ದೇಶ

ದೇಶದಲ್ಲಿ ಅಕ್ರಮವಾಗಿ ವಾಸ; ಮೂವರು ನೈಜೇರಿಯಾ ಪ್ರಜೆಗಳನ್ನು ಬಂಧಿಸಿದ ಪೊಲೀಸರು | Nigerian nationals

ಭಾರತದಲ್ಲಿ ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ಮೂವರು ನೈಜೀರಿಯಾ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಭಾನುವಾರ(ನ. 08) ವರದಿಯಾಗಿದೆ.

ನವದೆಹಲಿ: ಭಾರತದಲ್ಲಿ ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ಮೂವರು ನೈಜೀರಿಯಾ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಭಾನುವಾರ(ನ. 08) ವರದಿಯಾಗಿದೆ.

ಪೊಲೀಸರು ಆರೋಪಿಗಳನ್ನು ಬಾರ್ತಲೋಮೆವ್ ಉವಾಯೆಬುಕಾ ಇಲೋಗ್ಬುನೆಮ್, ಕೋನನ್ ಒಕೊಚಾ ಅಲಿಯಾಸ್ ಕೋನನ್ ಬ್ರೈಸ್ ಕೌಸೈ ಮತ್ತು ನ್ಡುಬುಸಿ ಚಾರ್ಲ್ಸ್ ನ್ವಾಬುಫೋರ್ ಎಂದು ಗುರುತಿಸಿದ್ದಾರೆ.

ಈ ಮೂವರು ದೇಶದಲ್ಲಿ ಉಳಿಯಲು ಅನುಮತಿ ನೀಡುವ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಅಕ್ಟೋಬರ್ 31ರಂದು ನಡೆದ ಪರಿಶೀಲನಾ ಅಭಿಯಾನದ ಸಂದರ್ಭದಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಳಿಕ ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಯಿತು. ಬಳಿಕ ಲ್ಯಾಂಪೂರ್‌ನಲ್ಲಿರುವ ಸೇವಾ ಸದನ್ ಬಂಧನ ಕೇಂದ್ರಕ್ಕೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ (ಏಜೆನ್ಸೀಸ್).