Himachal Student Speech On Ambedkar
- ಯುವ ವ್ಯವಹಾರಗಳ ಸಚಿವಾಲಯದ ವತಿಯಿಂದ ಸಂಸತ್ತಿನಲ್ಲಿ ಕಾರ್ಯಕ್ರಮ ಆಯೋಜನೆ
- ಅಂಬೇಡ್ಕರ್ ಅವರ ಸಮಾನತೆ ಮತ್ತು ನ್ಯಾಯದ ದೃಷ್ಟಿಕೋನದ ಬಗ್ಗೆ ಭಾಷಣ ಕಾರ್ಯಕ್ರಮ
- ಅಂಬೇಡ್ಕರ್ ಮತ್ತು ವಾಜಪೇಯಿಯವರ ಪದ್ಯ ಹೇಳಿ ವೀಕ್ಷಕರ ಗಮನ ಸೆಳೆದ ಅನನ್ಯಾ ನೇಗಿ
ನವದೆಹಲಿ: 'ನಾವು ಭಾರತೀಯರು, ಹಿಂದೂಗಳಲ್ಲ, ಮುಸ್ಲಿಂರಲ್ಲ, ಪಂಜಾಬಿಗಳು, ಸಿಖ್ಖರು, ತಮಿಳರು ಅಲ್ಲ ನಾವು ಭಾರತದ ಪ್ರಜೆಗಳು. ಭಾರತೀಯರು. ಇಂದು ನಾನು ಭಾರತದ ಸಂಸತ್ತಿನಲ್ಲಿ ನಿಂತು ಇತಿಹಾಸದಿಂದ ರೂಪುಗೊಂಡ ರಾಷ್ಟ್ರವನ್ನು ನೋಡುತ್ತಿಲ್ಲ. ಬಿ.ಆರ್. ಅಂಬೇಡ್ಕರ್ರಂತಹ ಮಹಾನ್ ನಾಯಕರ ದೂರದೃಷ್ಟಿಯಿಂದ ರೂಪುಗೊಂಡ ಭಾರತ ರಾಷ್ಟ್ರ' ಹೀಗೆ ಚಟಪಟ ಎಂದು ಮಾತನಾಡಿ, ಪ್ರೇಕ್ಷಕರ, ಕೇಳುಗರ ಮನ ಗೆದ್ದಿದ್ದು ವಿದ್ಯಾರ್ಥಿನಿ ಅನನ್ಯಾ ನೆಗಿ.
ಜೆಪಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಅನನ್ಯಾ ನೇಗಿ, ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯವರು.ನವದೆಹಲಿಯ ಸಂಸತ್ ಭವನದ ಕಾನ್ಸ್ಟಿಟ್ಯೂಷನ್ ಹಾಲ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಮಾತನಾಡಿ ಎಲ್ಲರ ಗಮನವನ್ನು ಸೆಳೆದರು. ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದ್ದಾರೆ.
ಇತಿಹಾಸದಿಂದಲ್ಲ ಅಂಬೇಡ್ಕರ್ರಿಂದ ಭಾರತ
'ಭಾರತದಲ್ಲಿ ವಿವಿಧ ಪ್ರಾಂತ್ಯ. ಸಮುದಾಯ, ವಿಭಿನ್ನ ಹಿನ್ನೆಲೆಯಿಂದ ಬಂದವರು ಇಲ್ಲಿದ್ದಾರೆ. ಹಲವಾರು ಭಾಷೆ ಮಾತನಾಡುವ ಜನರು ಇಲ್ಲಿದ್ದಾರೆ. ಎಲ್ಲರೂ ಪೈಪೋಟಿಗಾಗಿ ನಿಲ್ಲದೆ. ಭಾರತದ ಏಳಿಗೆಗಾಗಿ ಪರಸ್ಪರ ಸಹಕರಿಸಬೇಕು. ಶ್ರಮಿಸಬೇಕು. ನಾವೂ ಹಿಂದೂ ಮುಸ್ಲಿಂ, ಸಿಖ್ ಪಂಜಾಬಿಯಲ್ಲ ನಾವು ಭಾರತೀರು. ಭಾರತವು ಇತಿಹಾಸದಿಂದ ರೂಪುಗೊಂಡಿಲ್ಲ ಬದಲಾಗಿ ಬಾಬಾ ಸಾಹೇಬ್ ಅಂಬೇಡ್ಕರ್ರಂತಹ ಮಹಾನ್ ವ್ಯಕ್ತಿಗಳ ದೂರದೃಷ್ಟಿಯಿಂದ ನಿರ್ಮಾಣವಾದ ರಾಷ್ಟ್ರವಾಗಿದೆ'ಎಂದು ಮಾತನಾಡಿದರು
ವಾಜಪೇಯಿ ಅವರ ಪದ ಹೇಳಿದ ಅನನ್ಯಾ ನೇಗಿ, ತಮ್ಮ ಭಾಷಣದ ಅಂತ್ಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಸಾಲುಗಳಾದ "ಕದಮ್ ಮಿಲಾಕರ್ ಚಲ್ನಾ ಹೋಗಾ"ರನ್ನು ಉಲ್ಲೇಖಿಸಿದರು. ಜೀವನದಲ್ಲಿ ಎಷ್ಟೇ ಕಷ್ಟ ಬರಲಿ. ಕಾರ್ಮೋಡಗಳೇ ಇರಲಿ, ಯಾವುದನ್ನು ಲೆಕ್ಕಿಸದೆ ಸಮಾಜಕ್ಕಾಗಿ ಒಗ್ಗಾಟ್ಟಾಗಿ ದುಡಿಯಬೇಕು. ಯಾವುದೇ ಸಮಸ್ಯೆಯನ್ನು ಸಾಮೂಹಿಕ ಶಕ್ತಿಯಿಂದ ಹೊಡೆದುರುಳಿಸಬೇಕು ಎನ್ನುವುದು ಅವರ ಪದ್ಯದ ಸಾಲುಗಳ ಅರ್ಥವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನನ್ಯಾ ವೈರಲ್
ಅನನ್ಯಾ ಅವರು ಸ್ಪಷ್ಟತೆ ಮತ್ತು ಧೈರ್ಯವಾಗಿ ಗಂಭೀರವಾದ ವಿಚಾರವನ್ನು ಆತ್ಮವಿಶ್ವಾಸದೊಂದಿಗೆ ಭಾಷಣ ಮಂಡಿಸಿದ ರೀತಿಯನ್ನು ಹಲವು ನೆಚ್ಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಎಕ್ಸ್ನಲ್ಲಿ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್)