ಮೆಟ್ರೋ ರೈಲಿನಲ್ಲಿ 'How to Kill Man' (ಪುರುಷರನ್ನು ಕೊಲ್ಲುವುದು ಹೇಗೆ?) ಎಂಬ ಪುಸ್ತಕ ಓದಿದ ಯುವತಿ 
ದೇಶ

ಪುರುಷರನ್ನು ಕೊಲ್ಲುವುದು ಹೇಗೆ? ಮೆಟ್ರೋನಲ್ಲಿ ಪುಸ್ತಕ ಓದುತ್ತಿರುವ ಯುವತಿ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​! How To Kill Men Viral Video

ಪ್ರಮುಖ ಮುಖ್ಯಾಂಶಗಳು

  • ಮೆಟ್ರೋ ರೈಲಿನಲ್ಲಿ 'How to Kill Man' (ಪುರುಷರನ್ನು ಕೊಲ್ಲುವುದು ಹೇಗೆ?) ಎಂಬ ಪುಸ್ತಕ ಓದಿದ ಯುವತಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
  • ವೈರಲ್​ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ವೈರಲ್​: ಒಂದು ಕಡೆ ಪುಣೆಯ ಯುವ ಉದ್ಯಮಿ ಕೇತನ್​ ಅಗರ್​ವಾಲ್​ ಪ್ರಕರಣ ದೇಶದೆಲ್ಲಡೆ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಪುರುಷರನ್ನು ಹೇಗೆ ಕೊಲ್ಲುವುದು (How to Kill Men) ಎಂಬ ಪುಸ್ತಕ ಓದುತ್ತಿರುವ ಮಹಿಳೆ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ ​(How To Kill Men Viral Video) ಆಗುತ್ತಿದೆ.
ಪುಣೆಯಲ್ಲಿ ಮದುವೆಯಾಗಬೇಕಿದ್ದ ಕೇತನ್​ ಅಗರ್​ವಾಲ್​ ಎಂಬಾತನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್​ ಹಾಗೂ ಆಕೆಯ ಪ್ರಿಯಕರ ಚೇತನ್​ ಚೌಧರಿ ಲೋಹಗಡ ಕೋಟೆಯಿಂದ ತಳ್ಳಿ ಕೊಲೆ ಮಾಡಿರುವ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀಶಾಂತ್‌ಗೆ ಬಿಗ್ ರಿಲೀಫ್: ಮಂಡಳಿಗೆ ಕ್ಷಮೆ ಕೇಳಿದ ವೇಗಿ; 3 ವರ್ಷಗಳ ಬ್ಯಾನ್ ಹಿಂಪಡೆದ ಕೇರಳ ಕ್ರಿಕೆಟ್ ಅಸೋಸಿಯೇಷನ್! Sreesanth

ವೈರಲ್​ ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಮೆಟ್ರೋನಲ್ಲಿ ಸಂಚರಿಸುತ್ತಿರುವ ಯುವತಿಯೊಬ್ಬಳು ಪುರುಷರನ್ನು ಹೇಗೆ ಕೊಲ್ಲುವುದು (How to Kill Men) ಎಂಬ ತಲೆಬಹರವಿರುವ ಪುಸ್ತಕವನ್ನು ಓದುತ್ತಿರುವ ವಿಡಿಯೋ ಈಗ ಎಲ್ಲಡೆ ವೈರಲ್​ ಆಗುತ್ತಿದೆ.
ಆದರೆ ಈ ವಿಡಿಯೋವನ್ನು ಯಾವ ಮೆಟ್ರೋವಿನಲ್ಲಿ? ಯಾವ ನಗರದಲ್ಲಿ? ಮತ್ತು ಯಾವ ಸಮಯದಲ್ಲಿ ಸೆರೆಹಿಡಿದಿದ್ದು ಎನ್ನುವುದು ತಿಳಿದುಬಂದಿಲ್ಲ.
ಹಾಗೆಯೇ ಪುಸ್ತಕವನ್ನು ಕೇವಲ ತಲೆಬರಹದ ಆಧಾರಲ್ಲಿ ತೀರ್ಮಾನಿಸುವುದು ತಪ್ಪಾಗುತ್ತದೆ. ಕೆಲವೊಮ್ಮೆ ಪತ್ತೇದಾರಿ ಕಾದಂಬರಿಗಳಿಗೆ ಈ ರೀತಿಯ ಆಕರ್ಷಕ ಹೆಸರನ್ನು ನೀಡುವ ಕಾರಣ ಈ ಪುಸ್ತಕ ಪುರುಷ ಸಂಕುಲ ನಾಶದ ಹುನ್ನಾರ ಎಂದು ಭಾವಿಸುವುದು ತಪ್ಪಾಗುತ್ತದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಕಿವಿ ಮತ್ತು ಕೈ ನೆಟ್ಟಗಾಗಿ ಬಿಟ್ಟಿದೆ. ಅಯ್ಯೋ.. ಗಂಡಸರನ್ನು ಹೇಗೆ ಕೊಲ್ಲಬೇಕು ಎನ್ನುವ ಪುಸ್ತಕ ಕೂಡ ಬಿಡುಗಡೆಯಾಗಿದೆಯೇ? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಆಕೆಯ ಗಂಡನ ಪರಿಚಯವಿದ್ದವರು ದಯಮಾಡಿ ಒಂದು ಎಚ್ಚರಿಕೆ ನೀಡಿಬಿಡಿ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಪುಸ್ತಕ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲೆಂದು ಈ ರೀತಿಯ ತಲೆಬರಹವನ್ನು ನೀಡಿರುತ್ತಾರೆ, ಯಾರು ಹೆದರುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್​).