ಪೊಲೀಸರ ವಿರುದ್ಧ ಗೇಲಿ ಮಾಡಿ ಮಾತನಾಡಿದ ಯುವತಿಯನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯ 
ದೇಶ

"ಹೊಟ್ಟೆ ತಗೊಂಡು ಓಡಲು ಆಗಲ್ಲ, ನನ್ನನ್ನು ಹೇಗೆ ಹಿಡಿಯುತ್ತಾರೆ?" ಪೊಲೀಸರಿಗೆ ಸವಾಲೆಸೆದ ಯುವತಿ; ಕ್ಷಣಾರ್ಧದಲ್ಲೇ ವಶಕ್ಕೆ ಪಡೆದ ಖಾಕಿ! Viral Video

ಪೊಲೀಸರ ಫಿಟ್‌ನೆಸ್ ಗೇಲಿ ಮಾಡಿ ಸವಾಲೆಸೆದ ಯುವತಿಯನ್ನು ಖಾಕಿ ಪಡೆ ಕ್ಷಣಾರ್ಧದಲ್ಲೇ ವಶಕ್ಕೆ ಪಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ದೆಹಲಿಯ ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಪೊಲೀಸ್​ ವ್ಯಾನ್​ನಿಂದ ಕೀಲಿ ಕಳ್ಳತನ ಮಾಡಿ ನಂತರ ಪೊಲೀಸರಲ್ಲಿ ತಗಲಾಕೊಂಡಿರುವ ಯುವತಿಯೊಬ್ಬಳ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ದೆಹಲಿಯ ಜಂತರ್​-ಮಂತರ್​ನಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗ ವಿರೋಧಿ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ಭಾಗವಹಿಸಿದ್ದು, ಪೊಲೀಸರ ವ್ಯಾನ್​ನ ಕೀಲಿ ಕಳ್ಳತನ ಮಾಡಿದ್ದಾಗಿ ಇಕೆ ಹೇಳಿದ್ದಾಳೆ. ಈ ಮಾತನ್ನು ಕೇಳುತ್ತಲೇ, ತಕ್ಷಣ ಇಕೆಯನ್ನು ಸುತ್ತುವರಿದ ಮಾಧ್ಯಮಗಳ ಜೊತೆ ಇಕೆ ಮಾತನಾಡಲು ಶುರುವಿಟ್ಟಿದ್ದಾಳೆ.

ನಾನು, ದೆಹಲಿ ಪೊಲೀಸರು ಬಂಧಿಸರಿಂದ ಬಂಧನಕ್ಕೊಳಗಾಗಿದ್ದ ಪ್ರತಿಭಟನಾಕಾರರಿದ್ದ ಬಸ್​ನ ಕೀಲಿಯನ್ನು ಕದ್ದು ಬಂದಿದ್ದೇನೆಂದು ಹೇಳಿದ್ದಾಳೆ. ಈಗ ನಿಮ್ಮನ್ನು ಪೊಲೀಸರು ಬಂಧಿಸಿದರೆ ನಿವೇನು ಮಾಡುತ್ತೀರಾ? ಎಂಬ ಪ್ರಶ್ನೆಗೆ, ನೀವು ದೆಹಲಿ ಪೊಲೀಸರನ್ನು ನೋಡಿದ್ದಿರಾ, ಮಡಿಕೆ ರೀತಿಯ ಹೊಟ್ಟೆಯನ್ನು ಇಟ್ಟುಕೊಂಡು ಅವರಿಗೆ ಓಡಲು ಆಗುವುದಿಲ್ಲ, ಇನ್ನು ನನ್ನನ್ನು ಹೇಗೆ ಹಿಡಿಯುತ್ತಾರೆಂದು ಬಾಡಿ ಶೆಮಿಂಗ್​ ಮಾಡಿದ್ದಾರೆ.

ಅವರು ನನ್ನನ್ನು ಹಿಡಿಯಲು ಬಂದರೆ, ನಾನು ಓಡಿ ಹೋಗುತ್ತೇನೆ. ಅವರಿಗೆ ಒಂದು 50 ನಿಮಿಷ ಓಡಲು ವಾರಗಳೇ ಬೇಕು ಎಂದು ಅಪಹಾಸ್ಯ ಮಾಡಿದ್ದಾಳೆ. ನಮ್ಮ ಪೊಲೀಸರಿಗೆ ಫಿಟ್ನೆಸ್​ ಬಗ್ಗೆ ಮಾಹಿತಿಯೇ ಇಲ್ಲ, ಹೊಟ್ಟೆ ತಗೊಂಡು ಬಂದು ಬಿಡುತ್ತಾರೆ ಎಂದು ಜೋರಾಗಿ ನಗುತ್ತಾ, ತನ್ನನ್ನು ಹಿಡಿಯಲು ಇವರಿಂದೆಲ್ಲಾ ಆಗುವ ಮಾತಲ್ಲ ಎಂದಿದ್ದಾಳೆ.

ಆದರೆ, ಆಕೆ ಮಾತು ಮುಗಿಸುವಷ್ಟರಲ್ಲಿ ಕೆಲ ಪೊಲೀಸರು ಅಲ್ಲಿಗೆ ಆಗಮಿಸಿ, ಆ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ ಆ ಯುವತಿಯು ನನ್ನನ್ನು ಏಕೆ ಬಂಧಿಸುತ್ತಿದ್ದರಿ, ನಾನು ಕೇವಲ ಮಾತನಾಡುತ್ತಿದ್ದೆ. ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆಯುತ್ತಿರುವುದನ್ನು ವಿಡಿಯೋನಲ್ಲಿ ಕಾಣಬಹುದಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಯುವತಿಯ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್​ ಸುರಿಮಳೆ ಹರಿದು ಬಂದಿದೆ. ಇದನ್ನೇ ಬಹುಶಃ ಇನ್​​ಸ್ಟಂಟ್​ ಕರ್ಮಾ ಎನ್ನುತ್ತಾರೆಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.

ಇದಕ್ಕೆ ಹೇಳುವುದು ಜೀವನದಲ್ಲಿ ವಿಶ್ವಾಸ ವಿರಬೇಕು, ಆದರೆ ಅತೀಯಾದ ಆತ್ಮವಿಶ್ವಾಸ ಇರಬಾರದೆಂದು ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೊಲೀಸರ ಹೊಟ್ಟೆ ಬಗ್ಗೆ ಮಾತನಾಡುವುದಲ್ಲ, ದಿನಕ್ಕೆ 12-14 ಗಂಟೆ ಜನರಿಗಾಗಿ ಕೆಲಸ ಮಾಡುವ ಜೀವವದು ಎಂದು ಮತ್ತೊಬ್ಬರು ಯುವತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್​).