ಆನೆ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ರಷ್ಯನ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ 
ದೇಶ

ಆನೆ ಚಂಚಲ್ ಸಾವಿಗೆ ನಾನು ಹೊಣೆಯಲ್ಲ: ಮೌನ ಮುರಿದ ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ! Julia Buruleva on Elephant Chanchal

ಪ್ರಮುಖ ಮುಖ್ಯಾಂಶಗಳು

  • ಜೈಪುರದ ಆನೆ ಚಂಚಲ್ ಸಾವು
  • ಆನೆ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ರಷ್ಯನ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ
  • ಸುಮ್ಮನೆ ನನ್ನ ಮೇಲೆ ಆರೋಪ ಮಾಡಬೇಡಿ
ಜೈಪುರ್: ಜೈಪುರದಲ್ಲಿ ಫೋಟೊ ಶೂಟ್​ನ ತೆವಲಿಗೆ ಚಂಚಲ್​ ಎಂಬ ಆನೆ ಮೃತಪಟ್ಟಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದು, ಈಗ ಇದರ ಬಗ್ಗೆ ಆನೆಯ ಫೋಟೊ ತೆಗೆದಿದ್ದ ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ (Julia Buruleva on Elephant Chanchal) ಮೌನ ಮುರಿದಿದ್ದಾರೆ.

ಏನಿದು ಗುಲಾಬಿ ಆನೆ ಕತೆ?

2025 ರ ಡಿಸೆಂಬರ್​ನಲ್ಲಿ ರಷ್ಯಾದ ಟ್ರಾವೆಲಿಂಗ್ ಫೋಟೊಗ್ರಾಫರ್​ ಆದ ಜೂಲಿಯಾ ಬುರುಲೆವಾ ಜೈಪುರಕ್ಕೆ ಆಗಮಿಸಿದ್ದಾಗ, ಪಿಂಕ್ ಸಿಟಿ ಎಂಬ ಥೀಮ್​ನಲ್ಲಿ ಆನೆಯೊಂದಕ್ಕೆ ಗುಲಾಬಿ ಬಣ್ಣ ಬಳಿದು ಅದರ ಮೇಲೆ ಒಬ್ಬ ಮಾಡೆಲ್​ನ್ನು ಕುಳಿಸಿ ಫೋಟೊಶೂಟ್​ ನಡೆಸಲಾಗಿತ್ತು. ಆದರೆ ಈ ಫೋಟೊಶೂಟ್​ ನಡೆದ ಕೆಲವೇ ತಿಂಗಳಲ್ಲಿ ಆನೆ ಚಂಚಲ್​ ಮೃತ ಪಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಜೂಲಿಯಾ ಬುರುಲೆವಾ ಏನಂತಾರೆ?

ಆನೆ ಚಂಚಲ್​ ಸಾವಿಗೆ ಪ್ರತಿಕ್ರಿಯೆ ನೀಡಿರುವ ರಷ್ಯನ್​ ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ, ಚಂಚಲ್​ ಸಾವನ್ನಪ್ಪಿರುವ ಸುದ್ದಿ ತಿಳಿಯಿತು, ನನಗೆ ಇದರಿಂದ ತುಂಬಾ ದಃಖವಾಗಿದೆ.
ಆದರೆ ಜನ ಈ ಆನೆಯ ಸಾವಿಗೆ ನಾನೇ ಕಾರಣ ಎಂದು ಬಿಂಬಿಸುತ್ತಿರುವದು ನೋವಿನ ಸಂಗತಿಯಾಗಿದೆ. ನಾನು ಈ ಫೋಟೊಶೂಟ್​ ಮಾಡಲು ಬೇಕಾದ ಎಲ್ಲಾ ಅನುಮತಿಗಳನ್ನು ಪಡೆದಿದ್ದೆ ಹಾಗೆಯೇ ಆನೆಗೆ ನೈಸರ್ಗಿಕ ಬಣ್ಣವನ್ನೇ ಬಳಿಯಲಾಗಿತ್ತು. ಫೋಟೊಶೂಟ್​ ಕೇವಲ 10 ನಿಮಿಷದಲ್ಲಿ ಮುಗಿದ್ದಿದ್ದು, ಕೂಡಲೇ ಚಂಚಲ್​ಗೆ ಸ್ನಾಹವನ್ನು ಮಾಡಿಸಲಾಗಿತ್ತು ಎಂದು ಜೂಲಿಯಾ ಬುರುಲೆವಾ ತಿಳಿಸಿದ್ದಾರೆ.
ಚಂಚಲ್​ಗೆ ಈಗಾಗಲೇ 65-70 ವರ್ಷ ವಯಸ್ಸಾಗಿತ್ತೆಂದು ಆನೆ ಮಾಲೀಕ ಸಾದಿಕ್​ ಖಾನ್​ ಹೇಳಿದ್ದಾರೆ. ಆದ್ದರಿಂದ ಇದೊಂದು ವಯೋಸಹಜ ಸಾವೆಂದು ಅನ್ನಿಸುತ್ತದೆ. ನನಗೆ ಈ ಸಾವಿನ ರೂವಾರಿ ಎಂದು ಬಿಂಬಿಸುವುದನ್ನು ನಿಲ್ಲಿಸಿ ಎಂದು ಅವರು ಕೇಳಿ ಕೊಂಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಜೂಲಿಯಾ ಬುರುಲೆವಾ ಅವರ ಹೇಳಿಕೆ ಹೊರ ಬೀಳುತ್ತಿದಂತೆ ನೆಟ್ಟಿಗರು ಫೋಟೊಗ್ರಾಫರ್​ ಮೇಲೆ ಮುಗಿ ಬಿದ್ದಿದ್ದಾರೆ. ಮಾಡುದನ್ನಲ್ಲವನ್ನು ಮಾಡಿ ಈಗ ಸ್ಪಷ್ಟಣೆ ಕೊಡಬೇಡ ಎಂದು ಒಬ್ಬರು ಹೇಳಿದರೆ, ಚಂಚಲ್​ ಸಾವಿಗೆ ನೀನೇ ಕಾರಣ ಎಂದು ಇನ್ನೊಬ್ಬರು ಹೇಳಿದ್ದಾರೆ. ನೀನು ವೈಲ್ಡ್​ ಲೈಫ್​ ಪ್ರೊಟೆಕ್ಷನ್​ ನಿಯಮವನ್ನು ಮೀರಿದ್ದಿಯಾ, ಹೀಗಾಗಿ ಇಲ್ಲಿ ಸಮಜಾಯಿಶಿ ಕೊಡುವುದೇ ಬೇಡ ಎಂದು ಮತ್ತೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ,(ಏಜನ್ಸೀಸ್​).