ಪ್ರಧಾನಿ ಮೋದಿಗೆ ಟಿಎಮ್ಸಿ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಚಾಲೆಂಜ್
- ಪ್ರಧಾನಿ ಮೋದಿಗೆ ಟಿಎಮ್ಸಿ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಚಾಲೆಂಜ್
- ವಿಧಾನಸಭಾ ಚುನಾವಣೆ ಸೋತರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ
- ಏಪ್ರಿಲ್ 29 ರಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಕೊನೆ ಹಂತದ ಮತದಾನ
ಕಲ್ಕತ್ತಾ: ಇಂದು (ಏ.29) ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನವಾಗಿದ್ದು, ಒಂದು ವೇಳೆ ಈ ಭಾರಿ ಬಿಜೆಪಿ ಚುನಾವಣೆಯಲ್ಲಿ ಸೋತರೆ ನರೇಂದ್ರ ಮೋದಿ ಪ್ರಧಾನಿ ಸ್ಥಾನದಿಂದ ರಾಜೀನಾಮೆ ನೀಡುವಂತೆ ಟಿಎಮ್ಸಿ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ (Derek O'Brien on PM Modi) ಸವಾಲೊಡ್ಡಿದ್ದಾರೆ.
ರಾಜೀನಾಮೆ ನೀಡುತ್ತಿರಾ?
ಬಂಗಾಳದ 294 ಕ್ಷೇತ್ರದಲ್ಲಿ ನಿಂತಿರು ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಮೋದಿಯ ಪ್ರತಿರೂಪ ಎಂದು ನೀವು ಹೇಳಿದ್ದಿರಿ. ಮೇ.4 ರಂದು ಫಲಿತಾಂಶ ಹೊರ ಬೀಳಲಿದ್ದು, ಅಂದು ಮಮತಾ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೆದ್ದರೆ ನೀವು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಾ? ಅಷ್ಟು ತಾಕತ್ತು ನಿಮಗೆ ಇದೆಯಾ? ಎಂದು ಡೆರೆಕ್ ಒ'ಬ್ರೇನ್ ಪಿಎಂ ಮೋದಿಗೆ ಚಾಲೆಂಜ್ ಮಾಡಿದ್ದಾರೆ.
ಚುನಾವಣಾ ಅಧಿಕಾರಿಗಳು ಕೇಂದ್ರದ ಕೈಗೊಂಬೆಗಳು
ಮತಗಟ್ಟೆಗೆ ಭೇಟಿ ನೀಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಚುನಾವಣೆಯಲ್ಲಿ ವ್ಯಾಪಕವಾಗಿ ರಿಗ್ಗಿಂಗ್ ನಡೆಯುತ್ತಿದ್ದು, ಚುನಾವಣಾ ಆಯೋಗದ ವೀಕ್ಷಕರು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಮತ್ತು ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ದೀದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕೇಂದ್ರ ಪಡೆಗಳು ಟಿಎಂಸಿ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಮತದಾರರನ್ನು ಬೆದರಿಸುತ್ತಿವೆ ಎಂದು ಮಮತಾ ದೂರಿದ್ದು, ಕೋಲ್ಕತ್ತಾದಲ್ಲಿ ಟಿಎಂಸಿ ಕೌನ್ಸಿಲರ್ ಆಶಿಮ್ ಬೋಸ್ ಮನೆಗೆ ಕೇಂದ್ರ ಪಡೆಗಳು ತಡರಾತ್ರಿ ಅಕ್ರಮವಾಗಿ ಪ್ರವೇಶಿಸಿವೆ ಎಂಬ ಮಾಹಿತಿ ತಿಳಿದು ಬ್ಯಾನರ್ಜಿ ಬೆಳಿಗ್ಗೆಯೇ ಅವರನ್ನು ಭೇಟಿಯಾದರು. ತಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮತ್ತು ಗೂಂಡಾಗಿರಿ ನಡೆಯುತ್ತಿದೆ ಎಂದು ಆರೋಪಿಸಿದ ದೀದಿ, ಬಿಜೆಪಿ ಬಲವಂತವಾಗಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
142 ಕ್ಷೇತ್ರಗಳಲ್ಲಿ ಮತದಾನ
ಬುಧವಾರ (ಏ.29) ಪಶ್ಚಿಮ ಬಂಗಾಳ ವಿಧಾನಸಭೆಯ 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲನೇ ಹಂತದ ಮತದಾನ ಏಪ್ರಿಲ್ 23 ರಂದು ನಡೆದಿದ್ದು ಇದು ಅಂತಿಮ ಹಂತದ ಮತದಾನವಾಗಿದೆ. 142 ಕ್ಷೇತ್ರಗಳಿಗೆ ವಿವಿಧ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಸುಮಾರು 1,448 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 3.21 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ, (ಏಜನ್ಸೀಸ್).