ಮೃತ ಯುವತಿ ಅರ್ಚನಾ ಚೌಧರಿ 
ದೇಶ

4 ವರ್ಷದ ಸಂಬಂಧ, ಮದುವೆಯಾಗುವಂತೆ ಸಹೋದ್ಯೋಗಿಗೆ ಬೆದರಿಕೆ; Hyderabadನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ

  • ಹೈದರಾಬಾದ್‌ನ ಮೈಂಡ್‌ಸ್ಪೇಸ್​ನ ಉದ್ಯೋಗಿ ಆತ್ಮಹತ್ಯೆ.

  • ಉತ್ತರಾಖಂಡ ಮೂಲದ ಸಹೋದ್ಯೋಗಿಯೊಂದಿಗೆ 4 ವರ್ಷದ ಸಂಬಂಧ.

  • ಮದುವೆಗೆ ನಿರಾಕರಿಸಿದಕ್ಕೆ ಬೇಸರ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಬೆನ್ನಲ್ಲೇ ನೇಣಿಗೆ ಶರಣು.

ಮದುವೆ ಮಾಡಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ಸಹೋದ್ಯೋಗಿಗೆ ಬೆದರಿಕೆ ಬೆನ್ನಲ್ಲೇ, 29 ವರ್ಷದ ಯುವತಿಯೊಬ್ಬರು ಭಾನುವಾರ ಮುಂಜಾನೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ

ಹೈದರಾಬಾದ್‌ನ ಮೈಂಡ್‌ಸ್ಪೇಸ್ ಐಟಿ ಕಾರಿಡಾರ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ 29 ವರ್ಷದ ಉತ್ತರ ಪ್ರದೇಶ ಮೂಲದ ಆರ್ಚನಾ ಚೌಧರಿ ಮೃತ ಯುವತಿ ಎಂದು ಗುರುತಿಸಲಾಗಿದೆ.

ಮದುವೆಯಾಗು ಎಂದು ಒತ್ತಾಯ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅರ್ಚನಾ ಅವರು ಅವರು ಹೈದರಾಬಾದ್‌ನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಹೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತರಾಖಂಡ ಮೂಲದ ಆಕೆಯ ಸಹೋದ್ಯೋಗಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು, ಆದರೆ, ಆತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಡಿವೋರ್ಸ್​​ ಕೊಟ್ಟಿದ್ದರು. ಅದರ ಪ್ರಕ್ರಿಯೆ ಇನ್ನೂ ಜರೂರಿನಲ್ಲಿತ್ತು.

ಭಾನುವಾರ ಮುಂಜಾನೆ ಸುಮಾರು 2:30 ರ ಸುಮಾರಿಗೆ, ಆ ವ್ಯಕ್ತಿಯು ಹೈದರಾಬಾದ್ ಹೊರವಲಯದಲ್ಲಿ ತನ್ನ ತಾಯಿಯೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದಾಗ ಆರ್ಚನಾ ವೀಡಿಯೊ ಕರೆ ಮಾಡಿದ್ದಾರೆ. ಈ ವೇಳೆ ಅವರು ಸೀಲಿಂಗ್ ಫ್ಯಾನ್‌ಗೆ ಕಟ್ಟಿದ್ದ ಶಾಲ ಅಥವಾ ಚುನ್ನಿಯನ್ನು ತೋರಿಸಿ, ತನನ್ನು ಮದುವೆಯಾಗುವಂತೆ ಇಲ್ಲದಿದ್ದರೆ ಜೀವ ಕಳೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಯುವತಿಯ ಬೆದರಿಕೆಯ ಬಳಿಕ ಆ ವ್ಯಕ್ತಿ ಪದೇ ಪದೇ ಆರ್ಚನಾಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮುಂಜಾನೆ 5:30 ರ ಸುಮಾರಿಗೆ ಆಕೆಯ ಫ್ಲಾಟ್‌ಗೆ ತಲುಪಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಕ್ಷಣವೇ 'ಡಯಲ್ 112' ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಗಸ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಯುವತಿ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಕ್ಲೂಸ್ ತಂಡವು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ನಂತರ ಆರ್ಚನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.ಸದ್ಯ ಮಾಧಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ಮುನ್ನ ನಡೆದ ಘಟನೆಗಳು, ಅವರ ನಡುವಿನ ಸಂಬಂಧ ಹಾಗೂ ಇತರ ವಿಚಾರಗಳ ತನಿಖೆ ಮುಂದುವರೆಸಿದ್ದಾರೆ, (ಏಜೆನ್ಸೀಸ್).