ಲಿ ವಾತಾವರಣವು ಬದಲಾಗಲಿದ್ದು, ಅಕ್ಟೋಬರ್ 15 ರಿಂದ 20 ರವರೆಗೆ ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮಳೆರಾಯನ ಆರ್ಭಟವಿರಲಿದೆ. ಇದರ ಮುಂದುವರಿದ ಭಾಗವಾಗಿ ಕರಾವಳಿ ಕರ್ನಾಟಕ ಮತ್ತು ಲಕ್ಷದ್ವೀಪದಲ್ಲೂ ಅಕ್ಟೋಬರ್ 16 ರಿಂದ 20 ರವರೆಗೆ ತುಂತುರು ಹಾಗೂ ಬಿರುಸಿನ ಸೆಕೆಯ ವಾತಾವರಣದೊಂದಿಗೆ ಮಳೆಯ ಅಲೆ ಮುಂದುವರಿಯಲಿದೆ.

ವಿಶೇಷವಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಅಕ್ಟೋಬರ್ 14 ಹಾಗೂ ಅಕ್ಟೋಬರ್ 16 ರಿಂದ 20 ರ ವರೆಗೆ ಅಧಿಕ ಪ್ರಮಾಣದ ಧಾರೆ ಸುರಿಯುವ ಮುನ್ಸೂಚನೆ ಇದೆ. ಹಾಗೆಯೇ ಕೇರಳ ಮತ್ತು ಮಾಹೆಯಲ್ಲಿ ಅಕ್ಟೋಬರ್ 16 ರಿಂದ 20 ರವರೆಗೆ ಭಾರಿ ವರುಣನ ಮುನ್ನೆಚ್ಚರಿಕೆ ನೀಡಲಾಗಿದೆ. ಇದಲ್ಲದೆ, ಕರಾವಳಿ ಕರ್ನಾಟಕ ಹಾಗೂ ರಾಯಲಸೀಮೆಯಲ್ಲಿ ಅಕ್ಟೋಬರ್ 16 ರಿಂದ 18 ರವರೆಗೆ ಹಾಗೂ ಉತ್ತರ ಒಳನಾಡಿನ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಕ್ಟೋಬರ್ 17 ಮತ್ತು 18 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ(ಏಜೆನ್ಸೀಸ್​).