ಆನೆ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ರಷ್ಯನ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ
- ಜೈಪುರದ ಆನೆ ಚಂಚಲ್ ಸಾವು
- ಆನೆ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ರಷ್ಯನ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ
- ಸುಮ್ಮನೆ ನನ್ನ ಮೇಲೆ ಆರೋಪ ಮಾಡಬೇಡಿ
ಜೈಪುರ್: ಜೈಪುರದಲ್ಲಿ ಫೋಟೊ ಶೂಟ್ನ ತೆವಲಿಗೆ ಚಂಚಲ್ ಎಂಬ ಆನೆ ಮೃತಪಟ್ಟಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದು, ಈಗ ಇದರ ಬಗ್ಗೆ ಆನೆಯ ಫೋಟೊ ತೆಗೆದಿದ್ದ ಫೋಟೊಗ್ರಾಫರ್ ಜೂಲಿಯಾ ಬುರುಲೆವಾ (Julia Buruleva on Elephant Chanchal) ಮೌನ ಮುರಿದಿದ್ದಾರೆ.
ಏನಿದು ಗುಲಾಬಿ ಆನೆ ಕತೆ?
2025 ರ ಡಿಸೆಂಬರ್ನಲ್ಲಿ ರಷ್ಯಾದ ಟ್ರಾವೆಲಿಂಗ್ ಫೋಟೊಗ್ರಾಫರ್ ಆದ ಜೂಲಿಯಾ ಬುರುಲೆವಾ ಜೈಪುರಕ್ಕೆ ಆಗಮಿಸಿದ್ದಾಗ, ಪಿಂಕ್ ಸಿಟಿ ಎಂಬ ಥೀಮ್ನಲ್ಲಿ ಆನೆಯೊಂದಕ್ಕೆ ಗುಲಾಬಿ ಬಣ್ಣ ಬಳಿದು ಅದರ ಮೇಲೆ ಒಬ್ಬ ಮಾಡೆಲ್ನ್ನು ಕುಳಿಸಿ ಫೋಟೊಶೂಟ್ ನಡೆಸಲಾಗಿತ್ತು. ಆದರೆ ಈ ಫೋಟೊಶೂಟ್ ನಡೆದ ಕೆಲವೇ ತಿಂಗಳಲ್ಲಿ ಆನೆ ಚಂಚಲ್ ಮೃತ ಪಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಜೂಲಿಯಾ ಬುರುಲೆವಾ ಏನಂತಾರೆ?
ಆನೆ ಚಂಚಲ್ ಸಾವಿಗೆ ಪ್ರತಿಕ್ರಿಯೆ ನೀಡಿರುವ ರಷ್ಯನ್ ಫೋಟೊಗ್ರಾಫರ್ ಜೂಲಿಯಾ ಬುರುಲೆವಾ, ಚಂಚಲ್ ಸಾವನ್ನಪ್ಪಿರುವ ಸುದ್ದಿ ತಿಳಿಯಿತು, ನನಗೆ ಇದರಿಂದ ತುಂಬಾ ದಃಖವಾಗಿದೆ.
ಆದರೆ ಜನ ಈ ಆನೆಯ ಸಾವಿಗೆ ನಾನೇ ಕಾರಣ ಎಂದು ಬಿಂಬಿಸುತ್ತಿರುವದು ನೋವಿನ ಸಂಗತಿಯಾಗಿದೆ. ನಾನು ಈ ಫೋಟೊಶೂಟ್ ಮಾಡಲು ಬೇಕಾದ ಎಲ್ಲಾ ಅನುಮತಿಗಳನ್ನು ಪಡೆದಿದ್ದೆ ಹಾಗೆಯೇ ಆನೆಗೆ ನೈಸರ್ಗಿಕ ಬಣ್ಣವನ್ನೇ ಬಳಿಯಲಾಗಿತ್ತು. ಫೋಟೊಶೂಟ್ ಕೇವಲ 10 ನಿಮಿಷದಲ್ಲಿ ಮುಗಿದ್ದಿದ್ದು, ಕೂಡಲೇ ಚಂಚಲ್ಗೆ ಸ್ನಾಹವನ್ನು ಮಾಡಿಸಲಾಗಿತ್ತು ಎಂದು ಜೂಲಿಯಾ ಬುರುಲೆವಾ ತಿಳಿಸಿದ್ದಾರೆ.
ಚಂಚಲ್ಗೆ ಈಗಾಗಲೇ 65-70 ವರ್ಷ ವಯಸ್ಸಾಗಿತ್ತೆಂದು ಆನೆ ಮಾಲೀಕ ಸಾದಿಕ್ ಖಾನ್ ಹೇಳಿದ್ದಾರೆ. ಆದ್ದರಿಂದ ಇದೊಂದು ವಯೋಸಹಜ ಸಾವೆಂದು ಅನ್ನಿಸುತ್ತದೆ. ನನಗೆ ಈ ಸಾವಿನ ರೂವಾರಿ ಎಂದು ಬಿಂಬಿಸುವುದನ್ನು ನಿಲ್ಲಿಸಿ ಎಂದು ಅವರು ಕೇಳಿ ಕೊಂಡಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಜೂಲಿಯಾ ಬುರುಲೆವಾ ಅವರ ಹೇಳಿಕೆ ಹೊರ ಬೀಳುತ್ತಿದಂತೆ ನೆಟ್ಟಿಗರು ಫೋಟೊಗ್ರಾಫರ್ ಮೇಲೆ ಮುಗಿ ಬಿದ್ದಿದ್ದಾರೆ. ಮಾಡುದನ್ನಲ್ಲವನ್ನು ಮಾಡಿ ಈಗ ಸ್ಪಷ್ಟಣೆ ಕೊಡಬೇಡ ಎಂದು ಒಬ್ಬರು ಹೇಳಿದರೆ, ಚಂಚಲ್ ಸಾವಿಗೆ ನೀನೇ ಕಾರಣ ಎಂದು ಇನ್ನೊಬ್ಬರು ಹೇಳಿದ್ದಾರೆ. ನೀನು ವೈಲ್ಡ್ ಲೈಫ್ ಪ್ರೊಟೆಕ್ಷನ್ ನಿಯಮವನ್ನು ಮೀರಿದ್ದಿಯಾ, ಹೀಗಾಗಿ ಇಲ್ಲಿ ಸಮಜಾಯಿಶಿ ಕೊಡುವುದೇ ಬೇಡ ಎಂದು ಮತ್ತೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ,(ಏಜನ್ಸೀಸ್).