ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್
ಕೋಲ್ಕತ್ತಾ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್(Mani Shankar Aiyar) ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಂದುತ್ವವನ್ನು ಭ್ರಮನಿರಸನ ಸ್ಥಿತಿಯಲ್ಲಿರುವ ಹಿಂದೂ ಧರ್ಮ ಎಂದು ಹೇಳಿದ್ದಾರೆ.
ಈ ಬಗ್ಗೆ ಕೋಲ್ಕತ್ತಾದಲ್ಲಿ ನಡೆದ ಹಿಂದೂತ್ವದಿಂದ ಹಿಂದೂ ಧರ್ಮಕ್ಕೆ ರಕ್ಷಣೆ ಬೇಕು ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಯ್ಯರ್, ಹಿಂದೂ ನಂಬಿಕೆಯ ಒಳಗೊಳ್ಳುವಿಕೆ ಮತ್ತು ಹಿಂದುತ್ವದ ರಾಜಕೀಯ ಚೌಕಟ್ಟಿನ ನಡುವೆ ಮೂಲಭೂತ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ.
ಹಿಂದುತ್ವವು ಧರ್ಮವಲ್ಲ ಅದು ರಾಜಕೀಯ ಸಿದ್ಧಾಂತ ಎಂದು ಅಯ್ಯರ್ ಹೇಳಿದ್ದಾರೆ. ಹಿಂದುತ್ವದ ಪ್ರತಿಪಾದಕರು ಬಹುಸಂಖ್ಯಾತ ಸಮುದಾಯದೊಳಗೆ ಆಕ್ರಮಣಾಕಾರಿ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಭಾರತದಲ್ಲಿ ಶೇ.80 ರಷ್ಟು ಹಿಂದೂಗಳು ಮತ್ತು ಶೇ.14 ರಷ್ಟು ಮುಸ್ಲಿಮರನ್ನು ಭಯಪಡುವಂತೆ ಮಾಡಲಾಗುತ್ತಿರುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂದುವರೆದು ಮಾತನಾಡಿದ ಅಯ್ಯರ್. ಹಿಂದೂ ಧರ್ಮವನ್ನು ವೈವಿಧ್ಯಮಯ ಚಿಂತನೆಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶಾಲವಾದ, ಪ್ರಾಚೀನ ಆಧ್ಯಾತ್ಮಿಕ ಸಂಪ್ರದಾಯ ಎಂದು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಹಿಂದುತ್ವವು ಚುನಾವಣಾ ಗೆಲ್ಲಲು ಸಜ್ಜುಗೊಳಿಸಿರುವ ವಿನ್ಯಾಸ ಎಂದು ಕಿಡಿಕಾರಿದ್ದಾರೆ.
ಹಿಂದೂ ಧರ್ಮವು ಆತ್ಮವಿಶ್ವಾಸ, ಪ್ರಾಚೀನ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹದ್ದು. ಅದರೆದ, ಹಿಂದುತ್ವವು ಬಹುಸಂಖ್ಯಾತರನ್ನು ನಿರಂತರ ಬೆದರಿಕೆಗೆ ಒಳಪಡಿಸುತ್ತಿದೆ. ಇದು ನಂಬಿಕೆಯ ಬಲಕ್ಕೇ ಅಪಚಾರವಾಗಿದೆ ಎಂದು ಅಯ್ಯರ್ ಟೀಕಿಸಿದ್ದಾರೆ.
ಬಿಜೆಪಿ ತಿರುಗೇಟು
ಕಾಂಗ್ರೆಸ್ ನಾಯಕನ ಹೇಳಿಕೆಗಳು ತಕ್ಷಣವೇ ಪ್ರತಿಕ್ರಿಯಿಸಿದ ಬಿಜೆಪಿ, ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯನ್ನು ಅವಮಾನಿಸುತ್ತಾರೆ ಮತ್ತು ಸಮಾಧಾನದ ರಾಜಕೀಯ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಅಯ್ಯರ್ ಅವರ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷ ಕಠಿಣ ಸ್ಥಿತಿಯಲ್ಲಿರಿಸುವುದು ಇದೇ ಮೊದಲಲ್ಲ, ಹಿಂದಿನ ಹೇಳಿಕೆಗಳನ್ನು ಚುನಾವಣಾ ಸಮಯದಲ್ಲಿ ರಾಜಕೀಯ ವಿರೋಧಿಗಳು ಹೆಚ್ಚಾಗಿ ಬಳಸಿಕೊಂಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷವು ಇನ್ನೂ ಅಧಿಕೃತ ಸ್ಪಷ್ಟೀಕರಣವನ್ನು ನೀಡಿಲ್ಲವಾದರೂ, ಈ ಹೇಳಿಕೆಯು ಜಾತ್ಯತೀತತೆಯ ವ್ಯಾಖ್ಯಾನ ಮತ್ತು ಭಾರತೀಯ ರಾಜಕೀಯದಲ್ಲಿ ಧರ್ಮದ ಪಾತ್ರದ ಕುರಿತು ರಾಷ್ಟ್ರೀಯ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ,(ಏಜೆನ್ಸೀಸ್).