ನವದೆಹಲಿ: ರೈಲಿನಲ್ಲಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸಿದ್ರೆ ಇನ್ಮುಂದೆ ಭಾರಿ ದಂಡ(Heavy fine) ಬೀಳಲಿದ್ದು, ರೈಲ್ವೆ ಇಲಾಖೆಯೂ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ವಿಧಿಸಲಾಗುತ್ತಿದ್ದ ದಂಡವನ್ನು ದುಪ್ಪಟ್ಟುಗೊಳಿಸಿದೆ. ಮತ್ತು ಮುಂದಿನ ತಿಂಗಳ ಒಂದನೇ ತಾರೀಖಿನಿಂದ ಅದು ಜಾರಿಗೆ ಬರಲಿದೆ ಎಂದು ಭಾನುವಾರ(ಜೂ. 21) ಹೇಳಿದೆ.
ಇದುವರೆಗೆ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ 250 ರೂ. ದಂಡವನ್ನು ಕಟ್ಟಬೇಕಾಗಿತ್ತು. ಆದರೆ ಇನ್ಮುಂದೆ ಅದನ್ನು 500 ರೂ.ಗೆ ಹೆಚ್ಚಿಸಲಾಗಿದೆ. ಇದು ಜುಲೈ 1 ರಿಂದ ಜಾರಿಗೆ ಬರಲಿದೆ. ಟಿಕೆಟ್ರ ಇಲ್ಲದೇ ಪ್ರಯಾಣಿಸಿದ್ರೆ ನೀವು ಪ್ರಯಾಣಿಸಿದ ದೂರದ ಟಿಕೆಟ್ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಪ್ರಯಾಣಿಕನು ಯಾವ ನಿಲ್ದಾಣದಲ್ಲಿ ರೈಲು ಹತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ರೈಲು ಪ್ರಯಾಣ ಪ್ರಾರಂಭವಾದ ನಿಲ್ದಾಣದಿಂದಲೇ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ನೀವು ಬೇರೆಯವರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣಿಸಿದರೆ, ಆ ಟಿಕೆಟ್ ಅಮಾನ್ಯವಾಗುತ್ತದೆ. ಅದಕ್ಕೂ 500 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇನ್ನೂ ಯಾವುದೇ ಪ್ರಯಾಣಿಕರು ಅಥವಾ ಸಣ್ಣ ವ್ಯಾಪಾರಿಗಳು ಅನುಮತಿಯಿಲ್ಲದೆ ರೈಲುಗಳು ಅಥವಾ ನಿಲ್ದಾಣಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದರೆ, 2,000 ರೂ. ದಂಡ ವಿಧಿಸಲಾಗುತ್ತದೆ. - ರೈಲು ನಿಯಮಗಳನ್ನು ಪದೇ-ಪದೇ ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಪುರುಷರು ಮಹಿಳೆಯರಿಗೆ ಮೀಸಲಾದ ಸ್ಥಳ ಮತ್ತು ಕೋಚ್‌ಗಳಲ್ಲಿ ಕುಳಿತರೆ, 2,500 ರೂ. ದಂಡ ವಿಧಿಸಲಾಗುತ್ತದೆ. ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ ಅಥವಾ ನಿಂದಿಸಿದರೆ, ಭಾರೀ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ (ಏಜೆನ್ಸೀಸ್).